ಚೆಸ್​​ ಒಲಿಂಪಿಯಾಡ್​​​ನಲ್ಲಿ ಭಾಗಿಯಾಗಲ್ಲ ಎಂದ ಪಾಕಿಸ್ತಾನ; ಪ್ರತಿಷ್ಠಿತ ಕಾರ್ಯಕ್ರಮವನ್ನು ಪಾಕ್ ರಾಜಕೀಯಗೊಳಿಸಿದೆ ಎಂದ ಭಾರತ

ಒಲಿಂಪಿಯಾಡ್ ಟಾರ್ಚ್ ರಿಲೇ ಜಮ್ಮು ಮತ್ತು ಕಾಶ್ಮೀರವನ್ನು ಹಾದು ಹೋಗುತ್ತಿದೆ ಎಂದು ಹೇಳಿ ಪಾಕಿಸ್ತಾನ ಚೆಸ್ ಒಲಿಂಪಿಯಾಡ್​​ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ

ಚೆಸ್​​ ಒಲಿಂಪಿಯಾಡ್​​​ನಲ್ಲಿ ಭಾಗಿಯಾಗಲ್ಲ ಎಂದ ಪಾಕಿಸ್ತಾನ; ಪ್ರತಿಷ್ಠಿತ ಕಾರ್ಯಕ್ರಮವನ್ನು ಪಾಕ್ ರಾಜಕೀಯಗೊಳಿಸಿದೆ ಎಂದ ಭಾರತ
ಅರಿಂದಮ್ ಬಾಗ್ಚಿ
TV9kannada Web Team

| Edited By: Rashmi Kallakatta

Jul 28, 2022 | 6:06 PM

ದೆಹಲಿ: ತಮಿಳುನಾಡಿನಲ್ಲಿ ಗುರುವಾರ ಆರಂಭವಾಗಿರುವ 44ನೇ ಚೆಸ್ ಒಲಿಂಪಿಯಾಡ್​​ನಿಂದ (44th Chess Olympiad )ಪಾಕಿಸ್ತಾನ (Pakistan) ತಮ್ಮ ತಂಡವನ್ನು ಹಿಂತೆಗೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾರತ ಪಾಕಿಸ್ತಾನ ಇಂಥಾ ಪ್ರತಿಷ್ಠಿತ ಕಾರ್ಯಕ್ರಮವನ್ನು ರಾಜಕೀಯಗೊಳಿಸಿದ್ದು ತುಂಬಾ ದುರದೃಷ್ಟಕರ ಎಂದಿದ್ದಾರೆ. ಪಾಕಿಸ್ತಾನದ ನಿರ್ಧಾರ ಬಗ್ಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ (Arindam Bagchi) ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಪಾಕಿಸ್ತಾನ ದಿಢೀರ್ ನಿರ್ಧಾರ ತೆಗೆದುಕೊಂಡಿದೆ ಎಂದಿದ್ದಾರೆ. ಭಾರತಕ್ಕೆ ಪಾಕಿಸ್ತಾನ ತಂಡ ತಲುಪಿತ್ತು. ಅಷ್ಟೊತ್ತಿಗೆ ಪ್ರತಿಷ್ಠಿತ ಅಂತರಾಷ್ಟ್ರೀಯ ಕಾರ್ಯಕ್ರಮದ ಬಗ್ಗೆ ಹೇಳಿಕೆ ನೀಡಿ ಅದನ್ನು ರಾಜಕೀಯಗೊಳಿಸಿ ಅದರಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವುದು ದುರದೃಷ್ಟಕರ ಎಂದಿದ್ದಾರೆ.

ಒಲಿಂಪಿಯಾಡ್ ಟಾರ್ಚ್ ರಿಲೇ ಜಮ್ಮು ಮತ್ತು ಕಾಶ್ಮೀರವನ್ನು ಹಾದು ಹೋಗುತ್ತಿದೆ ಎಂದು ಹೇಳಿ ಪಾಕಿಸ್ತಾನ ಚೆಸ್ ಒಲಿಂಪಿಯಾಡ್​​ನಿಂದ ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಾಗ್ಚಿ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್ ಭಾರತದ ಭಾಗವಾಗಿತ್ತು, ಆಗಿದೆ ಮತ್ತು ಅದು ಅವಿಭಾಜ್ಯ ಅಂಗವಾಗಿಯೇ ಇರಲಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada