ಬಿಹಾರ ರಾಜ್ಯವು ಈಗ ಮಾವೋವಾದಿಗಳಿಂದ ಮುಕ್ತವಾಗಿದೆ -CRPF ಮಹಾನಿರ್ದೇಶಕ ಕುಲದೀಪ್ ಸಿಂಗ್

"ನಕ್ಸಲ್ ಪ್ರಾಬಲ್ಯ ಪ್ರದೇಶವಾಗಿದ್ದ ಜಾರ್ಖಂಡ್‌ನ ಬುದ್ಧ ಪಹಾಡ್ ಅನ್ನು ಮುಕ್ತಗೊಳಿಸಲಾಗಿದೆ. ಹೆಲಿಕಾಪ್ಟರ್ ಸಹಾಯದಿಂದ ಪಡೆಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಪಡೆಗಳಿಗಾಗಿ ಶಾಶ್ವತ ಶಿಬಿರವನ್ನು ಸ್ಥಾಪಿಸಲಾಗಿದೆ ಎಂದು ಕುಲದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ.

ಬಿಹಾರ ರಾಜ್ಯವು ಈಗ ಮಾವೋವಾದಿಗಳಿಂದ ಮುಕ್ತವಾಗಿದೆ -CRPF ಮಹಾನಿರ್ದೇಶಕ ಕುಲದೀಪ್ ಸಿಂಗ್
ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮಹಾನಿರ್ದೇಶಕ ಕುಲದೀಪ್ ಸಿಂಗ್
Follow us
TV9 Web
| Updated By: ಆಯೇಷಾ ಬಾನು

Updated on:Sep 21, 2022 | 11:26 PM

ಬಿಹಾರ ರಾಜ್ಯವು ಈಗ ಮಾವೋವಾದಿಗಳಿಂದ ಮುಕ್ತವಾಗಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಸಿಆರ್‌ಪಿಎಫ್ ಅಧಿಕಾರಿ, ಕೆಲವು ಮಾವೋವಾದಿಗಳು ಸುಲಿಗೆ ಗ್ಯಾಂಗ್‌ಗಳ ರೂಪದಲ್ಲಿ ಕೆಲವು ಕಡೆ ಅಸ್ತಿತ್ವವನ್ನು ಹೊಂದಿದ್ದರು. ಆದರೆ ಪ್ರಸ್ತುತ ಬಿಹಾರದಲ್ಲಿ ಅವರ ಗುಂಪು ಪ್ರಾಬಲ್ಯ ಸಾಧಿಸುವ ಯಾವುದೇ ಪ್ರದೇಶವಿಲ್ಲ ಎಂದು ತಿಳಿಸಿದರು.

ಈ ವರ್ಷದ ಏಪ್ರಿಲ್‌ನಿಂದ ಪ್ರಾರಂಭವಾದ ಮೂರು ವಿಶೇಷ ಕಾರ್ಯಾಚರಣೆಗಳಾದ ‘ಆಪರೇಷನ್ ಆಕ್ಟೋಪಸ್’, ‘ಆಪರೇಷನ್ ಥಂಡರ್‌ಸ್ಟಾರ್ಮ್’ ಮತ್ತು ‘ಆಪರೇಷನ್ ಬುಲ್‌ಬುಲ್’ ಮೂಲಕ, ಭದ್ರತಾ ಪಡೆಗಳು ಜಾರ್ಖಂಡ್-ಛತ್ತೀಸ್‌ಗಢ ಗಡಿಯಲ್ಲಿ ಬುರ್ಹಾ ಪಹಾಡ್ ಅನ್ನು ಬಂಡುಕೋರರ ನಿಯಂತ್ರಣದಿಂದ ಮುಕ್ತಗೊಳಿಸಿವೆ ಎಂದು ಕುಲದೀಪ್ ಸಿಂಗ್ ಹೇಳಿದರು.

ಈ ಥಂಡರ್‌ಸ್ಟ್ರೋಮ್‌ನಡಿ 2022ರರ ಎಪ್ರಿಲ್ ತಿಂಗಳಿನಿಂದ ಇಲ್ಲೀವರೆಗೆ ಚತ್ತೀಸಘಡದಲ್ಲಿ 7, ಜಾರ್ಖಂಡ್ 4, ಮಧ್ಯಪ್ರದೇಶದಲ್ಲಿ ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ. 578 ಮಾವೋವಾದಿಗಳು ಶರಣಾಗಿದ್ದಾರೆ ಹಾಗೂ ಬಂಧಿಸಲಾಗಿದೆ. ಇದನ್ನೂ ಓದಿ: ದೇಶದಲ್ಲಿ ಸೆಮಿಕಂಡಕ್ಟರ್ ಅಭಿವೃದ್ಧಿ ಮತ್ತು ಡಿಸ್ ಪ್ಲೇ ಉತ್ಪಾದನೆಗೆ ಪೂರಕ ವ್ಯವಸ್ಥೆ ಯೋಜನೆಗೆ ಕೇಂದ್ರ ಸಂಪುಟ ಅಸ್ತು

“ನಕ್ಸಲ್ ಪ್ರಾಬಲ್ಯ ಪ್ರದೇಶವಾಗಿದ್ದ ಜಾರ್ಖಂಡ್‌ನ ಬುದ್ಧ ಪಹಾಡ್ ಅನ್ನು ಮುಕ್ತಗೊಳಿಸಲಾಗಿದೆ. ಹೆಲಿಕಾಪ್ಟರ್ ಸಹಾಯದಿಂದ ಪಡೆಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಪಡೆಗಳಿಗಾಗಿ ಶಾಶ್ವತ ಶಿಬಿರವನ್ನು ಸ್ಥಾಪಿಸಲಾಗಿದೆ. ಇದನ್ನು ಮೂರು ವಿಭಿನ್ನ ಕಾರ್ಯಾಚರಣೆಗಳ ಅಡಿಯಲ್ಲಿ ಮಾಡಲಾಗಿದೆ” ಎಂದರು.

ಎಡಪಂಥೀಯ ಉಗ್ರವಾದ ಘಟನೆಗಳು ಇದೀಗ ಅತ್ಯಂತ ಕಡಿಮೆಯಾಗಿದೆ. 2009ರಲ್ಲಿ 2258 ಪ್ರಕರಣಗಳು ವರದಿಯಾಗಿತ್ತು. ಅಂದರೆ ಸೇಕಡಾ 77ರಷ್ಟು ಎಡಫಂಥೀಯ ಅಥವಾ ನಕ್ಸಲ್ ಉಗ್ರವಾದ ಘಟನೆಗಳು ನಡೆದಿತ್ತು. ಇದೀಗ ಈ ಸಂಖ್ಯೆ 509ಕ್ಕೆ ಇಳಿದಿದೆ. ನಕ್ಸಲ್ ದಾಳಿಯಿಂದ ಆಗುತ್ತಿದ್ದ ಸಾವಿನ ಪ್ರಮಾಣ ಇದೀಗ ಶೇಕಡಾ 85 ರಷ್ಟು ಕಡಿಮೆಯಾಗಿದೆ ಎಂದು ಕುಲದೀಪ್ ಸಿಂಗ್ ಮಾಹಿತಿ ನೀಡಿದ್ರು.

ಈ ಸುದ್ದಿಯನ್ನು ಇಂಗ್ಲಿಷ್​ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:24 pm, Wed, 21 September 22

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’