AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೆಡಿಟ್​ ಕಾರ್ಡ್ ವ್ಯವಹಾರದ ಮೇಲೆ ಹುಟ್ಟಿದೆ ಭರವಸೆ; ಬ್ಯಾಂಕ್​ಗಳು ಮಾಹಿತಿ ಕೇಳುವ ಪ್ರಮಾಣದಲ್ಲಿ ಹೆಚ್ಚಳ

ಸಾಲುಸಾಲು ಹಬ್ಬಗಳು, ಲಾಕ್​ಡೌನ್ ನಂತರ ಒಮ್ಮಲೇ ಜನರು ಅಗತ್ಯ ವಸ್ತುಗಳ ಖರೀದಿಗೆ ಮರಳಿದ್ದರಿಂದ ಬೇಡಿಕೆ ಪ್ರಮಾಣ ಜಾಸ್ತಿಯಾಗಿ, ವ್ಯವಹಾರ ಹೆಚ್ಚಾಯಿತು. ಹಾಗಾಗಿ ಅಕ್ಟೋಬರ್​ನಲ್ಲಿ ಹಲವು ಆರ್ಥಿಕ ಸೂಚಕಗಳಲ್ಲಿ ಅಭಿವೃದ್ಧಿ ಕಂಡುಬಂತು.

ಕ್ರೆಡಿಟ್​ ಕಾರ್ಡ್ ವ್ಯವಹಾರದ ಮೇಲೆ ಹುಟ್ಟಿದೆ ಭರವಸೆ; ಬ್ಯಾಂಕ್​ಗಳು ಮಾಹಿತಿ ಕೇಳುವ ಪ್ರಮಾಣದಲ್ಲಿ ಹೆಚ್ಚಳ
ಕ್ರೆಡಿಟ್ ಕಾರ್ಡ್ (ಸಾಂದರ್ಭಿಕ ಚಿತ್ರ)
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 30, 2020 | 6:18 PM

ಮುಂಬೈ: ಕ್ರೆಡಿಟ್ ಕಾರ್ಡ್ ಬಳಕೆದಾರರ ಬಗ್ಗೆ ಮಾಹಿತಿ ಕೇಳಿ, ಬ್ಯಾಂಕ್​ಗಳು ಸಲ್ಲಿಸಿದ ಕೋರಿಕೆಯ ಪ್ರಮಾಣ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ ಎಂದು ಕ್ರೆಡಿಟ್​ ಇನ್​ಫಾರ್ಮೇಶನ್​ ಸಂಸ್ಥೆಯಲ್ಲೊಂದಾದ ಟ್ರಾನ್ಸ್‌ಯುನಿಯನ್ ಸಿಬಿಲ್ ತಿಳಿಸಿದೆ.

ಇದು ಕೊವಿಡ್​-19 ಲಾಕ್​ಡೌನ್ ಸಡಿಲಗೊಂಡ ಬಳಿಕ ಗ್ರಾಹಕರ ಆರ್ಥಿಕ ಚಟುವಟಿಕೆ ಬಹುಮಟ್ಟಿಗೆ ಸುಧಾರಿಸಿದೆ ಎನ್ನುವುದರ ದ್ಯೋತಕ ಎಂದು ಸಿಬಿಲ್ ಅಭಿಪ್ರಾಯಪಟ್ಟಿದೆ.

ಸಾಲುಸಾಲು ಹಬ್ಬಗಳು, ಲಾಕ್​ಡೌನ್ ನಂತರ ಒಮ್ಮಲೇ ಜನರು ಅಗತ್ಯ ವಸ್ತುಗಳ ಖರೀದಿಗೆ ಮರಳಿದ್ದರಿಂದ ಬೇಡಿಕೆ ಪ್ರಮಾಣ ಜಾಸ್ತಿಯಾಗಿ, ವ್ಯವಹಾರ ಹೆಚ್ಚಾಯಿತು. ಹಾಗಾಗಿ ಅಕ್ಟೋಬರ್​ನಲ್ಲಿ ಹಲವು ಆರ್ಥಿಕ ಸೂಚಕಗಳಲ್ಲಿ ಅಭಿವೃದ್ಧಿ ಕಂಡುಬಂತು ಎಂದು ಕಂಪನಿ ವಿವರಿಸಿದೆ.

ಮಾರುಕಟ್ಟೆಯಲ್ಲಿ ಆರ್ಥಿಕ ಚಟುವಟಿಕೆ ಇದೇ ರೀತಿ ಮುಂದುವರಿಯುವ ಬಗ್ಗೆ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇಡಿಕೆಯ ಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಕೂಡ ಹೇಳಿದ್ದಾರೆ.

ಹಿಸ್ಟರಿ ಪರಿಶೀಲನೆ ಬ್ಯಾಂಕ್​ಗಳು ಹಾಗೂ ಹಣಕಾಸು ಸಂಸ್ಥೆಗಳು ಬಳಕೆದಾರರ ಕ್ರೆಡಿಟ್ ಕಾರ್ಡ್​ ಹಿಸ್ಟರಿಯನ್ನು ಪರಿಶೀಲಿಸುವ ಪ್ರಮಾಣ ಏಪ್ರಿಲ್​ನಲ್ಲಿ ಕುಸಿದಿತ್ತು. 2019ರ ಏಪ್ರಿಲ್​ ಅವಧಿಗೆ ಹೋಲಿಸಿದರೆ ಈ ಬಾರಿ ಏಪ್ರಿಲ್​ನಲ್ಲಿ ಶೇ.5ರಷ್ಟು ಕಡಿಮೆಯಾಗಿತ್ತು. ಆದರೆ ಜುಲೈ ವೇಳೆಗೆ ಅದರಲ್ಲಿ ಸುಧಾರಣೆ ಕಂಡುಬಂತು. 2019ರ ಜುಲೈನಲ್ಲಿ ಇದ್ದ ಕ್ರೆಡಿಟ್ ಕಾರ್ಡ್​ ಪರಿಶೀಲನೆಯ ಪ್ರಮಾಣಕ್ಕೆ ಹೋಲಿಸಿದರೆ 2020ರಲ್ಲಿ ಇದು ಶೇ. 61ರಷ್ಟು ಹೆಚ್ಚಾಗಿತ್ತು. ಅಕ್ಟೋಬರ್​ನಲ್ಲಿ ಒಮ್ಮೆಲೆ ಈ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ಅಂದರೆ ಕಳೆದ ಅವಧಿಗಿಂತ ಶೇ.106ರಷ್ಟು ಅಧಿಕಗೊಂಡಿದೆ.

ಲಾಕ್​ಡೌನ್​ ನಿರ್ಬಂಧ ತೆರವುಗೊಳಿಸಿದ ನಂತರ ಕ್ರೆಡಿಟ್ ಕಾರ್ಡ್​ ವಿಚಾರಣೆ ಪ್ರಮಾಣದಲ್ಲೂ ಚೇತರಿಕೆ ಕಾಣುತ್ತಿರುವುದು ಆಶಾದಾಯಕ ಬೆಳವಣಿಗೆ. ಕೊರೊನಾ ಸೋಂಕಿನ ಭೀತಿಯಿಂದ ಹಲವರು ನಗದು ಮುಟ್ಟಲು ಹೆದರುತ್ತಿದ್ದು ಡಿಜಿಟಲ್​ ಪಾವತಿ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಕಾರ್ಡ್​ಗಳ ಮೂಲಕ ಮಾಡುವ ವ್ಯವಹಾರದ ಮೇಲೆ ಜನರಲ್ಲಿ ನಿಧಾನವಾಗಿ ಭರವಸೆ ಮೂಡುತ್ತಿದೆ ಎಂದು ಸಿಬಿಲ್ ತಿಳಿಸಿದೆ.

ಇದನ್ನೂ ಓದಿ: ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕಿಂಗ್​ ಲೈಸೆನ್ಸ್​: ಆರ್​ಬಿಐ ಕ್ರಮ ಸಮರ್ಥಿಸಿಕೊಂಡ ತಜ್ಞರ ಸಮಿತಿ ಸದಸ್ಯ

Published On - 6:18 pm, Mon, 30 November 20

ಸಿಎಸ್​ಕೆ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರೊಮಾರಿಯೊ ಶೆಫರ್ಡ್
ಸಿಎಸ್​ಕೆ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ರೊಮಾರಿಯೊ ಶೆಫರ್ಡ್
ಈ ಸೀಸನ್​ನ 7ನೇ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ಈ ಸೀಸನ್​ನ 7ನೇ ಅರ್ಧಶತಕ ಸಿಡಿಸಿದ ವಿರಾಟ್ ಕೊಹ್ಲಿ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ವಿಜಯಪುರಕ್ಕೆ ಯತ್ನಾಳ್ ನೀಡಿರುವ ಕೊಡುಗೆ ಏನು? ಶಿವಾನಂದ ಪುತ್ರ
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಥೂ...ಛೀ..ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಕನ್ನಡದ ಬಗ್ಗೆ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ; ಗಾಯಕನ ವಿರುದ್ಧ ಎಫ್​ಐಆರ್
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ಪಿಒಕೆಯಲ್ಲಿ ಸ್ಥಳೀಯರಿಗೆ ಪಾಕ್ ಸೇನೆಯಿಂದ ಶಸ್ತ್ರಾಸ್ತ್ರ ತರಬೇತಿ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ನನ್ನ ಪತಿ ಮತ್ತು ಯತ್ನಾಳ್ ನಡುವಿನ ಜಗಳ ಅವರವರ ವೈಯಕ್ತಿಕ ವಿಚಾರ: ವೀಣಾ
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ಅರ್ ವಿ ರೋಡ್-ಬೊಮ್ಮಸಂದ್ರ ಪ್ರಯಾಣ ಸಮಯ ಅರ್ಧದಷ್ಟು ಕಡಿಮೆ!
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ನೀವು ಸುಮ್ಮನಿದ್ದರೆ ಅದೇ ದೊಡ್ಡ ಸೇವೆ: ಜಮೀರ್​ಗೆ ಜೋಶಿ ಟಾಂಗ್
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!
ಮಾಹಿತಿ ಕೊಡದೆ ಕ್ಷೇತ್ರಕ್ಕೆ ಬರ್ತೀರಿ: ಸಚಿವರಿಗೆ ಕೈ ಕಾರ್ಯಕರ್ತ ಕ್ಲಾಸ್​​!