ಲಖಿಂಪುರ ಖೇರಿ ಹಿಂಸಾಚಾರ ಕೇಸ್; ಇಂದು ವಿಚಾರಣೆಗೆ ಹಾಜರಾದ ಕೇಂದ್ರ ಸಚಿವರ ಪುತ್ರ ಆಶೀಶ್ ಮಿಶ್ರಾ
Lakhimpur Kheri Violence: ಆಶೀಶ್ ಮಿಶ್ರಾ ವಿರುದ್ಧ ಪೊಲೀಸರು ಈಗಾಗಲೇ ಕೊಲೆ ಕೇಸ್ ದಾಖಲಿಸಿದ್ದಾರೆ. ಆದರೆ ಇದುವರೆಗೂ ಅವರನ್ನು ಬಂಧಿಸಿರಲಿಲ್ಲ. ಈ ಬಗ್ಗೆ ನಿನ್ನೆ ಸುಪ್ರೀಂಕೋರ್ಟ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಲಖಿಂಪುರ ಖೇರಿ ಹಿಂಸಾಚಾರ(Lakhimpur Kheri Violence)ಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇಂದು ಪೊಲೀಸರೆದುರು ವಿಚಾರಣೆಗೆ ಹಾಜರಾಗಿದ್ದಾರೆ. ಮೊದಲ ಬಾರಿಗೆ ಸಮನ್ಸ್ ನೀಡಿದಾಗ ತಪ್ಪಿಸಿಕೊಂಡಿದ್ದ ಅವರಿಂದು ಉತ್ತರಪ್ರದೇಶದ ಅಪರಾಧ ವಿಭಾಗದ ಶಾಖೆಗೆ ಹಾಜರಾಗಿದ್ದಾರೆ. ಅದರಲ್ಲೂ ಪೊಲೀಸ್ ಕಚೇರಿಯ ಹಿಂಬಾಗಿಲಿನಿಂದ ಒಳಗೆ ಹೋಗಿದ್ದಾರೆ. ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ , ಲಖಿಂಪುರ ಖೇರಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿಯೇ ಇದ್ದಾರೆ.
#WATCH Son of MoS Home Ajay Mishra Teni, Ashish Mishra arrives at Crime Branch office, Lakhimpur
He was summoned by UP Police in connection with Lakhimpur violence. pic.twitter.com/g6wMpHYOKr
— ANI UP (@ANINewsUP) October 9, 2021
ಲಖಿಂಪುರ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ ಪ್ರಕರಣದಲ್ಲಿ ಆಶೀಶ್ ಮಿಶ್ರಾ ವಿರುದ್ಧ ಆರೋಪ ಕೇಳಿಬಂದಿದೆ. ಅಲ್ಲದೆ, ಪೊಲೀಸರು ಈಗಾಗಲೇ ಕೊಲೆ ಕೇಸ್ ದಾಖಲಿಸಿದ್ದಾರೆ. ಆದರೆ ಇದುವರೆಗೂ ಅವರನ್ನು ಬಂಧಿಸಿರಲಿಲ್ಲ. ಈ ಬಗ್ಗೆ ನಿನ್ನೆ ಸುಪ್ರೀಂಕೋರ್ಟ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಆಶೀಶ್ ಮಿಶ್ರಾಗೆ ಸಮನ್ಸ್ ನೀಡಲಾಗಿದೆ ಎಂದು ಉತ್ತರಪ್ರದೇಶ ಸರ್ಕಾರ ಕೋರ್ಟ್ಗೆ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸಿಜೆಐ ಎನ್. ವಿ.ರಮಣ, ಇದು ನಿಜಕ್ಕೂ ಅಚ್ಚರಿ ತರುವ ವಿಷಯ. ಕೊಲೆ ಕೇಸ್ ದಾಖಲಾದ ಪ್ರತಿಯೊಬ್ಬರಿಗೂ ಹೀಗೆ ಸಮನ್ಸ್ ಕೊಟ್ಟು ವಿಚಾರಣೆಗೆ ಕರೆಯುತ್ತೀರಾ? ಇನ್ನೂ ಯಾಕೆ ಆರೋಪಿಯನ್ನು ಬಂಧಿಸಿಲ್ಲ? ಈ ಪ್ರಕರಣದ ಆರೋಪಿಗಳನ್ನೂ ಎಲ್ಲ ಆರೋಪಿಗಳಂತೆ ನಡೆಸಿಕೊಳ್ಳಿ ಎಂದು ಕಟುವಾಗಿ ಹೇಳಿತ್ತು.
ಅದಕ್ಕೆ ಉತ್ತರಿಸಿದ್ದ ಸರ್ಕಾರದ ಪರ ಹಿರಿಯ ವಕೀಲ ಹರೀಶ್ ಸಾಲ್ವೆ, ಅಕ್ಟೋಬರ್ 9ರಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಆಶೀಶ್ ಮಿಶ್ರಾ ವಿಚಾರಣೆ ಹಾಜರಾಗುತ್ತಾರೆ. ಹಾಗೊಮ್ಮೆ ಬಾರದೆ ಇದ್ದರೆ ಖಂಡಿತವಾಗಿಯೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಈ ಮಧ್ಯೆ ಆಶೀಶ್ ಮಿಶ್ರಾ ನೇಪಾಳಕ್ಕೆ ಹಾರಿದ್ದಾರೆ ಎಂಬ ಸುದ್ದಿಯೂ ಬಂದಿತ್ತು. ಅಂತೂ ಇಂದು ಆಶೀಶ್ ಮಿಶ್ರಾ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: Video: ಹೈದರಾಬಾದ್ನಲ್ಲಿ ಧಾರಾಕಾರ ಮಳೆ; ಚರಂಡಿ ನೀರಿನಲ್ಲಿ ಕೊಚ್ಚಿ ಹೋದ ಇಬ್ಬರು
KS Bharat: ಕೆಎಸ್ ಭರತ್ ಸಿಕ್ಸ್ ಸಿಡಿಸಿದ ಕೂಡಲೇ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ವಿರಾಟ್ ಕೊಹ್ಲಿ ಮಾಡಿದ್ದೇನು ನೋಡಿ
Published On - 11:11 am, Sat, 9 October 21