AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಮೋದಿಯಿಂದ 64ನೇ ಮನ್ ಕಿ ಬಾತ್, ವಿಶೇಷತೆ ಏನು ಗೊತ್ತಾ?

ನವದೆಹಲಿ: ಕೊರೊನಾ ತಾಯ್ನಾಡು ಚೀನಾದಿಂದ ಇದೀಗ ಇಡೀ ಜಗತ್ತೇ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದೆ. ಅದರಲ್ಲೂ ಭಾರತದ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದ್ದು, ಮತ್ತೆ ಲಾಕ್​ಡೌನ್ ಮುಂದುವರಿದರೆ ಬಡವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದೇಶದ ದೊರೆ ಪಿಎಂ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ‘ಮನ್ ಕಿ ಬಾತ್’ನ 64ನೇ ಎಪಿಸೋಡ್​ಗೆ ಕೌಂಟ್​ಡೌನ್ ಶುರುವಾಗಿದೆ. ಇಂದು ಮತ್ತೆ ಪ್ರಜೆಗಳ ಎದುರು ಪ್ರಧಾನಿ ಹಾಜರ್: ಯೆಸ್, ದೇಶದಲ್ಲಿ ಲಾಕ್​ಡೌನ್ ಘೋಷಣೆಯಾಗಿ ಬರೋಬ್ಬರಿ 1 ತಿಂಗಳೇ […]

ಇಂದು ಮೋದಿಯಿಂದ 64ನೇ ಮನ್ ಕಿ ಬಾತ್, ವಿಶೇಷತೆ ಏನು ಗೊತ್ತಾ?
ಸಾಧು ಶ್ರೀನಾಥ್​
|

Updated on: Apr 26, 2020 | 6:38 AM

Share

ನವದೆಹಲಿ: ಕೊರೊನಾ ತಾಯ್ನಾಡು ಚೀನಾದಿಂದ ಇದೀಗ ಇಡೀ ಜಗತ್ತೇ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದೆ. ಅದರಲ್ಲೂ ಭಾರತದ ಪರಿಸ್ಥಿತಿ ದಿನೇ ದಿನೆ ಬಿಗಡಾಯಿಸುತ್ತಿದ್ದು, ಮತ್ತೆ ಲಾಕ್​ಡೌನ್ ಮುಂದುವರಿದರೆ ಬಡವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ದೇಶದ ದೊರೆ ಪಿಎಂ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಮೂಲಕ ‘ಮನ್ ಕಿ ಬಾತ್’ನ 64ನೇ ಎಪಿಸೋಡ್​ಗೆ ಕೌಂಟ್​ಡೌನ್ ಶುರುವಾಗಿದೆ.

ಇಂದು ಮತ್ತೆ ಪ್ರಜೆಗಳ ಎದುರು ಪ್ರಧಾನಿ ಹಾಜರ್: ಯೆಸ್, ದೇಶದಲ್ಲಿ ಲಾಕ್​ಡೌನ್ ಘೋಷಣೆಯಾಗಿ ಬರೋಬ್ಬರಿ 1 ತಿಂಗಳೇ ಕಳೆದಿದೆ. ಒಂದ್ಕಡೆ ಆರ್ಥಿಕ ಸ್ಥಿತಿ ಮೇಲೆ ಇದು ಭಾರಿ ಪರಿಣಾಮ ಬೀರಿದ್ರೆ, ಮತ್ತೊಂದ್ಕಡೆ ಜನ ಲಾಕ್​ಡೌನ್ ವಿಸ್ತರಣೆ ಆತಂಕದಲ್ಲೇ ದಿನದೂಡ್ತಿದ್ದಾರೆ. ಇಷ್ಟೆಲ್ಲದರ ಮಧ್ಯೆ ಪ್ರಧಾನಿ ಮೋದಿ ದೇಶದ ಜನರಲ್ಲಿ ಆಶಾಭಾವನೆ ಹಾಗೂ ಭರವಸೆ ತುಂಬುವ ಕೆಲಸ ಮಾಡ್ತಾನೇ ಬಂದಿದ್ದಾರೆ.

ಲಾಕ್​ಡೌನ್ ಘೋಷಣೆಯಾದ ನಂತರ ಹಲವಾರು ಬಾರಿ ದೇಶದ ಜನತೆಯನ್ನುದ್ದೇಶಿಸಿ ಚರ್ಚಿಸಿದ್ದಾರೆ. ಇದು ಪ್ರಧಾನಿ ಮೋದಿ ಮನ್‌ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. ‘ಮನ್ ಕಿ ಬಾತ್’ನ 64ನೇ ಎಪಿಸೋಡ್ ಆಗಿದ್ದು, ಲಾಕ್‌ಡೌನ್ ಬಳಿಕ ಇದು ಎರಡನೇಯದ್ದಾಗಿದೆ. ಹಾಗಾದ್ರೆ ಇಂದು ಪ್ರಧಾನಿ ಚರ್ಚಿಸಬಹುದಾದ ವಿಚಾರಗಳನ್ನ ನೋಡೋದಾದ್ರೆ.

ಲಾಕ್​ಡೌನ್ ಮುಂದುವರಿಕೆ? ಲಾಕ್​ಡೌನ್ ಹಿನ್ನೆಲೆಯಲ್ಲಿ ಜನರಿಗೆ ಎದುರಾಗುತ್ತಿರುವ ಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆಯಿದೆ. ಹಾಗೇ ಮತ್ತೊಂದು ಅವಧಿಗೂ ಲಾಕ್​ಡೌನ್ ಮುಂದುವರಿಯುತ್ತಾ ಅನ್ನೋದರ ಬಗ್ಗೆ ಪ್ರಧಾನಿ ಮಾತನಾಡಬಹುದು. ಇನ್ನೊಂದು ಕಡೆ ಲಾಕ್​ಡೌನ್ ಹಿನ್ನೆಲೆ ಜಾರಿಯಲ್ಲಿರುವ ನಿಯಮಗಳಲ್ಲಿ ಮತ್ತಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ.

ಅಕಸ್ಮಾತ್ ಇವತ್ತು ಲಾಕ್​ಡೌನ್ ಭವಿಷ್ಯ ನಿರ್ಧಾರವಾಗದಿದ್ದರೂ, ನಾಳಿನ ಸಿಎಂಗಳ ಸಭೆಯಲ್ಲಿ ಪಕ್ಕಾ ಆಗಲಿದೆ. ಈ ಮಧ್ಯೆ ‘ಕೊರೊನಾ ವಾರಿಯರ್ಸ್’ ಬಗ್ಗೆಯೂ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುವ ಸಾಧ್ಯತೆ ಇದೆ.

ಒಟ್ನಲ್ಲಿ ಇಡೀ ದೇಶದ ಗಮನ ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ‘ಮನ್ ಕಿ ಬಾತ್’ ಮೇಲೆ ನೆಟ್ಟಿದೆ. ಪ್ರಧಾನಿ ಯಾವೆಲ್ಲಾ ವಿಚಾರ ಪ್ರಸ್ತಾಪಿಸಲಿದ್ದಾರೆ. ಮತ್ತೆ ಲಾಕ್​ಡೌನ್ ಮುಂದುವರಿಸುತ್ತಾರಾ..? ಇಲ್ಲ ಲಾಕ್​ಡೌನ್​ಗೆ ಅಂತ್ಯ ಹಾಡಲಿದ್ದಾರಾ ಅನ್ನೋದನ್ನ ಕಾದು ನೋಡಬೇಕಿದೆ.