ನವದೆಹಲಿ: ದೆಹಲಿಯ ಶಾಹೀನ್ ಬಾಗ್‌ನಲ್ಲಿರುವ ಮನೆಯೊಂದರಿಂದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) 97 ಕೆಜಿಗೂ ಹೆಚ್ಚು ಹೆರಾಯಿನ್ ಮತ್ತು ಇತರ ಮಾದಕ ವಸ್ತುಗಳನ್ನು (ಡ್ರಗ್ಸ್) ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ ಹೆರಾಯಿನ್ ಅಫ್ಘಾನಿಸ್ತಾನದಿಂದ (Afghanistan) ಬಂದಿದೆ ಎನ್ನಲಾಗಿದೆ. ಪಾಕಿಸ್ತಾನಿ ಕಳ್ಳಸಾಗಣೆದಾರರ ಸಹಾಯದಿಂದ ಅಂತಾರಾಷ್ಟ್ರೀಯ ಹೆರಾಯಿನ್ ದಂಧೆಯನ್ನು (heroin Scam) ಭೇದಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ವರ್ಷದ ಅತಿ ದೊಡ್ಡ ದಂಧೆ ಎಂದು ಕರೆದಿರುವ ಎನ್‌ಸಿಬಿ ಅಧಿಕಾರಿಗಳಿಗೆ ಡ್ರಗ್ಸ್ ಬಗ್ಗೆ ಸುಳಿವು ಸಿಕ್ಕಿದ್ದು, ಶಾಹೀನ್ ಬಾಗ್‌ನಲ್ಲಿ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ. ಈ ತಂಡವು ಮನೆಯಲ್ಲಿದ್ದ 50 ಕೆಜಿ ಹೆರಾಯಿನ್, 47 ಕೆಜಿ ಮಾದಕ ದ್ರವ್ಯ ಮತ್ತು 30 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಎನ್‌ಸಿಬಿ ಉಪ ಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್, ಡ್ರಗ್‌ಗಳನ್ನು ಟ್ರಾವೆಲ್ ಬ್ಯಾಗ್‌ಗಳು, ಬ್ಯಾಕ್‌ಪ್ಯಾಕ್‌ಗಳು ಮತ್ತು ಸೆಣಬಿನ ಚೀಲಗಳಲ್ಲಿ ಸಂಗ್ರಹಿಸಲಾಗಿತ್ತು. ದಾಳಿ ವೇಳೆ ವಶಪಡಿಸಿಕೊಂಡ ಹಣವನ್ನು ಹವಾಲಾ ಮಾರ್ಗಗಳ ಮೂಲಕ ಪಡೆದಿರುವ ಶಂಕೆ ಇದೆ. ಹೆರಾಯಿನ್ ಅನ್ನು ಫ್ಲಿಪ್‌ಕಾರ್ಟ್‌ನ ಪ್ಯಾಕ್‌ಗಳಲ್ಲಿ ಹಾಕಲಾಗಿತ್ತು. ನಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಸಹ ಬಂಧಿಸಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಶಪಡಿಸಿಕೊಂಡ ಡ್ರಗ್ಸ್ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 300 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಯು 40 ವರ್ಷದ ಉದ್ಯಮಿಯಾಗಿದ್ದು, ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಮಾದಕವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಎಂದು ತನಿಖಾ ತಂಡ ತಿಳಿಸಿದೆ.
ಆರೋಪಿಯು ಚಿಕ್ಕ ಪ್ರಿಂಟಿಂಗ್ ಅಂಗಡಿಯನ್ನು ಹೊಂದಿದ್ದು, ಶಾಹೀನ್ ಬಾಗ್‌ನಲ್ಲಿ ಡ್ರಗ್ಸ್ ಮತ್ತು ಹಣವನ್ನು ಸಂಗ್ರಹಿಸಿಡಲು ಮತ್ತು ಬಚ್ಚಿಡಲು ಬಳಸುತ್ತಿದ್ದ. ಪ್ರಮುಖ ಆರೋಪಿಗಳು ಬೇರೆ ದೇಶಗಳಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆರೋಪಿಗಳು ಭಾರತ-ಅಫ್ಘಾನ್ ಸಿಂಡಿಕೇಟ್‌ನ ಭಾಗವಾಗಿದ್ದು, ಅವರು ನೆಲ ಮತ್ತು ಜಲ ಗಡಿಗಳ ಮೂಲಕ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಾರೆ ಎಂದು ಸಿಂಗ್ ಹೇಳಿದ್ದಾರೆ. ಅವರು ಇತರ ಸರಕುಗಳೊಂದಿಗೆ ಹೆರಾಯಿನ್ ಅನ್ನು ಮರೆಮಾಡಿ, ಸಾಗಿಸುತ್ತಿದ್ದರು. ಮಸಾಲೆಗಳು, ಹಣ್ಣುಗಳು, ಜವಳಿ ಮತ್ತು ಇತರ ಸರಕುಗಳ ನಡುವೆ ಡ್ರಗ್ಸ್ ಇಟ್ಟು ಸಾಗಿಸಲಾಗುತ್ತಿತ್ತು.
ಇದನ್ನೂ ಓದಿ: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪ್ರಭಾಕರ್ ಸೇಲ್ ಸಾವು; ವಕೀಲರಿಂದ ಮಾಹಿತಿ
ಪಂಜಾಬ್ನ ಫಿರೋಜ್ಪುರ್ ಗಡಿಯಲ್ಲಿ ₹200 ಕೋಟಿ ಮೌಲ್ಯದ ಹೆರಾಯಿನ್ ವಶ ಪಡಿಸಿದ ಬಿಎಸ್ಎಫ್