AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳ ಗ್ರಹದ ಕುಳಿಗಳಿಗೆ ಭೌತಶಾಸ್ತ್ರಜ್ಞ ದೇವೇಂದ್ರ ಲಾಲ್ ಮತ್ತು ಉತ್ತರ ಪ್ರದೇಶ, ಬಿಹಾರದ ಪಟ್ಟಣಗಳ ಹೆಸರು

2021 ರಲ್ಲಿ ಇಲ್ಲಿನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ (PRL) ಕೆಲಸ ಮಾಡುವ ಸಂಶೋಧಕರನ್ನು ಒಳಗೊಂಡಿರುವ ವಿಜ್ಞಾನಿಗಳ ತಂಡವು ಆವಿಷ್ಕಾರವನ್ನು ಮಾಡಿದ್ದು, ಈ ತಿಂಗಳ ಆರಂಭದಲ್ಲಿ ಆ ಹೆಸರನ್ನು ಅಂತರರಾಷ್ಟ್ರೀಯ ಸಂಸ್ಥೆ ಅನುಮೋದಿಸಿತು

ಮಂಗಳ ಗ್ರಹದ ಕುಳಿಗಳಿಗೆ ಭೌತಶಾಸ್ತ್ರಜ್ಞ ದೇವೇಂದ್ರ ಲಾಲ್ ಮತ್ತು ಉತ್ತರ ಪ್ರದೇಶ, ಬಿಹಾರದ ಪಟ್ಟಣಗಳ ಹೆಸರು
ಮಂಗಳ
ರಶ್ಮಿ ಕಲ್ಲಕಟ್ಟ
|

Updated on: Jun 12, 2024 | 9:01 PM

Share

ಅಹಮದಾಬಾದ್ ಜೂನ್ 12: ಮಂಗಳನ (Mars) ಮೇಲ್ಮೈಯಲ್ಲಿ ಇತ್ತೀಚೆಗೆ ಪತ್ತೆಯಾದ ಮೂರು ಕುಳಿಗಳಿಗೆ (Craters) ಹೆಸರಾಂತ ಕಾಸ್ಮಿಕ್ ಕಿರಣ ಭೌತಶಾಸ್ತ್ರಜ್ಞ ದಿವಂಗತ ದೇವೇಂದ್ರ ಲಾಲ್ (Devendra Lal) ಮತ್ತು ಉತ್ತರ ಭಾರತದ ಮುರ್ಸಾನ್ ಮತ್ತು ಹಿಲ್ಸಾ ಪಟ್ಟಣಗಳ ಹೆಸರಿಡಲಾಗಿದೆ. 2021 ರಲ್ಲಿ ಇಲ್ಲಿನ ಭೌತಿಕ ಸಂಶೋಧನಾ ಪ್ರಯೋಗಾಲಯದಲ್ಲಿ (PRL) ಕೆಲಸ ಮಾಡುವ ಸಂಶೋಧಕರನ್ನು ಒಳಗೊಂಡಿರುವ ವಿಜ್ಞಾನಿಗಳ ತಂಡವು ಆವಿಷ್ಕಾರವನ್ನು ಮಾಡಿದ್ದು, ಈ ತಿಂಗಳ ಆರಂಭದಲ್ಲಿ ಆ ಹೆಸರನ್ನು ಅಂತರರಾಷ್ಟ್ರೀಯ ಸಂಸ್ಥೆ ಅನುಮೋದಿಸಿತು. ಮೂರು ಕುಳಿಗಳು ರೆಡ್ ಪ್ಲಾನೆಟ್‌ನ ಥಾರ್ಸಿಸ್ ಜ್ವಾಲಾಮುಖಿ ಪ್ರದೇಶದಲ್ಲಿವೆ ಎಂದು ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಘಟಕವಾದ ಅಹಮದಾಬಾದ್ ಮೂಲದ ಪಿಆರ್‌ಎಲ್ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಥಾರ್ಸಿಸ್ ಮಂಗಳ ಗ್ರಹದ ಪಶ್ಚಿಮ ಗೋಳಾರ್ಧದಲ್ಲಿ ಸಮಭಾಜಕದ ಬಳಿ ಕೇಂದ್ರೀಕೃತವಾಗಿರುವ ವಿಶಾಲವಾದ ಜ್ವಾಲಾಮುಖಿ ಪ್ರಸ್ಥಭೂಮಿಯಾಗಿದೆ. ಈ ಪ್ರದೇಶವು ಸೌರವ್ಯೂಹದ ಅತಿದೊಡ್ಡ ಜ್ವಾಲಾಮುಖಿಗಳಿಗೆ ನೆಲೆಯಾಗಿದೆ. ಪಿಆರ್‌ಎಲ್​​ನ ಶಿಫಾರಸಿನ ಮೇರೆಗೆ, ಗ್ರಹಗಳ ವ್ಯವಸ್ಥೆಯ ನಾಮಕರಣಕ್ಕಾಗಿ ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (IAU) ವರ್ಕಿಂಗ್ ಗ್ರೂಪ್ ಜೂನ್ 5 ರಂದು ಕುಳಿಗಳಿಗೆ “ಲಾಲ್” ಕುಳಿ, “ಮುರ್ಸನ್” ಕುಳಿ ಮತ್ತು “ಹಿಲ್ಸಾ” ಕುಳಿ ಎಂದು ಹೆಸರಿಸಲು ಅನುಮೋದಿಸಿದೆ ಎಂದು ಪಿಆರ್‌ಎಲ್ ನಿರ್ದೇಶಕ ಅನಿಲ್ ಭಾರದ್ವಾಜ್ ಹೇಳಿದ್ದಾರೆ.

ಮುರ್ಸಾನ್ ಮತ್ತು ಹಿಲ್ಸಾ ಕ್ರಮವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿರುವ ಪಟ್ಟಣಗಳ ಹೆಸರುಗಳಾಗಿವೆ.

ಹೊಸದಾಗಿ ಪತ್ತೆಯಾದ ಲಾಲ್ ಕುಳಿಯಲ್ಲಿ ನೀರು ದೊಡ್ಡ ಪ್ರಮಾಣದ ಕೆಸರನ್ನು ಚಲಿಸಿದೆ ಎಂಬುದಕ್ಕೆ ಬಲವಾದ ಪುರಾವೆಗಳನ್ನು ಒದಗಿಸಿದೆ. ಮಂಗಳವು ಒಮ್ಮೆ ತೇವವಾಗಿತ್ತು ಮತ್ತು ಅದರ ಮೇಲ್ಮೈಯಲ್ಲಿ ನೀರು ಹರಿದಿದೆ ಎಂದು ದೃಢಪಡಿಸಿದೆ ಎಂದು ಹೇಳಿಕೆ ತಿಳಿಸಿದೆ.

ಲಾಲ್ ಕುಳಿ 65 ಕಿಮೀ ಅಗಲವಿದೆ ಮತ್ತು ಮೂರರಲ್ಲಿ ದೊಡ್ಡದಾಗಿದೆ. ಪ್ರೊಫೆಸರ್ ದೇವೇಂದ್ರ ಲಾಲ್ ಅವರು 1972-1983 ರ ಅವಧಿಯಲ್ಲಿ PRL ನ ನಿರ್ದೇಶಕರಾಗಿದ್ದರು. ಮುರ್ಸಾನ್ ಮತ್ತು ಹಿಲ್ಸಾ ಕುಳಿಗಳು ಸುಮಾರು 10 ಕಿಮೀ ಅಗಲವಿದೆ ಮತ್ತು ಲಾಲ್ ಕುಳಿಯ ರಿಮ್‌ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿದೆ ಎಂದು ಪಿಆರ್‌ಎಲ್ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ಜೋಶಿಮಠ ಇನ್ನುಮುಂದೆ ಜ್ಯೋತಿರ್ಮಠ; ಉತ್ತರಾಖಂಡ ಸರ್ಕಾರದಿಂದ ಮರುನಾಮಕರಣ

“ಮಂಗಳ ಗ್ರಹದ ಥಾರ್ಸಿಸ್ ಜ್ವಾಲಾಮುಖಿ ಪ್ರದೇಶದಲ್ಲಿನ ಲಾಲ್ ಕುಳಿಯ ಸಂಪೂರ್ಣ ಪ್ರದೇಶವು ಲಾವಾದಿಂದ ಆವೃತವಾಗಿದೆ. ಈ ಕುಳಿಯಲ್ಲಿ ಲಾವಾವನ್ನು ಹೊರತುಪಡಿಸಿ ಇತರ ವಸ್ತುಗಳ ಭೌಗೋಳಿಕ ಪುರಾವೆಗಳಿವೆ, ಕುಳಿಯ ಉಪಮೇಲ್ಮೈಯಲ್ಲಿ 45-ಮೀ ದಪ್ಪದ ಸೆಡಿಮೆಂಟರಿ ನಿಕ್ಷೇಪವಿದೆ ಎಂದು ಪಿಆರ್‌ಎಲ್  ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ