
ಚೆನ್ನೈ, ನವೆಂಬರ್ 26: ಸೆನ್ಯಾರ್ ಚಂಡಮಾರುತಕ್ಕೆ (Cyclone Senyar) ಅಪ್ಪಳಿಸುವ ಸಾಧ್ಯತೆ ಇರುವುದರಿಂದ ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡಿನ ತಿರುವರೂರಿನಲ್ಲಿ ಇಂದು (ಬುಧವಾರ) ಭಾರೀ ಮಳೆಯಿಂದಾಗಿ ಮನ್ನಾರ್‌ಗುಡಿಯ ಕಾವೇರಿ ಡೆಲ್ಟಾದಲ್ಲಿನ 5 ಎಕರೆ ಕೃಷಿಭೂಮಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ.
ಸೆನ್ಯಾರ್ ಚಂಡಮಾರುತದಿಂದ ಮಲಕ್ಕಾ ಜಲಸಂಧಿ, ಮಲೇಷ್ಯಾ, ದಕ್ಷಿಣ ಅಂಡಮಾನ್ ಸಮುದ್ರ, ನಿಕೋಬಾರ್ ದ್ವೀಪಗಳು, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್ ಮೇಲೆ ಬಲವಾದ ಚಂಡಮಾರುತದ ಗಾಳಿ ಬೀಸುವ ನಿರೀಕ್ಷೆಯಿದೆ. ಗಾಳಿಯ ವೇಗ ಕ್ರಮೇಣ ಕಡಿಮೆಯಾಗುವ ಮುನ್ಸೂಚನೆ ಇದೆ. ಗುರುವಾರ ಬೆಳಿಗ್ಗೆ ವೇಳೆಗೆ ಗಂಟೆಗೆ 70 ಕಿಮೀ ವೇಗದಲ್ಲಿ ಮತ್ತು ಶುಕ್ರವಾರ ಬೆಳಿಗ್ಗೆಯಿಂದ ಗಂಟೆಗೆ 60 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ.
ಇದನ್ನೂ ಓದಿ: ತಮಿಳುನಾಡಿಗೆ ಅಪ್ಪಳಿಸಲಿದೆ ಸೆನ್ಯಾರ್ ಚಂಡಮಾರುತ; ಭಾರೀ ಮಳೆಯಿಂದ ಚೆನ್ನೈಗೆ ಹಳದಿ ಅಲರ್ಟ್
ಬಂಗಾಳಕೊಲ್ಲಿಯಲ್ಲಿ ಎರಡು ಹವಾಮಾನ ವ್ಯವಸ್ಥೆಗಳು ರೂಪುಗೊಂಡಿದ್ದರೂ, ಮುಂದಿನ 7 ದಿನಗಳಲ್ಲಿ ಮಳೆಯಾಗದೆ ಒಡಿಶಾ ಶುಷ್ಕ ವಾತಾವರಣವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ದೃಢಪಡಿಸಿದೆ. ಮುಂಬರುವ ದಿನಗಳಲ್ಲಿ, ಪಶ್ಚಿಮ-ವಾಯುವ್ಯ-ಚಲಿಸುವ ವ್ಯವಸ್ಥೆಯು ತಮಿಳುನಾಡು, ಕೇರಳ, ಮಾಹೆ, ಲಕ್ಷದ್ವೀಪ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಸೇರಿದಂತೆ ಹಲವಾರು ದಕ್ಷಿಣ ರಾಜ್ಯಗಳಿಗೆ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ತಮಿಳುನಾಡಿನಲ್ಲಿ ಸುರಿದ ಭಾರೀ ಮಳೆಯ ನಂತರ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ, ರಾಮನಾಥಪುರಂ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಈಗಾಗಲೇ ಪ್ರವಾಹ ಉಂಟಾಗಿದೆ.
ಇದನ್ನೂ ಓದಿ: ನಾಳೆಯ ಹವಾಮಾನ: ಮೊಂತಾ ಚಂಡಮಾರುತದ ಅಬ್ಬರ, ಕರಾವಳಿಯಲ್ಲಿ ಹೈ ಅಲರ್ಟ್
ಬಲವಾದ ಗಾಳಿ ಮತ್ತು ಸಮುದ್ರದ ಬಿರುಸು ಹೆಚ್ಚಾಗಿರುವುದರಿಂದ ಮೀನುಗಾರರು ಅಂಡಮಾನ್ ಸಮುದ್ರ ಮತ್ತು ನೈಋತ್ಯ ಬಂಗಾಳಕೊಲ್ಲಿಗೆ ಹೋಗದಂತೆ ಸೂಚಿಸಲಾಗಿದೆ.
VIDEO | Thiruvarur, Tamil Nadu: Heavy rains lead to flooding of 5 acres of farmland in Cauvery delta in Mannargudi; farmers demand Rs 35,000 relief per acre.
(Full video available on PTI Videos – https://t.co/n147TvrpG7)#TamilNadu pic.twitter.com/jvDawodKIa
— Press Trust of India (@PTI_News) November 26, 2025
ನಿಕೋಬಾರ್ ಮತ್ತು ಅಂಡಮಾನ್ ದ್ವೀಪಗಳು, ಪುದುಚೇರಿ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. ಈ ಪ್ರದೇಶಗಳ ನಿವಾಸಿಗಳು ಮತ್ತು ಅಧಿಕಾರಿಗಳಿಗೆ ಜಾಗರೂಕರಾಗಿರಲು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ