ಕಡಿಮೆ ಬೆಲೆ, ಹೆಚ್ಚು ಗುಣಮಟ್ಟ: ಭಾರತದ ಮೇಲೆ ವಿದೇಶಿ ಸುಂಕದ ನಡುವೆ ಸ್ವದೇಶಿ ಬಲಕ್ಕೆ ಒತ್ತು ನೀಡಿದ ಮೋದಿ
ಕಡಿಮೆ ಬೆಲೆ ಇರಬೇಕು ಆದರೆ ಅದರ ಗುಣಮಟ್ಟ ಅದ್ಭುತವಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ. ಇಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿರುವ ಅವರು, ನಾಗರಿಕರು ಮತ್ತು ಕೈಗಾರಿಕೆಗಳಿಗೆ ಬಲವಾದ ಸಂದೇಶವನ್ನು ರವಾನಿಸಿದ್ದು, ಭಾರತವು ಅಮೆರಿಕದೊಂದಿಗೆ ಹೆಚ್ಚಿನ ಸುಂಕದ ಉದ್ವಿಗ್ನತೆಯನ್ನು ಎದುರಿಸುತ್ತಿರುವ ಕಾರಣ ‘ಕಡಿಮೆ ಬೆಲೆ, ಹೆಚ್ಚು ಗುಣಮಟ್ಟ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ನವದೆಹಲಿ, ಆಗಸ್ಟ್ 15: ಕಡಿಮೆ ಬೆಲೆ ಇರಬೇಕು ಆದರೆ ಅದರ ಗುಣಮಟ್ಟ ಅದ್ಭುತವಾಗಿರಬೇಕೆಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ. ಇಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಉದ್ದೇಶಿಸಿ ಮಾತನಾಡಿರುವ ಅವರು, ನಾಗರಿಕರು ಮತ್ತು ಕೈಗಾರಿಕೆಗಳಿಗೆ ಬಲವಾದ ಸಂದೇಶವನ್ನು ರವಾನಿಸಿದ್ದು, ಭಾರತವು ಅಮೆರಿಕದೊಂದಿಗೆ ಹೆಚ್ಚಿನ ಸುಂಕದ ಉದ್ವಿಗ್ನತೆಯನ್ನು ಎದುರಿಸುತ್ತಿರುವ ಕಾರಣ ‘ಕಡಿಮೆ ಬೆಲೆ, ಹೆಚ್ಚು ಗುಣಮಟ್ಟ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಭಾರತವು ಹೆಚ್ಚು ಪರಿಣಾಮಕಾರಿ, ಉತ್ತಮ ಗುಣಮಟ್ಟದ ಸರಕುಗಳನ್ನು ಉತ್ಪಾದಿಸುವ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಎಂದು ಹೇಳಿದರು. ಇದು ಇತಿಹಾಸವನ್ನು ಬರೆಯುವ ಸಮಯ. ನಾವು ವಿಶ್ವ ಮಾರುಕಟ್ಟೆಯನ್ನು ಆಳಬೇಕು.
ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ, ಗುಣಮಟ್ಟವನ್ನು ಸುಧಾರಿಸಿ, ಅದು ನಮ್ಮ ಗುರಿಯಾಗಿರಬೇಕು.ಬಲಿಷ್ಠ ಭಾರತಕ್ಕೆ ಪ್ರಧಾನಿ ಮೋದಿ ಕರೆ ನೀಡಿ,ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿಗೆ ಹೋಲಿಸಿದರು.
ಮತ್ತಷ್ಟು ಓದಿ: ಈ ದೀಪಾವಳಿಗೆ ದೇಶದ ಜನತೆಗೆ ದೊಡ್ಡ ಗಿಫ್ಟ್ ಕೊಡ್ತೇವೆ ಎಂದ ಪ್ರಧಾನಿ ಮೋದಿ
ಬೇರೆಯವರನ್ನು ತುಳಿಯುವಲ್ಲಿ ನಮ್ಮ ಶಕ್ತಿಯನ್ನು ವ್ಯರ್ಥ ಮಾಡಬಾರದು, ನಮ್ಮ ಗಮನವು ನಮ್ಮನ್ನು ನಾವು ಹೇಗೆ ಬಲ ಪಡಿಸಿಕೊಳ್ಳಬೇಕು ಎಂಬುದರ ಕಡೆ ಇರಬೇಕು. ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರನ್ನು ಪ್ರಧಾನಿ ಒತ್ತಾಯಿಸಿದರು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರ ನೀತಿ ಬದಲಾವಣೆಗಳಿಗೆ ಮುಕ್ತವಾಗಿದೆ ಎಂದು ಅವರಿಗೆ ಭರವಸೆ ನೀಡಿದರು. ರೈತ ವಿರೋಧಿ ನೀತಿಯನ್ನು ಸಹಿಸಲಾಗುವುದಿಲ್ಲ,ಮೋದಿ ರೈತರಿಗೆ ಗೋಡೆಯಂತೆ ನಿಲ್ಲುತ್ತಾರೆ. ಅವರು ನಮ್ಮ ಆರ್ಥಿಕತೆಯ ಬೆನ್ನೆಲುಬು.ಭಾರತವು ಹಲವಾರು ಸರಕುಗಳ ಅಗ್ರಗಣ್ಯ ಉತ್ಪಾದಕ ರಾಷ್ಟ್ರವಾಗಿದೆ.ಭಾರತವು ತನ್ನದೇ ಆದ ಹಾದಿಯನ್ನು ರೂಪಿಸಿಕೊಳ್ಳಬೇಕು.
ಪ್ರಧಾನಿಯವರು, 2047 ರ ವೇಳೆಗೆ ಭಾರತವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ಹೊತ್ತಿಗೆ, ನಮ್ಮ ಯುವಕರು ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇದು ಕೇವಲ ಸರ್ಕಾರದ ಗುರಿಯಲ್ಲ, ಪ್ರತಿಯೊಬ್ಬ ಭಾರತೀಯನ ಗುರಿಯಾಗಿದೆ ಎಂದು ಅವರು ಹೇಳಿದರು.
ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಲು ಸಂಕಲ್ಪ ಮಾಡಿದೆ ಎಂದು ಪ್ರಧಾನಿ ಹೇಳಿದರು. ಸೌರ, ಹೈಡ್ರೋಜನ್ ಮತ್ತು ಪರಮಾಣು ಇಂಧನದಲ್ಲಿ ದೊಡ್ಡ ಪ್ರಮಾಣದ ಕೆಲಸಗಳು ನಡೆಯುತ್ತಿವೆ. 2030 ರ ಗುರಿಗೆ 5 ವರ್ಷಗಳ ಮೊದಲೇ ಭಾರತ ಶುದ್ಧ ಇಂಧನದಲ್ಲಿ ಶೇ. 50 ರಷ್ಟು ಪಾಲನ್ನು ಸಾಧಿಸಿದೆ ಎಂದು ಅವರು ಹೆಮ್ಮೆಯಿಂದ ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




