Bengal School Jobs Scam: ಮನೆಯಲ್ಲಿ ಕೋಟ್ಯಂತರ ರೂ. ನೋಟುಗಳಿದ್ದರೂ ಅರ್ಪಿತಾ ಮುಖರ್ಜಿ 11,819 ರೂ. ಬಿಲ್ ಉಳಿಸಿಕೊಂಡಿದ್ದೇಕೆ?

Arpita Mukherjee: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ಬಂಧಿತರಾಗಿರುವ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆಯಲ್ಲಿ ಇಂದು ಬೆಳಗಿನ ಜಾವ 4 ಗಂಟೆಯವರೆಗೆ ಹಣ ಎಣಿಕೆ ನಡೆದಿದೆ. 20 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿದೆ.

Bengal School Jobs Scam: ಮನೆಯಲ್ಲಿ ಕೋಟ್ಯಂತರ ರೂ. ನೋಟುಗಳಿದ್ದರೂ ಅರ್ಪಿತಾ ಮುಖರ್ಜಿ 11,819 ರೂ. ಬಿಲ್ ಉಳಿಸಿಕೊಂಡಿದ್ದೇಕೆ?
ಅರ್ಪಿತಾ ಮುಖರ್ಜಿImage Credit source: Indian Express
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 28, 2022 | 8:29 AM

ಕೊಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣಕ್ಕೆ (School Jobs Scam) ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ (Partha Chatterjee) ಜೊತೆ ಬಂಧಿತರಾಗಿರುವ ಅವರ ಆಪ್ತೆ ಅರ್ಪಿತಾ ಮುಖರ್ಜಿಗೆ ಸೇರಿದ ಮತ್ತೊಂದು ಮನೆಯಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಮತ್ತಷ್ಟು ಹಣವನ್ನು ವಶಪಡಿಸಿಕೊಂಡಿದೆ. ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾ ಸಮೀಪದ ಬೆಲ್ಗೋರಿಯಾದಲ್ಲಿರುವ ಅರ್ಪಿತಾ ಮುಖರ್ಜಿ (Arpita Mukherjee) ಅವರ ಇನ್ನೊಂದು ಮನೆಯಿಂದ ಜಾರಿ ನಿರ್ದೇಶನಾಲಯವು (ED) 20 ಕೋಟಿ ರೂ. ವಶಪಡಿಸಿಕೊಂಡಿದೆ. ಇದರಿಂದಾಗಿ ಶಿಕ್ಷಕರ ನೇಮಕಾತಿ ಬಹುಕೋಟಿ ಹಗರಣ ಹೊಸ ತಿರುವು ಪಡೆದುಕೊಂಡಿದೆ. ಇಂದು ಬೆಳಗಿನ ಜಾವ 4 ಗಂಟೆಯವರೆಗೆ ಅರ್ಪಿತಾ ಅವರ ಮನೆಯಲ್ಲಿ ಹಣ ಎಣಿಕೆ ನಡೆದಿದೆ. ಆದರೆ, ಎಷ್ಟು ಮೊತ್ತವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಿಖರವಾಗಿ ಇನ್ನೂ ಹೇಳಿಲ್ಲ. ಇದರ ನಡುವೆ ಅರ್ಪಿತಾ ಮುಖರ್ಜಿ ತಮ್ಮ ಮನೆಯಲ್ಲಿ ಕೋಟ್ಯಂತರ ರೂ ನೋಟುಗಳು ಇದ್ದರೂ 11,819 ರೂ. ಮೇಂಟೇನನ್ಸ್​ ಬಿಲ್ ಬಾಕಿ ಉಳಿಸಿಕೊಂಡಿದ್ದರು ಎಂಬ ವಿಚಾರ ಭಾರೀ ವೈರಲ್ ಆಗಿದೆ.

  1. ಶಿಕ್ಷಕರ ನೇಮಕಾತಿ ಹಗರಣದಲ್ಲಿ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ಬಂಧಿತರಾಗಿರುವ ಅವರ ಆಪ್ತೆ ಅರ್ಪಿತಾ ಮುಖರ್ಜಿ ಈ ಪ್ರಕರಣದ ಬಗ್ಗೆ ಮಾತನಾಡಿದ್ದು, ಸಚಿವ ಪಾರ್ಥ ಚಟರ್ಜಿಯವರು ನಮ್ಮ ಮನೆಯಲ್ಲಿ ಹಣ ಸಂಗ್ರಹಿಸಿಡುತ್ತಿದ್ದರು. ಅವರು ಮತ್ತು ನಮ್ಮ ಮನೆಯನ್ನು ಮಿನಿ ಬ್ಯಾಂಕ್ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ. ಈ ಹಿಂದೆ ಮಾಜಿ ನಟಿ, ರೂಪದರ್ಶಿ ಹಾಗೂ ಸಚಿವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 21 ಕೋಟಿ ರೂ. ನಗದು ಪತ್ತೆಯಾಗಿತ್ತು. ಶನಿವಾರ ಅರ್ಪಿತಾ ಮತ್ತು ಪಾರ್ಥ ಚಟರ್ಜಿಯನ್ನು ಬಂಧಿಸುವ ಮೊದಲು ಆಕೆಯ ಮನೆಯಲ್ಲಿ ಹಣದ ದೊಡ್ಡ ರಾಶಿ ಕಂಡುಬಂದಿತ್ತು.
  2. ಅರ್ಪಿತಾ ಮುಖರ್ಜಿ ಅವರನ್ನು ವಿಚಾರಣೆಗೊಳಪಡಿಸಿದ ನಂತರ ಇಡಿ ಅಧಿಕಾರಿಗಳು ಬೆಲ್ಗೋರಿಯಾ ಫ್ಲಾಟ್ ಮೇಲೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಲ್ಗೋರಿಯಾದ ಎರಡು ಫ್ಲಾಟ್‌ಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದೆ. ಆ ಫ್ಲಾಟ್​​ಗಳ ಪೈಕಿ ಒಂದರಲ್ಲಿ ಹಣ ಮತ್ತು ಚಿನ್ನ ಪತ್ತೆಯಾಗಿದೆ.
  3. ವಸೂಲಿಯಾದ ಹಣದ ಮೊತ್ತ 20 ರೂ. ಕೋಟಿ ಮೀರುವ ಸಾಧ್ಯತೆಯಿದ್ದು, ಅರ್ಪಿತಾ ಮುಖರ್ಜಿ ಅವರ ಮನೆಯ ಮೇಲೆ 11,819 ರೂ. ನಿರ್ವಹಣಾ ಮೊತ್ತ ಬಾಕಿ ಇದೆ ಎಂದು ನೋಟಿಸ್ ನೀಡಲಾಗಿದೆ.
  4. ನೋಟುಗಳ ಎಣಿಕೆ ಬುಧವಾರ ಸಂಜೆ 6 ಗಂಟೆಗೆ ಆರಂಭವಾಗಿ ಇಂದು ಬೆಳಗಿನ ಜಾವ 4 ಗಂಟೆಯವರೆಗೆ ನಡೆಯಿತು. ನೋಟುಗಳನ್ನು ಎಣಿಸಲು ದೊಡ್ಡ ಯಂತ್ರಗಳನ್ನು ತರಲಾಗಿತ್ತು. ಮನೆಯಲ್ಲಿ ಕೋಟ್ಯಂತರ ರೂ. ಇದ್ದರೂ ಅರ್ಪಿತಾ ಮುಖರ್ಜಿ ಮೇಂಟೇನನ್ಸ್​ ಹಣವಾದ 11,819 ರೂ.ಗಳನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು ಎಂಬುದರ ಬಿಲ್‌ನ ನೋಟೀಸ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
  5. ವರದಿಗಳ ಪ್ರಕಾರ, ಈ ಫ್ಲಾಟ್‌ನಿಂದ ನಗದು ಹೊರತುಪಡಿಸಿ ಸಾಕಷ್ಟು ಚಿನ್ನ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಚಿವ ಪಾರ್ಥ ಚಟರ್ಜಿ ಅವರು ದೀರ್ಘಕಾಲದಿಂದ ಸಿಬಿಐ, ಇಡಿ ತನಿಖೆಗಳನ್ನು ಎದುರಿಸುತ್ತಿದ್ದಾರೆ. ಆದರೂ ಅವರು ಯಾವುದೇ ಮಾಹಿತಿಯನ್ನು ಬಾಯಿ ಬಿಟ್ಟಿರಲಿಲ್ಲ. ಆದರೆ, ಅವರ ಆಪ್ತೆ ಅರ್ಪಿತಾ ಮುಖರ್ಜಿ ಈ ಬಗ್ಗೆ ಎಲ್ಲವನ್ನೂ ಹೇಳಲು ಆರಂಭಿಸಿದ್ದಾರೆ ಎನ್ನಲಾಗಿದೆ. ದಾಳಿ ವೇಳೆ ಇ.ಡಿ ತಂಡವು 40 ಪುಟಗಳ ಡೈರಿ ಹಾಗೂ ಆಸ್ತಿ ನೋಂದಣಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದು, ತನಿಖೆಯಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.
  6.  ಪಾರ್ಥ ಚಟರ್ಜಿ ತನ್ನ ಮನೆಯನ್ನು “ಮಿನಿ ಬ್ಯಾಂಕ್” ಆಗಿ ಬಳಸಿಕೊಂಡಿದ್ದಾರೆ ಎಂದು ಅರ್ಪಿತಾ ಮುಖರ್ಜಿ ಹೇಳಿಕೊಂಡಿದ್ದಾರೆ. ವಾರಕ್ಕೊಮ್ಮೆ ಇಲ್ಲವೇ 10 ದಿನಗಳಿಗೊಮ್ಮೆ ಭೇಟಿ ನೀಡುತ್ತಿದ್ದರು. ನಮ್ಮ ಮನೆಯ ಒಂದು ಕೋಣೆಯಲ್ಲಿ ರಾಶಿ ರಾಶಿ ಹಣ ಸಂಗ್ರಹಿಸಿಡುತ್ತಿದ್ದರು. ಆದರೆ ಅವರು ಈ ಹಣವನ್ನು ತಾವಾಗಿಯೇ ತರುತ್ತಿರಲಿಲ್ಲ. ಅವರ ಸಹಚರರು ತರುತ್ತಿದ್ದರು. ಹಣ ಸಂಗ್ರಹವಾಗುತ್ತಿದ್ದ ಕೋಣೆಯನ್ನು ಪ್ರವೇಶಿಸಲು ಎಂದಿಗೂ ನನಗೆ ಅನುಮತಿ ನೀಡುತ್ತಿರಲಿಲ್ಲ. ಅಲ್ಲಿ ಎಷ್ಟು ಹಣ ಇದೆ ಎಂಬುದನ್ನೂ ನನಗೆ ಹೇಳಿರಲಿಲ್ಲ ಎಂದು ಅರ್ಪಿತಾ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.
  7. ಶಿಕ್ಷರ ನೇಮಕಾತಿ, ವರ್ಗಾವಣೆ ಮತ್ತು ಕಾಲೇಜುಗಳಿಗೆ ಮಾನ್ಯತೆ ನೀಡಿದ್ದಕ್ಕೆ ಪ್ರತಿಯಾಗಿ ‘ಕಿಕ್‌ಬ್ಯಾಕ್‌’ ರೀತಿಯಲ್ಲಿ ಸಲ್ಲಿಕೆಯಾಗುತ್ತಿದ್ದ ಹಣ ಇದಾಗಿದೆ. ಪಾರ್ಥ ಚಟರ್ಜಿ ಅವರು 2016ರಿಂದಲೂ ಬೆಂಗಾಲಿ ನಟಿಯೊಬ್ಬರ ಜತೆ ಸಂಬಂಧ ಇಟ್ಟುಕೊಂಡಿದ್ದರು. ಆ ನಟಿಯೇ ನನ್ನನ್ನು ಪಾರ್ಥ ಚಟರ್ಜಿ ಅವರಿಗೆ ಪರಿಚಯಿಸಿದ್ದರು ಎಂದೂ ಅರ್ಪಿತಾ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
  8. ಬಂಧಿತ ಸಚಿವ ಪಾರ್ಥ ಚಟರ್ಜಿ ಬುಧವಾರ ರಾಜೀನಾಮೆ ನೀಡಬೇಕೆಂಬ ಒತ್ತಾಯವನ್ನು ಎದುರಿಸಿದರು. ಅದಕ್ಕೆ ಅವರು ನಾನು ರಾಜೀನಾಮೆ ನೀಡಬೇಕೆಂಬುದಕ್ಕೆ ಕಾರಣವೇ ಇಲ್ಲ ಎಂದು ಉತ್ತರ ನೀಡಿದ್ದರು.
  9. ಅರ್ಪಿತಾ ಮುಖರ್ಜಿ ಮನೆಯಿಂದ ಹಣವನ್ನು ವಶಪಡಿಸಿಕೊಂಡಿರುವುದು ಪಕ್ಷಕ್ಕೆ ಕಳಂಕ ತಂದಿದೆ ಎಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ. ಪಾರ್ಥ ಚಟರ್ಜಿ ಅವರು ತಾನೇಕೆ ಸಚಿವ ಸ್ಥಾನವನ್ನು ತ್ಯಜಿಸಬೇಕು? ಎಂದು ಪ್ರಶ್ನಿಸುತ್ತಿದ್ದಾರೆ. ಅವರು ತಾನು ನಿರಪರಾಧಿ ಎಂದು ಸಾರ್ವಜನಿಕ ವಲಯದಲ್ಲಿ ಏಕೆ ಹೇಳುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
  10. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಗ್ಗೆ ಮಾತನಾಡಿದ್ದು, ತಪ್ಪಿತಸ್ಥರೆಂದು ಸಾಬೀತಾದ ಯಾರಿಗಾದರೂ ಶಿಕ್ಷೆಯಾಗಬೇಕು. ಆದರೆ ಮಾಧ್ಯಮಗಳೇ ತೀರ್ಪು ನೀಡುತ್ತಿರುವುದನ್ನು ನಾವು ಒಪ್ಪಲು ಸಾಧ್ಯವಿಲ್ಲ. ರಾಜಕೀಯ ಪಕ್ಷಗಳನ್ನು ಕೆಣಕಲು ತನಿಖಾ ಸಂಸ್ಥೆಗಳನ್ನು ಬಳಸಬಾರದು ಎಂದು ಹೇಳಿದ್ದಾರೆ.
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು