Atal Setu: ಅಟಲ್ ಸೇತು ಮೇಲೆ ಬಿರುಕು; ಮಹಾರಾಷ್ಟ್ರ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು

"ಸೇತುವೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ ಮತ್ತು ಸರ್ಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ. ಇದು ಅತ್ಯಂತ ದುರದೃಷ್ಟಕರ" ಎಂದು ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ನಾನಾ ಪಟೋಲೆ ಹೇಳಿದ್ದಾರೆ.

Atal Setu: ಅಟಲ್ ಸೇತು ಮೇಲೆ ಬಿರುಕು; ಮಹಾರಾಷ್ಟ್ರ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ತಿರುಗೇಟು
ಅಟಲ್ ಸೇತು ಸೇತುವೆಯನ್ನು ಪರಿಶೀಲಿಸಿದ ನಾನಾ ಪಟೋಲೆ
Follow us
|

Updated on: Jun 21, 2024 | 8:48 PM

ಮುಂಬೈ: ದಕ್ಷಿಣ ಮುಂಬೈನಿಂದ ನವಿ ಮುಂಬೈಗೆ ಸಂಪರ್ಕಿಸುವ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ (MTHL) ಎಂದೂ ಕರೆಯಲ್ಪಡುವ ಅತುಲ್ ಸೇತು (Atal Setu) ಸಮುದ್ರ ಸೇತುವೆಯ ನಿರ್ಮಾಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ (Nana Patole) ಅವರು ಉದ್ಘಾಟನೆಯಾದ 3 ತಿಂಗಳೊಳಗೆ ಅಟಲ್ ಸೇತು ರಸ್ತೆಯ ಮೇಲಿನ ಬಿರುಕುಗಳನ್ನು ತೋರಿಸಿದ್ದಾರೆ.

ಅಟಲ್ ಸೇತು ಸೇತುವೆಯನ್ನು ಪರಿಶೀಲಿಸಿದ ನಾನಾ ಪಟೋಲೆ, ಸೇತುವೆಯ ನಿರ್ಮಾಣ ಗುಣಮಟ್ಟ ಕಳಪೆಯಾಗಿದೆ ಮತ್ತು ರಸ್ತೆಯ ಒಂದು ಭಾಗವು ಒಂದು ಅಡಿಯಷ್ಟು ಕುಸಿದಿದೆ ಎಂದು ಹೇಳಿದ್ದಾರೆ. ಕೈಯಲ್ಲಿ ಮರದ ಕೋಲು ಹಿಡಿದು ಅವರು ಅದನ್ನು ಬಿರುಕುಗಳ ನಡುವಿನ ಅಂತರದಲ್ಲಿ ಆ ಕಾಲನ್ನು ಹಾಕಿ ಎಲ್ಲರಿಗೂ ತೋರಿಸಿದ್ದಾರೆ.

ಇದನ್ನೂ ಓದಿ: PM Modi: ಜಮ್ಮು ಕಾಶ್ಮೀರದ ಶತ್ರುಗಳಿಗೆ ಪಾಠ ಕಲಿಸಲು ಸರ್ಕಾರ ಹಿಂಜರಿಯುವುದಿಲ್ಲ; ಪ್ರಧಾನಿ ಮೋದಿ ಭರವಸೆ

“ಅಟಲ್ ಸೇತು ಸೇತುವೆ ಉದ್ಘಾಟನೆಯಾದ 3 ತಿಂಗಳೊಳಗೆ ಬಿರುಕು ಬಿಟ್ಟಿದೆ. ನವಿ ಮುಂಬೈ ಬಳಿ ಅರ್ಧ ಕಿಲೋಮೀಟರ್ ಉದ್ದದ ರಸ್ತೆಯು ಒಂದು ಅಡಿಯಿಂದ ಕುಸಿದಿದೆ. ರಾಜ್ಯವು ಎಂಟಿಎಚ್‌ಎಲ್‌ಗಾಗಿ 18,000 ಕೋಟಿ ರೂ. ಖರ್ಚು ಮಾಡಿದೆ” ಎಂದು ನಾನಾ ಪಟೋಲೆ ಹೇಳಿದ್ದಾರೆ.

ಆದರೆ, ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ ಹಾಗೂ ಯೋಜನೆಯ ನೋಡಲ್ ಏಜೆನ್ಸಿಯಾಗಿರುವ ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ಎಂಎಂಆರ್‌ಡಿಎ) ಬಿರುಕು ಬಿಟ್ಟಿರುವುದು ಅಟಲ್ ಸೇತು ಸೇತುವೆಯ ಮೇಲೆ ಅಲ್ಲ, ನವಿ ಮುಂಬೈನ ಉಲ್ವೆಯಿಂದ ಬರುವ ರಸ್ತೆಯಲ್ಲಿ ಎಂದು ಹೇಳಿದೆ. “MTHL ಸೇತುವೆಯ ಮೇಲಿನ ಬಿರುಕುಗಳ ಬಗ್ಗೆ ವದಂತಿಗಳು ಹರಡುತ್ತಿವೆ. ಈ ಬಿರುಕುಗಳು ಸೇತುವೆಯ ಮೇಲೆ ಉಂಟಾಗಿರುವುದಲ್ಲ. ಉಲ್ವೆಯಿಂದ ಮುಂಬೈ ಕಡೆಗೆ MTHL ಅನ್ನು ಸಂಪರ್ಕಿಸುವ ಮಾರ್ಗದ ರಸ್ತೆಯಲ್ಲಿದೆ ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ” ಎಂದು MMRDA ಹೇಳಿದೆ.

ಇದನ್ನೂ ಓದಿ: Atal setu: ಹೊಸದಾಗಿ ನಿರ್ಮಿಸಲಾಗಿದ್ದ ಅಟಲ್ ಸೇತುನಿಂದ ಜಿಗಿದ ಮಹಿಳೆ, ಶೋಧ ಕಾರ್ಯಾಚರಣೆ ಮುಂದುವರೆದಿದೆ

“ಅಟಲ್ ಸೇತು ವಿಷಯದಲ್ಲಿ ನಿಂದಿಸುವುದನ್ನು ನಿಲ್ಲಿಸಿ” ಎಂದು ಬಿಜೆಪಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಅಟಲ್ ಸೇತು ಎಂದೂ ಕರೆಯಲ್ಪಡುವ 21.8 ಕಿಲೋಮೀಟರ್ ಉದ್ದದ ಸಮುದ್ರ ಸೇತುವೆಯನ್ನು ಈ ವರ್ಷದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಭಾರತ ದೇಶದ ಅತಿ ಉದ್ದದ ಸಮುದ್ರ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇದನ್ನು 17,840 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ.

17,840 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ 6 ಪಥಗಳ ಸೇತುವೆಯು ಸಮುದ್ರದ ಮೇಲೆ 16.5 ಕಿ.ಮೀ ವಿಭಾಗದೊಂದಿಗೆ 21.8 ಕಿ.ಮೀ ಉದ್ದವಿದೆ. ಈ ಬಿರುಕು ಬಿಟ್ಟಿರುವುದು ಸರ್ವಿಸ್ ರಸ್ತೆಯಲ್ಲಿ. ಇದು ಮುಖ್ಯ ಸೇತುವೆಯ ಸಂಪರ್ಕ ಭಾಗವಾಗಿದೆ. ಕರಾವಳಿ ಭಾಗಕ್ಕೆ ರಸ್ತೆ ಇಲ್ಲದ ಕಾರಣ ಕೊನೇ ಕ್ಷಣದಲ್ಲಿ ತಾತ್ಕಾಲಿಕ ಸಂಪರ್ಕ ಮಾರ್ಗವಾಗಿ ಸರ್ವೀಸ್ ರಸ್ತೆ ನಿರ್ಮಿಸಲಾಗಿತ್ತು. ಇವುಗಳಲ್ಲಿ ಸಣ್ಣಪುಟ್ಟ ಬಿರುಕುಗಳಾಗಿದ್ದು, ಅವುಗಳನ್ನು ಭರ್ತಿ ಮಾಡಲಾಗುತ್ತಿದ್ದು, ಇಂದೇ ದುರಸ್ತಿ ಮಾಡಲಾಗುವುದು. ಇದರಿಂದಾಗಿ ಯಾವುದೇ ಸಂಚಾರ ವ್ಯತ್ಯಯ ಉಂಟಾಗಿಲ್ಲ” ಎಂದು ಅಟಲ್ ಸೇತು ಪ್ರಾಜೆಕ್ಟ್ ಹೆಡ್ ಕೈಲಾಶ್ ಗಣತ್ರ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ