AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನು ಹೋರಾಟದಲ್ಲಿ ಗೆದ್ದ ಫರೀದ್​ಕೋಟ್ ಮಹಾರಾಜರ ಹೆಣ್ಣುಮಕ್ಕಳು; 25,000 ಕೋಟಿ ರೂ. ಆಸ್ತಿಯಲ್ಲಿ ಬಹುಪಾಲು ನೀಡಲು ಕೋರ್ಟ್ ಆದೇಶ

2013ರಲ್ಲಿ ವಿಚಾರಣಾ ನ್ಯಾಯಾಲಯವು ಮಹಾರಾವಲ್ ಖೇವಾಜಿ ಟ್ರಸ್ಟ್ ಪರವಾಗಿ 1982ರ ಜೂನ್ 1ರ 'ವಿಲ್' ಅನ್ನು ಅನೂರ್ಜಿತ ಎಂದು ಘೋಷಿಸಿತ್ತು. ಹಾಗೇ, ಉತ್ತರಾಧಿಕಾರವನ್ನು ಮಹಾರಾಜರ ಪುತ್ರಿಯರಾದ ಅಮೃತ್ ಕೌರ್ ಮತ್ತು ದೀಪಿಂದರ್ ಕೌರ್ ಅವರಿಗೆ ನೀಡಿತ್ತು.

ಕಾನೂನು ಹೋರಾಟದಲ್ಲಿ ಗೆದ್ದ ಫರೀದ್​ಕೋಟ್ ಮಹಾರಾಜರ ಹೆಣ್ಣುಮಕ್ಕಳು; 25,000 ಕೋಟಿ ರೂ. ಆಸ್ತಿಯಲ್ಲಿ ಬಹುಪಾಲು ನೀಡಲು ಕೋರ್ಟ್ ಆದೇಶ
ಮಹಾರಾಜ ಹರಿಂದರ್ ಸಿಂಗ್ ಬ್ರಾರ್
TV9 Web
| Updated By: ಸುಷ್ಮಾ ಚಕ್ರೆ|

Updated on: Sep 08, 2022 | 2:15 PM

Share

ನವದೆಹಲಿ: 3 ದಶಕಗಳ ಪಿತ್ರಾರ್ಜಿತ ಹೋರಾಟವನ್ನು ಅಂತ್ಯಗೊಳಿಸಿ, ಹಿಂದಿನ ಫರೀದ್‌ಕೋಟ್ ಮಹಾರಾಜ ಹರಿಂದರ್ ಸಿಂಗ್ ಬ್ರಾರ್ ಅವರ 25,000 ಕೋಟಿ ರೂ. ಆಸ್ತಿಯಲ್ಲಿ ದೊಡ್ಡ ಪಾಲನ್ನು ಅವರ ಪುತ್ರಿಯರಾದ ಅಮೃತ್ ಕೌರ್ ಮತ್ತು ದೀಪಿಂದರ್ ಕೌರ್‌ಗೆ ನೀಡುವ ಪಂಜಾಬ್ (Punjab) ಮತ್ತು ಹರಿಯಾಣ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ಎತ್ತಿಹಿಡಿದಿದೆ. ವಿವಾದದಲ್ಲಿರುವ ರಾಜಮನೆತನದ ಆಸ್ತಿಗಳಲ್ಲಿ ಕೋಟೆಗಳು, ಅರಮನೆ, ನೂರಾರು ಎಕರೆ ಭೂಮಿ, ಆಭರಣಗಳು, ವಿಂಟೇಜ್ ಕಾರುಗಳು ಮತ್ತು ಭಾರೀ ಹಣವೂ ಸೇರಿದೆ.

ಮೇಲ್ಮನವಿದಾರರ ಪರವಾಗಿ ಸಲ್ಲಿಸಲಾದ ಅರ್ಜಿಗಳನ್ನು ವಿಚಾರಣೆ ನಡೆಸಿರುವ ಕೆಳಗಿನ ಹಂತದ 3 ನ್ಯಾಯಾಲಯಗಳು ನೀಡಿರುವ ತೀರ್ಪನ್ನು ತಿರಸ್ಕರಿಸಲು ನಮಗೆ ಯಾವುದೇ ಕಾರಣವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ತ್ರಿಸದಸ್ಯ ಪೀಠವು ಹೇಳಿದೆ. ಹೈಕೋರ್ಟ್‌ನ ಆದೇಶದ ವಿರುದ್ಧದ ವಿಶೇಷ ರಜೆ ಅರ್ಜಿಗಳನ್ನು (ಎಸ್‌ಎಲ್‌ಪಿ) ವಜಾಗೊಳಿಸಲಾಗಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಇದನ್ನೂ ಓದಿ: Big News: ಕರ್ನಾಟಕದಲ್ಲಿ ಹಿಜಾಬ್ ನಿಷೇಧದ ಆದೇಶ ಪ್ರಕರಣ; ಸುಪ್ರೀಂ ಕೋರ್ಟ್​​ನಲ್ಲಿಂದು ಮಹತ್ವದ ವಿಚಾರಣೆ

‘ಮಹರ್ವಾಲ್ ಖೇವಾಜಿ ಟ್ರಸ್ಟ್’ ಫರೀದ್‌ಕೋಟ್ ಎಸ್ಟೇಟ್‌ನ ಆಸ್ತಿ ನಿರ್ವಹಣೆ ಮತ್ತು 1992ರಲ್ಲಿ ಮಹಾರಾಜರ ಪುತ್ರಿ ಅಮೃತ್ ಕೌರ್ ನಡುವೆ ಸುದೀರ್ಘ ಕಾನೂನು ಹೋರಾಟ ನಡೆದಿತ್ತು. ಅವರು 1982ರಲ್ಲಿ ಟ್ರಸ್ಟ್ ಪರವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಹೇಳಲಾದ ಮೂರನೇ ‘ವಿಲ್’ ಅನ್ನು ಪ್ರಶ್ನಿಸಿದ್ದರು.

2013ರಲ್ಲಿ ವಿಚಾರಣಾ ನ್ಯಾಯಾಲಯವು ಮಹಾರಾವಲ್ ಖೇವಾಜಿ ಟ್ರಸ್ಟ್ ಪರವಾಗಿ 1982ರ ಜೂನ್ 1ರ ‘ವಿಲ್’ ಅನ್ನು ಅನೂರ್ಜಿತ ಎಂದು ಘೋಷಿಸಿತ್ತು. ಹಾಗೇ, ಉತ್ತರಾಧಿಕಾರವನ್ನು ಮಹಾರಾಜರ ಪುತ್ರಿಯರಾದ ಅಮೃತ್ ಕೌರ್ ಮತ್ತು ದೀಪಿಂದರ್ ಕೌರ್ ಅವರಿಗೆ ನೀಡಿತ್ತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಜೂನ್ 2020ರಲ್ಲಿ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ಕೊನೆಯ ಆಡಳಿತಗಾರನ ಸಹೋದರ ಮಂಜಿತ್ ಇಂದರ್ ಸಿಂಗ್ ಅವರ ವಂಶಸ್ಥರು ರಾಜಮನೆತನದ ಆಸ್ತಿಯಲ್ಲಿ ಅವರ ತಾಯಿ ಮೊಹಿಂದರ್ ಕೌರ್ ಅವರ ಪಾಲನ್ನು ಪಡೆಯುತ್ತಾರೆ ಎಂದು ಹೇಳಿದ್ದರು.

ಇದನ್ನೂ ಓದಿ: Viral Video: ಜನರೆದುರೇ ಪಂಜಾಬ್​ನ ಆಮ್ ಆದ್ಮಿ ಶಾಸಕಿಗೆ ಗಂಡನಿಂದ ಕಪಾಳಮೋಕ್ಷ; ವಿಡಿಯೋ ವೈರಲ್

ಬ್ರಾರ್ ಅವರ ‘ವಿಲ್’ ಅನ್ನು ‘ಖೋಟಾ’ ಎಂದು ಘೋಷಿಸಿದ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಮಹಾರಾವಲ್ ಖೇವಾಜಿ ಟ್ರಸ್ಟ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 2020ರ ಆಗಸ್ಟ್‌ನಲ್ಲಿ ಯಥಾಸ್ಥಿತಿಗೆ ಆದೇಶಿಸಿತ್ತು. ಹಾಗೇ, ಟ್ರಸ್ಟ್‌ಗೆ ರಾಜಮನೆತನದ ಆಸ್ತಿಯ ಉಸ್ತುವಾರಿಯಾಗಿ ಮುಂದುವರಿಯಲು ಅವಕಾಶ ನೀಡಿತ್ತು.

ಇದೀಗ ಈ ನ್ಯಾಯಾಲಯವು ನೀಡಿದ ಮಧ್ಯಂತರ ನಿರ್ದೇಶನಗಳ ಅನುಸಾರವಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲಾದ ಎಲ್ಲಾ ವರದಿಗಳು, ಖಾತೆಗಳ ಹೇಳಿಕೆಗಳು ಮತ್ತು ಇತರ ದಾಖಲೆಗಳನ್ನು ತಕ್ಷಣವೇ ಈ ನ್ಯಾಯಾಲಯದ ರಿಜಿಸ್ಟ್ರಿಯು ಟ್ರಯಲ್ ಕೋರ್ಟ್‌ಗೆ ಕಳುಹಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಟ್ರಸ್ಟ್ ಮತ್ತು ಯಾವುದೇ ಇತರ ವ್ಯಕ್ತಿಗಳ ಕೈಯಲ್ಲಿರುವ ಉಳಿದ ಆಸ್ತಿಗಳನ್ನು ತಕ್ಷಣದ ವಿಷಯಗಳಲ್ಲಿ ಅಂಗೀಕರಿಸಿದ ತೀರ್ಪನ್ನು ಕಾರ್ಯಗತಗೊಳಿಸುವ ನ್ಯಾಯಾಲಯವು ಸೂಕ್ತ ಆದೇಶಗಳನ್ನು ಹೊರಡಿಸುವವರೆಗೆ ಎಲ್ಲಾ ಸಂಬಂಧಪಟ್ಟವರು ಅದೇ ರೀತಿಯಲ್ಲಿ ನಿರ್ವಹಿಸಬೇಕು ಎಂದು ಕೋರ್ಟ್​ ಘೋಷಿಸಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್