ವಿಲಕ್ಷಣ ಸುದ್ದಿ: ಕ್ರಿಮಿನಾಶಕ ಕುಡಿದು ಸಾವನ್ನಪ್ಪಿದ್ದ ವ್ಯಕ್ತಿ, 40 ದಿನಗಳ ನಂತರ ವಾಪಸಾದ! ಏನು ಟ್ವಿಸ್ಟ್?

| Updated By: ಸಾಧು ಶ್ರೀನಾಥ್​

Updated on: Jul 28, 2022 | 5:59 PM

Andhra Prdesh: ಪ್ರಕಾಶಂ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಸತ್ತ ವ್ಯಕ್ತಿ 40 ದಿನಗಳ ನಂತರ ಮನೆಗೆ ಹಿಂದಿರುಗಿದ್ದಾನೆ. ಸತ್ತ ವ್ಯಕ್ತಿ ಮನೆಗೆ ಬಂದುಬಿಟ್ಟರೆ ಯಾರೇ ಆಗಲಿ ಮೊದಲು ಬೆಚ್ಚಿಬೀಳುತ್ತಾರೆ. ಆದರೆ ನಿಜವಾದ ವಿಷಯ ಏನು ಗೊತ್ತಾ!?

ವಿಲಕ್ಷಣ ಸುದ್ದಿ: ಕ್ರಿಮಿನಾಶಕ ಕುಡಿದು ಸಾವನ್ನಪ್ಪಿದ್ದ ವ್ಯಕ್ತಿ, 40 ದಿನಗಳ ನಂತರ ವಾಪಸಾದ! ಏನು ಟ್ವಿಸ್ಟ್?
ಕ್ರಿಮಿನಾಶಕ ಕುಡಿದು ಸಾವನ್ನಪ್ಪಿದ್ದ ವ್ಯಕ್ತಿ, 40 ದಿನಗಳ ನಂತರ ವಾಪಸಾದ! ಏನು ಟ್ವಿಸ್ಟ್?
Follow us on

ಕೆಲವೊಮ್ಮೆ ನಮ್ಮ ಕಣ್ಣುಗಳೇ ನಮ್ಮನ್ನು ಮೋಸಗೊಳಿಸಬಹುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಕಾಶಂ ಜಿಲ್ಲೆಯ (Prakasam District) ಗಿಡ್ಡಲೂರು ಮಂಡಲದಲ್ಲಿ (Giddalur Mandal) ಬೆಳಕಿಗೆ ಬಂದ ವಿಚಿತ್ರ ಘಟನೆಯೊಂದರ ಬಗ್ಗೆ ತಿಳಿದರೆ ನೀವೂ ಹೌಹಾರುತ್ತೀರಿ. ಮುಂಡ್ಲಪಾಡುವಿನ ಸೈಯದ್ ಮಿಯಾ ಎಂಬ ಮಿತಿ ಸ್ಥಿಮಿತವಿಲ್ಲದ ವ್ಯಕ್ತಿ 40 ದಿನಗಳ ಹಿಂದೆ ಕೀಟನಾಶಕ ಸೇವಿಸಿ ಮೃತಪಟ್ಟಿದ್ದರು. ಎಲ್ಲರಂತೆ ಕುಟುಂಬಸ್ಥರು ಕೂಡ ಮೃತದೇಹದ ಅಂತಿಮ ಸಂಸ್ಕಾರ ನೆರವೇರಿಸಿದರು.

ಅಂತಿಮ ವಿಧಿವಿಧಾನಗಳನ್ನು ಸಹ ನೆರವೇರಿಸಲಾಗಿತ್ತು. ಸಂಬಂಧಿಕರನ್ನೂ ಆಹ್ವಾನಿಸಲಾಗಿತ್ತು ಮತ್ತು ತಿಥಿ ಊಟವನ್ನೂ ಹಾಕಿಸಲಾಗಿತ್ತು. ಅದರಲ್ಲೇನಿದೆ ವಿಚಿತ್ರ? ಅದು ಅತ್ಯಂತ ಸಹಜವಾಗಿಯೇ ಇದೆ ಅನ್ನುತ್ತೀರಿ ಅಲ್ಲವಾ? ಆದರೆ ಅಲ್ಲಿಯೇ ನಿಜವಾದ ಟ್ವಿಸ್ಟ್ ಅಡಗಿರುವುದು. ಊಟದ ಸಮಯಕ್ಕೆ ಸರಿಯಾಗಿ ಸೈಯದ್ ಮಿಯಾ ಕಾಣಿಸಿಕೊಂಡಾಗ ಕುಟುಂಬದ ಸದಸ್ಯರು ಆಘಾತಕ್ಕೊಳಗಾಗಿದ್ದಾರೆ. ಸ್ವಲ್ಪ ಸಮಯದವರೆಗೆ ಅವರಿಗೆ ತಮ್ಮನ್ನು ತಾವೇ ನಂಬಲಾಗಿಲ್ಲ. ಆದರೆ ಎದುರಿಗೆ ನಿಂತ ವ್ಯಕ್ತಿ ಸೈಯದ್ ಮಿಯಾ ಎಂಬುದು ಮನವರಿಕೆಯಾಗಿದೆ. ವ್ಯಕ್ತಿ ಸತ್ತ ಎಂದು ಭಾವಿಸಿದ್ದಾಗ ಸೈಯದ್ ಮಿಯಾ ಮನೆಗೆ ತಲುಪಿದ್ದಾನೆ. ಕುಟುಂಬ ಸದಸ್ಯರಲ್ಲಿ ಸಹಜವಾಗಿಯೇ ಹರ್ಷ ಮೂಡಿದೆ.

ಅಸಲಿಗೆ ಅಲ್ಲಿ ಏನಾಯಿತು ಅಂದರೆ, ಕೀಟನಾಶಕ ಕುಡಿದು ಸಾವನ್ನಪ್ಪಿದ ವ್ಯಕ್ತಿಗೂ ಸೈಯದ್ ಮಿಯಾಗೂ ಕರಾರುವಕ್ಕು, ನಿಕಟವಾದ ಹೋಲಿಕೆ ಇತ್ತು. ಇದರಿಂದ ಕುಟುಂಬಸ್ಥರು ಕೂಡ ಸೈಯದ್ ಮಿಯಾನೇ ಮೃತಪಟ್ಟಿದ್ದಾರೆ ಎಂದು ಭಾವಿಸಿದ್ದರು. ಎಲ್ಲರಂತೆ ಕಣ್ಣೀರಿಟ್ಟರು. ಅಂತ್ಯಕ್ರಿಯೆಯನ್ನು ಸಹ ಮಾಡಿಮುಗಿಸಿದ್ದರು.

ದಿಢೀರನೆ ಜೀವಂತವಾಗಿ ವಾಪಸಾದ ಸೈಯದ್ ಮಿಯಾನನ್ನು ನೋಡಿದ ಕುಟುಂಬಸ್ಥರು ಮೊದಲಿಗೆ ಬೆಚ್ಚಿಬಿದಿದ್ದಾರೆ. ಅದರ ನಂತರ ಅವರು ಸ್ಥಿತಪ್ರಜ್ಞರಂತೆ ವಾಸ್ತವವನ್ನು ಒಪ್ಪಿಕೊಂಡಿದ್ದಾರೆ. ಆನಂದ ತುಂದಿಲಿತರಾಗಿದ್ದಾರೆ. ಮೃತಪಟ್ಟನೆಂದು ಭಾವಿಸಲಾಗಿದ್ದ ಸೈಯದ್ ಮಿಯಾನನ್ನು ನೋಡಿ ಸಂತಸಗೊಂಡಿದ್ದೇವೆ ಎನ್ನುತ್ತಾರೆ ಕುಟುಂಬಸ್ಥರು. ಇದೀಗ ಪೊಲೀಸರು ಅಸಲಿಗೆ ಮೃತಪಟ್ಟ ವ್ಯಕ್ತಿ ಯಾರು, ಆತನ ಗುರುತು ಪತ್ತೆ ಹಚ್ಚುವ ಕಾಯಕದಲ್ಲಿ ತೊಡಗಿದ್ದಾರೆ.

To read in Telugu Click Here