ಭಾರತಕ್ಕೆ ಆಗಮಿಸಿದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್; ಪಿಎಂ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ

ಈ ವರ್ಷ ಪ್ರಾರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ ಡೆನ್ಮಾರ್ಕ್​​ಗೆ ಭೇಟಿ ನೀಡಿದ್ದರು. ಇದೀಗ ಅಲ್ಲಿನ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್ಸನ್ ಅಕ್ಟೋಬರ್​ 11ರವರೆಗೆ ಭಾರತದಲ್ಲಿ ಇರಲಿದ್ದು, ಈ ಅವಧಿಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರನ್ನು ಭೇಟಿಯಾಗಲಿದ್ದಾರೆ.

ಭಾರತಕ್ಕೆ ಆಗಮಿಸಿದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್; ಪಿಎಂ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ
ಭಾರತಕ್ಕೆ ಬಂದ ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್

ಡೆನ್ಮಾರ್ಕ್​ ಪ್ರಧಾನಮಂತ್ರಿ ಮೆಟ್ಟೆ ಫ್ರೆಡ್ರಿಕ್ಸನ್ (Mette Frederiksen) ಇಂದಿನಿಂದ ಮೂರು ದಿನಗಳ ಕಾಲ ಭಾರತ ಪ್ರವಾಸ ಹಮ್ಮಿಕೊಂಡಿದ್ದು, ಇಂದು ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಭಾರತಕ್ಕೆ ಇಂದು ಆಗಮಿಸಿದ ಅವರನ್ನು ದೆಹಲಿ ಏರ್​ಪೋರ್ಟ್​​ನಲ್ಲಿ ವಿದೇಶಾಂಗ ವ್ಯವಹಾರಗಳ ಇಲಾಖೆ ರಾಜ್ಯ ಸಚಿವರಾದ ಮೀನಾಕ್ಷಿ ಲೇಖಿ ಸ್ವಾಗತಿಸಿದ್ದಾರೆ.  

ಮೆಟ್ಟೆ ಫ್ರೆಡ್ರಿಕ್ಸನ್ ಅಕ್ಟೋಬರ್​ 11ರವರೆಗೆ ಭಾರತದಲ್ಲಿ ಇರಲಿದ್ದು, ಈ ಅವಧಿಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರನ್ನು ಭೇಟಿಯಾಗಲಿದ್ದಾರೆ. ಹಾಗೇ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಭಾರತ-ಡೆನ್ಮಾರ್ಕ್​ ಹಸಿರು ಕಾರ್ಯತಂತ್ರದ ಪಾಲುದಾರಿಕೆಯ ಅವಲೋಕನ ಮತ್ತು ಈ ಸಹಭಾಗಿತ್ವವನ್ನು ಮತ್ತೊಂದು ಹೆಜ್ಜ ಮುಂದೆ ಕೊಂಡೊಯ್ಯಲು ಮೆಟ್ಟೆ ಫ್ರೆಡ್ರಿಕ್ಸನ್ ಭೇಟಿ ಅವಕಾಶ ಕಲ್ಪಿಸಿಕೊಡಲಿದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಹೇಳಿದ್ದಾರೆ. ಮೆಟ್ಟೆ ಫ್ರೆಡ್ರಿಕ್ಸನ್ ಕೊರೊನಾ ಸಾಂಕ್ರಾಮಿಕದ ನಂತರ ಭಾರತಕ್ಕೆ ಬರುತ್ತಿರುವ ಮೊದಲ ವಿದೇಶೀ ನಾಯಕರಾಗಿದ್ದು, ಈ ಭೇಟಿ ಅತ್ಯಂತ ಮಹತ್ವದ್ದಾಗಿದೆ.

ಈ ವರ್ಷ ಪ್ರಾರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್​.ಜೈಶಂಕರ್​ ಡೆನ್ಮಾರ್ಕ್​​ಗೆ ಭೇಟಿ ನೀಡಿದ್ದರು. ಡೆನ್ಮಾರ್ಕ್​ ಮತ್ತು ಭಾರತದ ನಡುವೆ ವ್ಯವಹಾರ ಸಂಬಂಧ ಬಲವಾಗಿದೆ. ಹೂಡಿಕೆಯೂ ಇದೆ. 200ಕ್ಕೂ ಹೆಚ್ಚು ಡ್ಯಾನಿಶ್​ ಕಂಪನಿಗಳು ಭಾರತದಲ್ಲಿ ಇದ್ದರೆ, ಡೆನ್ಮಾರ್ಕ್​​ನಲ್ಲಿ 60 ಭಾರತದ ಕಂಪನಿಗಳಿವೆ.  ನವೀಕರಿಸಬಹುದಾದ ಇಂಧನ, ಶುದ್ಧ ತಂತ್ರಜ್ಞಾನ, ನೀರು ಮತ್ತು ತ್ಯಾಜ್ಯ ನಿರ್ವಹಣೆ, ಕೃಷಿ ಮತ್ತು ಪಶು ಸಂಗೋಪನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಡಿಜಿಟಲೀಕರಣ, ಸ್ಮಾರ್ಟ್ ಸಿಟಿ ಮತ್ತು ಹಡಗು ವಲಯದಲ್ಲಿ  ಉಭಯ ದೇಶಗಳ ನಡುವೆ  ಸಹಕಾರ ಬಲವಾಗಿದೆ. ಇದೀಗ ಡೆನ್ಮಾರ್ಕ್​ ಪ್ರಧಾನಿ ಭೇಟಿಯಿಂದ ಎರಡೂ ದೇಶಗಳ ನಡುವಿನ ಬಾಂಧವ್ಯ ವೃದ್ಧಿಗೆ ಇನ್ನಷ್ಟು ಉತ್ತೇಜನ ಸಿಗಲಿದೆ.

ಇದನ್ನೂ ಓದಿ: 2024ರ ಚುನಾವಣೆಯಲ್ಲೂ ಗೆಲ್ಲುತ್ತೇವೆ, ನರೇಂದ್ರ ಮೋದಿಯವರೇ ಪ್ರಧಾನಿಯಾಗುತ್ತಾರೆ: ಅಮಿತ್​ ಶಾ

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

Read Full Article

Click on your DTH Provider to Add TV9 Kannada