ಪುದುಚೇರಿ ಮಹಿಳೆಗೆ 5.1 ಕೋಟಿ ರೂ. ವಂಚನೆ; 5 ರಾಜ್ಯಗಳ 10 ಜನರ ಬಂಧನ

ಪುದುಚೇರಿಯಲ್ಲಿ ನಕಲಿ ವ್ಯವಹಾರ ಯೋಜನೆಯ ನೆಪದಲ್ಲಿ ಪುದುಚೇರಿ ಮಹಿಳೆಗೆ 5.1 ಕೋಟಿ ರೂ. ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಜನರನ್ನು ಬಂಧನ ಮಾಡಲಾಗಿದೆ. ಅವರಿಂದ 2.48 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.ಆರೋಪಿ ವಾಟ್ಸಾಪ್ ಪ್ರೊಫೈಲ್ ಬಳಸಿ ಸಂತ್ರಸ್ತೆಯ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ (MD)ರಂತೆ ನಟಿಸಿ ಹಣವನ್ನು ವರ್ಗಾಯಿಸುವಂತೆ ಒತ್ತಾಯಿಸಿದ್ದ.

ಪುದುಚೇರಿ ಮಹಿಳೆಗೆ 5.1 ಕೋಟಿ ರೂ. ವಂಚನೆ; 5 ರಾಜ್ಯಗಳ 10 ಜನರ ಬಂಧನ
Police Recovering Money

Updated on: Jun 03, 2025 | 6:27 PM

ಪುದುಚೇರಿ, ಜೂನ್ 3: ಮಹಿಳಾ ಉದ್ಯೋಗಿಯೊಬ್ಬರಿಗೆ 5.1 ಕೋಟಿ ರೂ. ವಂಚಿಸಿದ ವಾಟ್ಸಾಪ್ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ (Karnataka), ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಹಲವು ರಾಜ್ಯಗಳ 10 ಜನರನ್ನು ಪುದುಚೇರಿ ಸೈಬರ್ ಅಪರಾಧ ಪೊಲೀಸರು ಬಂಧಿಸಿದ್ದಾರೆ. ವಾಟ್ಸಾಪ್ ಪ್ರೊಫೈಲ್ ಬಳಸಿ ಸಂತ್ರಸ್ತೆಯ ಕಂಪನಿಯ ಎಂಡಿಯಂತೆ ನಟಿಸಿ, ತುರ್ತು ವ್ಯವಹಾರ ಯೋಜನೆಯ ನೆಪದಲ್ಲಿ ಹಣವನ್ನು ವರ್ಗಾಯಿಸುವಂತೆ ವಂಚಿಸಿದ್ದಾರೆ. ಪಶ್ಚಿಮ ಬಂಗಾಳ ಮತ್ತು ಕೇರಳದ ಬ್ಯಾಂಕುಗಳಿಂದ 2.48 ಲಕ್ಷ ರೂ. ವಂಚಿಸಿದ್ದಾರೆ.

ದೂರಿನ ಪ್ರಕಾರ, ಸಂತ್ರಸ್ತೆಗೆ ಎಂಡಿ ಪ್ರೊಫೈಲ್ ಫೋಟೋ ಇರುವ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿದೆ. ಅದು ಎಂಡಿಯ ಹೊಸ ನಂಬರ್ ಎಂದು ನಂಬಿ ಅವರು ಸಂಭಾಷಣೆಯಲ್ಲಿ ತೊಡಗಿದ್ದಾರೆ. ಸರ್ಕಾರಿ ಸಭೆಯಲ್ಲಿ ತಾನು ಇದ್ದೇನೆಂದೂ, ಹೊಸ ಯೋಜನೆಗೆ ತುರ್ತಾಗಿ ಹಣದ ಅಗತ್ಯವಿದೆಯೆಂದೂ ವಂಚಕ ಹೇಳಿಕೊಂಡಿದ್ದ. ಆತನ ಮಾತು ನಂಬಿ, ಸಂತ್ರಸ್ತೆ ಕಂಪನಿಯ ಖಾತೆಯಿಂದ ಒದಗಿಸಲಾದ ಬ್ಯಾಂಕ್ ವಿವರಗಳಿಗೆ 5.1 ಕೋಟಿ ರೂ.ಗಳನ್ನು ವರ್ಗಾಯಿಸಿದಳು. ವಹಿವಾಟಿನ ನಂತರವೇ ಅನುಮಾನ ಹುಟ್ಟಿಕೊಂಡಿತು. ಕೊನೆಗೆ ಆಕೆಗೆ ತಾನು ಮೋಸ ಹೋಗಿದ್ದೇನೆಂದು ಆಕೆಗೆ ಅರಿವಾಯಿತು.

ಇದನ್ನೂ ಓದಿ: Operation Chakra V: ಸೈಬರ್ ಅಪರಾಧಿಗಳ ವಿರುದ್ಧ 19 ಕಡೆ ಸಿಬಿಐ ಕಾರ್ಯಾಚರಣೆ, 6 ಮಂದಿ ಬಂಧನ

ಇದನ್ನೂ ಓದಿ
ಅಸ್ಸಾಂನ ಸಿಲ್ಚಾರ್​​ನಲ್ಲಿ 132 ವರ್ಷಗಳ ದಾಖಲೆ ಮುರಿದ ಮಳೆ
ಈ ವಾರಾಂತ್ಯದಲ್ಲಿ ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ
ಚೀನಾ ಬ್ರಹ್ಮಪುತ್ರ ನದಿ ತಡೆದರೆ ಭಾರತಕ್ಕೇನು ಹಾನಿ?
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ

ಪೊಲೀಸರ ಆರಂಭಿಕ ತನಿಖೆಗಳಲ್ಲಿ 1.8 ಕೋಟಿ ರೂ.ಗಳನ್ನು ಕೇರಳದಲ್ಲಿರುವ ಆಕ್ಸಿಸ್ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನು ಸಜಿತ್ ಎಂಬಾತ ನಿರ್ವಹಿಸುತ್ತಿದ್ದರು, ನಂತರ ಅವರನ್ನು ಬಂಧಿಸಲಾಯಿತು. ಇನ್ನೊಂದು ವಿಶೇಷ ತಂಡವು ತನಿಖೆಯನ್ನು ವಿಸ್ತರಿಸಿತು. ಅವರು ಕರ್ನಾಟಕದಿಂದ ಓಂಕಾರ್ ನಾಥ್, ತೆಲಂಗಾಣದ ರಾಘವೇಂದ್ರ ಮತ್ತು ಆಂಧ್ರಪ್ರದೇಶದ ಶಶಿಧರ್ ನಾಯಕ್ ಮತ್ತು ಬವಾಜನ್ ಅವರನ್ನು ಬಂಧಿಸಿದರು. ಅಪರಾಧಕ್ಕೆ ಬಳಸಲಾದ ಹಲವಾರು ಮೊಬೈಲ್ ಫೋನ್‌ಗಳು, ಇಂಟರ್ನೆಟ್ ಸಾಧನಗಳು ಮತ್ತು ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಹೆಚ್ಚಿನ ತನಿಖೆಯ ನಂತರ, ಪೊಲೀಸರು ಪಶ್ಚಿಮ ಬಂಗಾಳ ಮತ್ತು ಕೇರಳದಿಂದ ಇನ್ನೂ ನಾಲ್ವರನ್ನು ಬಂಧಿಸಿದರು. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಒಂದೇ ಖಾತೆಯಿಂದ 2.48 ಲಕ್ಷ ರೂ.ಗಳೊಂದಿಗೆ 1.97 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡರು ಮತ್ತು ಉಳಿದ ಹಣವನ್ನು ಕೇರಳದ ಬಹು ಬ್ಯಾಂಕ್ ಖಾತೆಗಳಿಂದ ವಶಪಡಿಸಿಕೊಂಡರು.

ಇದನ್ನೂ ಓದಿ: ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನ: ಸೈಬರ್ ದಾಳಿ ಬಗ್ಗೆ ವಿಡಿಯೋ ಮೂಲಕ ಕಮಿಷನರ್​ ದಯಾನಂದ್ ಎಚ್ಚರಿಕೆ!​​

ಆರೋಪಿಗಳು ಈ ದಂಧೆಯಲ್ಲಿ ಹೆಚ್ಚಿನ ವ್ಯಕ್ತಿಗಳು ಭಾಗಿಯಾಗಿದ್ದಾರೆಂದು ಬಹಿರಂಗಪಡಿಸಿದ್ದಾರೆ ಮತ್ತು ಹೆಚ್ಚಿನ ಬಂಧನಗಳನ್ನು ನಿರೀಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಮಿಷನ್‌ಗಾಗಿ ವ್ಯಕ್ತಿಗಳು ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಸಂಖ್ಯೆಗಳನ್ನು ಸೈಬರ್ ಅಪರಾಧಿಗಳಿಗೆ ಬಾಡಿಗೆಗೆ ನೀಡುವ ಪ್ರವೃತ್ತಿ ಹೆಚ್ಚುತ್ತಿರುವ ಬಗ್ಗೆಯೂ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ವರ್ಷ ಇಂತಹ 10ಕ್ಕೂ ಹೆಚ್ಚು ಬಂಧನಗಳನ್ನು ಮಾಡಲಾಗಿದೆ.

ಲಾಭಕ್ಕಾಗಿ ವೈಯಕ್ತಿಕ ಬ್ಯಾಂಕಿಂಗ್ ಅಥವಾ ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಪೊಲೀಸ್ ಮಹಾನಿರ್ದೇಶಕ ಅಜಿತ್ ಕುಮಾರ್ ಸಿಂಗ್ಲಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ನಾಗರಿಕರು 1930ಗೆ ಕರೆ ಮಾಡುವ ಮೂಲಕ ಅಥವಾ cybercrime.gov.inಗೆ ಭೇಟಿ ನೀಡುವ ಮೂಲಕ ಸೈಬರ್ ವಂಚನೆಯನ್ನು ವರದಿ ಮಾಡಲು ಮನವಿ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ