ನಮಗೆಲ್ಲರಿಗೂ ಅವಮಾನ ಮಾಡಿಬಿಟ್ಟರು: ಪಾರ್ಥ ಚಟರ್ಜಿ ಪ್ರಕರಣ ಬಗ್ಗೆ ಟಿಎಂಸಿ ವಕ್ತಾರ ಪ್ರತಿಕ್ರಿಯೆ
ಈ ಬೆಳವಣಿಗೆ ತುಂಬಾ ಆತಂಕ ಹುಟ್ಟಿಸುತ್ತದೆ. ಇಂಥಾ ಘಟನೆಗಳು ಪಕ್ಷ ಮತ್ತು ನಮಗೆಲ್ಲರಿಗೂ ಮುಜುಗರ ಮತ್ತು ಅವಮಾನ ತಂದಿದೆ. ಪಾರ್ಥ ಚಟರ್ಜಿ ತಾನು ಸಚಿವ ಸ್ಥಾನ ತೊರೆಯುವುದಾಗಿ ಹೇಳಿದ್ದಾರೆ. ಆದರೆ ಅವರು ತಾನು ಪ್ರಾಮಾಣಿಕ ಎಂದು ಯಾಕೆ ಹೇಳುತ್ತಿಲ್ಲ?
ದೆಹಲಿ: ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ (Partha Chatterjee) ಅವರ ಆಪ್ತೆಯ ಫ್ಲಾಟ್ನಲ್ಲಿ ಬೃಹತ್ ಮೊತ್ತದ ಹಣ ಪತ್ತೆಯಾದ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಟಿಎಂಸಿ (TMC) ವಕ್ತಾರ ಹಿರಿಯ ನಾಯಕರು ನಮಗೆಲ್ಲರಿಗೂ ಮುಜುಗರ ಮತ್ತು ಅವಮಾನ ತಂದೊಡ್ಡಿದ್ದಾರೆ ಎಂದು ಹೇಳಿದ್ದಾರೆ. ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ (Arpita Mukherjee) ಅವರ ಕೊಲ್ಕತ್ತಾ ಮನೆಯಿಂದು ಇಡಿ ಬೃಹತ್ ಮೊತ್ತದ ಹಣ ವಶ ಪಡಿಸಿಕೊಂಡ ಬೆನ್ನಲ್ಲೇ ಟಿಎಂಸಿ ವಕ್ತಾರ ಕುನಾಲ್ ಘೋಷ್ (Kunal Ghosh) ಅವರ ಈ ಹೇಳಿಕೆ ಬಂದಿದೆ. ಚಟರ್ಜಿ ಅವರು ಟಿಎಂಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದು ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹಗರಣ ಆರೋಪದಲ್ಲಿ ಬಂಧಿತರಾಗಿದ್ದಾರೆ. ಮುಖರ್ಜಿ ಅವರಿಗೆ ಸೇರಿದ ಎರಡು ಫ್ಲಾಟ್ ನಲ್ಲಿ ಒಟ್ಟು ₹50 ಕೋಟಿ ನಗದು, 5 ಕೆಜಿ ಚಿನ್ನ, ಬೃಹತ್ ಮೊತ್ತ ವಿದೇಶಿ ವಿನಿಮಯ ಪತ್ತೆಯಾಗಿದೆ. ಈ ಬೆಳವಣಿಗೆ ತುಂಬಾ ಆತಂಕ ಹುಟ್ಟಿಸುತ್ತದೆ. ಇಂಥಾ ಘಟನೆಗಳು ಪಕ್ಷ ಮತ್ತು ನಮಗೆಲ್ಲರಿಗೂ ಮುಜುಗರ ಮತ್ತು ಅವಮಾನ ತಂದಿದೆ. ಪಾರ್ಥ ಚಟರ್ಜಿ ತಾನು ಸಚಿವ ಸ್ಥಾನ ತೊರೆಯುವುದಾಗಿ ಹೇಳಿದ್ದಾರೆ. ಆದರೆ ಅವರು ತಾನು ಪ್ರಾಮಾಣಿಕ ಎಂದು ಯಾಕೆ ಹೇಳುತ್ತಿಲ್ಲ. ಈ ರೀತಿ ಹೇಳುವುದನ್ನು ತಡೆಯುತ್ತಿರುವವರು ಯಾರು ಎಂದು ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ. ಚಟರ್ಜಿ ಅವರು ಸಚಿವ ಸಂಪುಟದಲ್ಲಿ ಹಲವಾರು ಖಾತೆ ಹೊಂದಿದ್ದಾರೆ.ಅವರು ತಮ್ಮನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಘೋಷ್ ಕೇಳಿದ್ದಾರೆ.
ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿ ಪಕ್ಷದಿಂದ ಉಚ್ಛಾಟನೆ ಮಾಡಬೇಕು ಎಂದು ಘೋಷ್ ಟ್ವೀಟ್ ಮಾಡಿದ್ದು ಆಮೇಲೆ ಅದನ್ನು ಡಿಲೀಟ್ ಮಾಡಿದ್ದಾರೆ. ನಾನು ನನ್ನ ವೈಯಕ್ತಿಕ ಅಭಿಪ್ರಾಯಗಳನ್ನಷ್ಟೇ ಹೇಳಿದೆ.ಈ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳಲಿದೆ ಎಂದು ಆಮೇಲೆ ಅವರು ಮತ್ತೊಂದು ಟ್ವೀಟ್ ಮಾಡಿದ್ದರು.
In my earlier tweet, I had expressed my opinion. Now, the party has taken up the issue. Avishek Banerjee has convened party meeting today 5pm at TMC bhawan. I have been told to attend that meeting also. So, as @AITCofficial has taken up the matter, I am deleting the personal one.
— Kunal Ghosh (@KunalGhoshAgain) July 28, 2022
ಪಶ್ಚಿಮ ಬಂಗಾಳ ಸಚಿವ ಸಂಪುಟದಲ್ಲಿ ಚಟರ್ಜಿ ಕಾಮರ್ಸ್ ಮತ್ತು ಇಂಡಸ್ಟ್ರಿ, ಸಂಸದೀಯ ವ್ಯವಹಾರ, ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್, ಪಬ್ಲಿಕ್ ಎಂಟರ್ ಪ್ರೈಸಸ್ ಮತ್ತು ಇಂಡಸ್ಟ್ರಿಯಲ್ ರೀಕನ್ಸ್ಟ್ರಕ್ಷನ್ ಖಾತೆ ಹೊಂದಿದ್ದಾರೆ. ಚಟರ್ಜಿ ಅವರೊಬ್ಬ ಪ್ರಭಾವಿ ವ್ಯಕ್ತಿ ಎಂದು ಕಲ್ಕತ್ತಾ ಹೈಕೋರ್ಟ್ ನಲ್ಲಿ ಇಡಿ ಹೇಳಿತ್ತು.
ನನ್ನ ಅಜ್ಜಿ ಹೇಳುತ್ತಿದ್ದರು ಹುಣ್ಣಿನಲ್ಲಿ ಕೀವು ತುಂಬಿದರೆ ಅದನ್ನು ತೆಗೆದು ಹಾಕಬೇಕು ಎಂದು. ಹಾಗಿದ್ದರೆ ನೀವು ಆರೋಗ್ಯವಾಗಿರುತ್ತೀರಿ ಮತ್ತು ಸುಖವಾಗಿ ನಿದ್ದೆ ಮಾಡಬಹುದು. ಒಂದು ಹುಣ್ಣಿನಿಂದಾಗಿ ಇಡೀ ದೇಹ ನೋವು ಅನುಭವಿಸುವು ಯಾಕೆ ಎಂದು ಟಿಎಂಸಿ ಯುವ ಘಟಕ ಮತ್ತು ರಾಜ್ಯ ವಕ್ತಾರ ದೇಬಾಂಗ್ಶು ಭಟ್ಟಾಟಾರ್ಯ ಟ್ವೀಟ್ ಮಾಡದ್ದಾರೆ. ಟಿಎಂಸಿ ಶಾಸಕ ಬಿಸ್ವಜಿತ್ ದೇಬ್ ಮತ್ತು ವಕ್ತಾರ ಕೂಡಾ ಘೋಷ್ ಹೇಳಿಕೆ ಬೆಂಬಲಿಸಿದ್ದಾರೆ.
Published On - 2:33 pm, Thu, 28 July 22