5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ!

ಸಣ್ಣ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಕೇವಲ 5 ಬಸ್ಕಿ ಹೊಡೆಯುವ ಶಿಕ್ಷೆಯೇ? ಎಂದು ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ!
5 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದವನಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ!
TV9kannada Web Team

| Edited By: Sushma Chakre

Nov 25, 2022 | 4:39 PM

ಲಕ್ನೋ: 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ (Rape) ನಡೆಸಿದ ಕಾಮುಕನನ್ನು ಆ ಮಗುವಿನ ಅಪ್ಪ-ಅಮ್ಮ ಪಂಚಾಯಿತಿಯ ಮುಂದೆ ತಂದು ನಿಲ್ಲಿಸಿದ್ದರು. ಆ ಆರೋಪಿಯ ವಿಚಾರಣೆ ನಡೆಸಿದ ಪಂಚಾಯಿತಿ ಸಿಬ್ಬಂದಿ ಊರಿನವರ ಮುಂದೆ ಆ ವ್ಯಕ್ತಿಗೆ 5 ಬಾರಿ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಆತ ಮುಖದ ಮೇಲೆ ಬಟ್ಟೆ ಹಾಕಿಕೊಂಡು ಬಸ್ಕಿ ಹೊಡೆದ ನಂತರ ಆತನನ್ನು ಬಿಟ್ಟು ಕಳುಹಿಸಿದ್ದಾರೆ. ಈ ಘಟನೆ ಬಿಹಾರದ (Bihar) ನವಾಡ ಜಿಲ್ಲೆಯಲ್ಲಿ ನಡೆದಿದೆ.

ಸಣ್ಣ ಮಗುವಿನ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ಕೇವಲ 5 ಬಸ್ಕಿ ಹೊಡೆಯುವ ಶಿಕ್ಷೆಯೇ? ಎಂದು ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ನ್ಯಾಯ ಪಂಚಾಯಿತಿಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 ವರ್ಷದ ಮಗುವಿಗೆ ಚಾಕೊಲೇಟ್‌ಗಳನ್ನು ಕೊಡಿಸುವುದಾಗಿ ನಂಬಿಸಿ, ತನ್ನ ಕೋಳಿ ಫಾರಂಗೆ ಕರೆದೊಯ್ದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಆ ವ್ಯಕ್ತಿಯನ್ನು ಹಿಡಿದು ಗ್ರಾಮಸಭೆ ಅಥವಾ ಪಂಚಾಯತ್ ಮುಂದೆ ಹಾಜರುಪಡಿಸಿದಾಗ ಹಿರಿಯರು ಅವನನ್ನು ಪೊಲೀಸರಿಗೆ ಒಪ್ಪಿಸದಿರಲು ನಿರ್ಧರಿಸಿದ್ದಾರೆ. ಆತನನ್ನು ಪೊಲೀಸರಿಗೆ ಹಿಡಿದು ಕೊಟ್ಟರೆ ಊರಿನ ಮರ್ಯಾದೆ ಹೋಗುತ್ತದೆ ಎಂದು ತೀರ್ಮಾನಿಸಿದ ಅವರು ತಾವೇ ಶಿಕ್ಷೆ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ, ಜನರ ಮುಂದೆ ಆತ 5 ಬಾರಿ ಬಸ್ಕಿ ಹೊಡೆಯಬೇಕೆಂದು ಶಿಕ್ಷೆ ನೀಡಿದ್ದಾರೆ. ಇನ್ನೂ ವಿಚಿತ್ರವೆಂದರೆ, ಆತ ಆ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿಲ್ಲ. ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಕ್ಕೆ 5 ಬಾರಿ ಬಸ್ಕಿ ಹೊಡೆಸಲಾಗಿದೆ. ಆತ ನಿರಪರಾಧಿ ಎಂದು ಪಂಚಾಯಿತಿ ತೀರ್ಪು ನೀಡಿದೆ.

ಇದನ್ನೂ ಓದಿ: Shocking News: ರಾಜಸ್ಥಾನ- ಪಾಕಿಸ್ತಾನದ ಗಡಿಯಲ್ಲಿ ಮಾತು ಬಾರದ, ಕಿವಿ ಕೇಳದ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಈ ವೀಡಿಯೊ ವೈರಲ್ ಆದ ನಂತರ ಇದು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ. ಅನೇಕರು ಇದನ್ನು ಗ್ರಾಮೀಣ ಭಾರತದಲ್ಲಿ ಪುರುಷ ಪ್ರಧಾನ ವ್ಯವಸ್ಥೆಯ ತೀರ್ಮಾನ ಎಂದು ಟೀಕಿಸಿದ್ದಾರೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada