ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ವಜಾ; ಇಲ್ಲಿವರೆಗಿನ ಬೆಳವಣಿಗೆಗಳು

ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಒಡೆತನದ ಎರಡನೇ ಫ್ಲಾಟ್‌ನಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯಲ್ಲಿ ಐದು ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳ ಜೊತೆಗೆ ಲೆಕ್ಕಕ್ಕೆ ಸಿಗದ ₹ 29 ಕೋಟಿ ನಗದು ಪತ್ತೆಯಾದ ಕೆಲವೇ ಗಂಟೆಗಳ ನಂತರ ಸಚಿವರನ್ನು ವಜಾ ಮಾಡಲಾಗಿದೆ.

ಶಿಕ್ಷಕರ ನೇಮಕಾತಿ ಹಗರಣದ ಆರೋಪಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ವಜಾ; ಇಲ್ಲಿವರೆಗಿನ ಬೆಳವಣಿಗೆಗಳು
ಪಾರ್ಥ ಚಟರ್ಜಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 28, 2022 | 8:06 PM

ಕೊಲ್ಕತ್ತಾ: ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ (SSC Scam) ನಡೆಸಿದ ಆರೋಪದಲ್ಲಿ ಬಂಧಿತರಾಗಿ ಐದು ದಿನಗಳ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಪಾರ್ಥ ಚಟರ್ಜಿ (Partha Chatterjee) ಅವರನ್ನು ಸಚಿವ ಸ್ಥಾನದಿಂದ ಮತ್ತು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿದ್ದಾರೆ. ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಒಡೆತನದ ಎರಡನೇ ಫ್ಲಾಟ್‌ನಲ್ಲಿ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯಲ್ಲಿ ಐದು ಕಿಲೋಗ್ರಾಂಗಳಷ್ಟು ಚಿನ್ನಾಭರಣಗಳ ಜೊತೆಗೆ ಲೆಕ್ಕಕ್ಕೆ ಸಿಗದ ₹ 29 ಕೋಟಿ ನಗದು ಪತ್ತೆಯಾದ ಕೆಲವೇ ಗಂಟೆಗಳ ನಂತರ ಪಾರ್ಥ ಚಟರ್ಜಿ ಅವರನ್ನು ವಜಾಗೊಳಿಸಲಾಗಿದೆ.

ಇಲ್ಲಿವರೆಗಿನ ಬೆಳವಣಿಗೆಗಳು

  1. ಪಾರ್ಥ ಚಟರ್ಜಿ ಮತ್ತು ಅರ್ಪಿತಾ ಮುಖರ್ಜಿ ಅವರನ್ನು ಜುಲೈ 23 ರಂದು ಕೋಲ್ಕತ್ತಾದ ಅವರ ಮನೆಯಲ್ಲಿ ₹ 21 ಕೋಟಿ ನಗದು ವಶಪಡಿಸಿಕೊಂಡ ನಂತರ ಇಡಿ ಬಂಧಿಸಿತ್ತು. ಇಂದು ಮುಂಜಾನೆ, ಕೋಲ್ಕತ್ತಾದ ಬೆಲ್‌ಘಾರಿಯಾ ಪ್ರದೇಶದಲ್ಲಿ ಮುಖರ್ಜಿಯವರ ಎರಡನೇ ಫ್ಲಾಟ್‌ನಲ್ಲಿ 18 ಗಂಟೆಗಳ ದಾಳಿಯ ನಂತರ, ಕೇಂದ್ರೀಯ ಸಂಸ್ಥೆಯ ಅಧಿಕಾರಿಗಳು 10 ಟ್ರಂಕ್‌ಗಳ ನಗದು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ಮೂರು ನೋಟು ಎಣಿಕೆ ಯಂತ್ರಗಳನ್ನು ಬಳಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
  2. ಅರ್ಪಿತಾ ಮುಖರ್ಜಿ ಅವರ ಎರಡು ಫ್ಲಾಟ್‌ಗಳಿಂದ ಇಲ್ಲಿಯವರೆಗೆ ₹ 50 ಕೋಟಿ ನಗದು ಜೊತೆಗೆ, 2 ಕೋಟಿ ರೂಪಾಯಿ ಮೌಲ್ಯದ ವಿದೇಶಿ ವಿನಿಮಯ ಮತ್ತು ಚಿನ್ನದ ಬಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. 30 ವರ್ಷದ ನಟಿ ಮತ್ತು ಜನಪ್ರಿಯ ಇನ್​​ ಸ್ಟಾಗ್ರಾಮರ್ ಆಗಿರುವ ಅರ್ಪಿತಾ ಕನಿಷ್ಠ ಮೂರು ಫ್ಲಾಟ್‌ಗಳನ್ನು ಹೊಂದಿದ್ದಾರೆ.
  3. ಇದನ್ನೂ ಓದಿ
    Image
    Breaking ಪಶ್ಚಿಮ ಬಂಗಾಳದ ಸಚಿವ ಸಂಪುಟದಿಂದ ಪಾರ್ಥ ಚಟರ್ಜಿ ವಜಾ
    Image
    ನಮಗೆಲ್ಲರಿಗೂ ಅವಮಾನ ಮಾಡಿಬಿಟ್ಟರು: ಪಾರ್ಥ ಚಟರ್ಜಿ ಪ್ರಕರಣ ಬಗ್ಗೆ ಟಿಎಂಸಿ ವಕ್ತಾರ ಪ್ರತಿಕ್ರಿಯೆ
    Image
    Bengal School Jobs Scam: ಮನೆಯಲ್ಲಿ ಕೋಟ್ಯಂತರ ರೂ. ನೋಟುಗಳಿದ್ದರೂ ಅರ್ಪಿತಾ ಮುಖರ್ಜಿ 11,819 ರೂ. ಬಿಲ್ ಉಳಿಸಿಕೊಂಡಿದ್ದೇಕೆ?
  4. ಅಧಿಕಾರಿಗಳಿಗೆ ಸುಮಾರು 40 ಪುಟಗಳ ಡೈರಿಯೂ ಸಿಕ್ಕಿದೆ. ಬಿಜೆಪಿಯ ಮೀನಾಕ್ಷಿ ಲೇಖಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ್ದು ಈ “ಕಪ್ಪು ಡೈರಿ” “ಕಪ್ಪು ಕೃತ್ಯಗಳನ್ನು” ಬಯಲಿಗೆಳೆಯಲು ಸಹಾಯ ಮಾಡುತ್ತದೆ  ಎಂದಿದ್ದಾರೆ.
  5. ಪಾರ್ಥ ಚಟರ್ಜಿ ಅವರು ಇಂದು ವಜಾಗೊಳಿಸುವವರೆಗೂ ಇಂಡಸ್ಟ್ರೀಸ್ ಖಾತೆ ಹೊಂದಿದ್ದರು. 2016 ರಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳ ಅಕ್ರಮ ನೇಮಕಾತಿಯಲ್ಲಿ ಪಾತ್ರವನ್ನು ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರು ವರ್ಗಾವಣೆಗಾಗಿ ಮತ್ತು ಕಾಲೇಜುಗಳಿಗೆ ಮಾನ್ಯತೆ ಪಡೆಯಲು ಸಹಾಯಕ್ಕಾಗಿ ಪಡೆದ ಕಿಕ್‌ಬ್ಯಾಕ್ ಹಣ ಅದು ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.
  6. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದರೆ, ಅವನು ಅಥವಾ ಅವಳು ಶಿಕ್ಷೆಗೆ ಒಳಗಾಗಬೇಕು ಅವರು ಹೇಳಿದ್ದಾರೆ. ಆದರೆ ನನ್ನ ವಿರುದ್ಧ ಯಾವುದೇ ದುರುದ್ದೇಶಪೂರಿತ ಪ್ರಚಾರವನ್ನು ನಾನು ಖಂಡಿಸುತ್ತೇನೆ. ಕಾಲಮಿತಿಯೊಳಗೆ ಸತ್ಯ ಹೊರಬರಬೇಕು ಎಂದಿದ್ದಾರೆ.
  7.  ಟಿಎಂಸಿ  ಪಕ್ಷದ ವಕ್ತಾರ ಕುನಾಲ್ ಘೋಷ್ ಚಟರ್ಜಿಯವರ ಬಂಧನದ ನಂತರ ಅವರು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಪಕ್ಷವು ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವುದಿಲ್ಲ ಎಂದು ಹೇಳಿದ್ದರು. ಆದರೆ ಟಿವಿಯಲ್ಲಿ ಅರ್ಪಿತಾ ಮನೆಯಲ್ಲಿ ಪತ್ತೆಯಾದ ಹಣದ ರಾಶಿಯ ದೃಶ್ಯಗಳು ಪ್ರಸಾರವಾಗುತ್ತಿದ್ದಂತೆ ಚಟರ್ಜಿ ನಮ್ಮೆಲ್ಲರಿಗೂ ಅವಮಾನ ತಂದೊಡ್ಡಿದ್ದಾರೆ ಎಂದು ಹೇಳಿದ್ದು ಚಟರ್ಜಿ ಅವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಟ್ವೀಟ್ ಮಾಡಿದ್ದರು. ಆದರೆ ನಂತರ ಅದನ್ನು ಅಳಿಸಿ ಅದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
  8. ತೃಣಮೂಲ ಕಾಂಗ್ರೆಸ್ ಮುಖವಾಣಿ ‘ಜಾಗೋ ಬಾಂಗ್ಲಾ’  ಸ್ವಲ್ಪ ದಿನಗಳ  ಹಿಂದೆಯೇ  ಪಾರ್ಥ ಚಟರ್ಜಿ ಅವರನ್ನು ಸಚಿವ ಅಥವಾ ಪಕ್ಷದ ಪ್ರಧಾನ ಕಾರ್ಯದರ್ಶಿ ಎಂದು ಹೆಸರಿಸುವುದನ್ನು ನಿಲ್ಲಿಸಿತ್ತು. ಆದಾಗ್ಯೂ, ಪ್ರಿಂಟ್ ಲೈನ್​​ನಲ್ಲಿ ಸಂಪಾದಕರು ಎಂಬಲ್ಲಿ ಅವರ ಹೆಸರೇ ಇತ್ತು.
  9. ತೃಣಮೂಲ ಕಾರ್ಯಕ್ರಮವೊಂದರಲ್ಲಿ ಅರ್ಪಿತಾ ಮುಖರ್ಜಿ ವೇದಿಕೆಯಲ್ಲಿ ಕುಳಿತಿರುವ ಚಿತ್ರಗಳನ್ನು ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದು ಇದನ್ನು ಮಮತಾ ಬ್ಯಾನರ್ಜಿಯವರನ್ನು ಪ್ರಶ್ನಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ತಿಳಿದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
  10. ಹಗರಣದ ಆರೋಪಿ ಪಾರ್ಥ ಚಟರ್ಜಿ ವಿರುದ್ಧ ತೃಣಮೂಲ ಕಾಂಗ್ರೆಸ್  ಕಠಿಣ ಕ್ರಮ ಕೈಗೊಂಡಿದ್ದರೂ  ಬಹುಕೋಟಿ ಎಸ್‌ಎಸ್‌ಸಿ ನೇಮಕಾತಿ ಹಗರಣದಲ್ಲಿ ಅವರು ನಿರಪರಾಧಿ ಎಂದು ಹೊರಬಂದರೆ,  ಸಚಿವರಿಗೆ ಪಕ್ಷವು ತನ್ನ ಬಾಗಿಲುಗಳನ್ನು ತೆರೆದಿರುತ್ತದೆ ಎಂದು ಟಿಎಂಸಿ  ಹೇಳಿದೆ.  ತನಿಖೆಯ ಅವಧಿಗೆ ಅವರನ್ನು ಅಮಾನತುಗೊಳಿಸಲಾಗಿದೆ. ಅವರು ತಪ್ಪಿತಸ್ಥರಲ್ಲ ಎಂದು ಸಾಬೀತಾದರೆ ಅವರು ಹಿಂತಿರುಗಬಹುದು” ಎಂದು ತೃಣಮೂಲದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
  11. ಪಾರ್ಥ ಚಟರ್ಜಿ ಅವರು ತಮ್ಮ ನಾಯಿಗಳನ್ನು ಸಾಕಲು ಕೋಲ್ಕತ್ತಾದಲ್ಲಿ ಐಷಾರಾಮಿ ಫ್ಲ್ಯಾಟ್ ಹೊಂದಿದ್ದಾರೆ ಎಂದು ಕೇಂದ್ರ ಸಚಿವ ಮೀನಕಾಶಿ ಲೇಖಿ ಗುರುವಾರ ಹೇಳಿದ್ದಾರೆ. ಇಡೀ ವಿಷಯದ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೌನವನ್ನು ಲೇಖಿ   ಪ್ರಶ್ನಿಸಿದ್ದಾರೆ. ಮಾ, ಮಾಟಿ, ಮನುಷ್ ಬಗ್ಗೆ ಮಾತನಾಡುವವರು ಕೇವಲ ಹಣದ ಬಗ್ಗೆ ಕಾಳಜಿ ವಹಿಸುತ್ತಾರೆ. ನಗದು ರಾಶಿಗಳು ಪತ್ತೆಯಾಗಿವೆ ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೌನವಾಗಿದ್ದಾರೆ ಎಂದಿದ್ದಾರೆ ಲೇಖಿ.

Published On - 8:06 pm, Thu, 28 July 22

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ