ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹೊಗಳಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್

| Updated By: Lakshmi Hegde

Updated on: Oct 14, 2021 | 6:06 PM

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಚರ್ಚಿಸುವುದು ಸಮರ್ಥನೀಯವಾಗಿದ್ದರೂ, ಉಳಿದಂತೆ ಭದ್ರತೆ ಮತ್ತು ರಾಷ್ಟ್ರನಿರ್ಮಾಣದ ಇತರ ಕ್ಷೇತ್ರಗಳಲ್ಲೂ ಸ್ತ್ರೀಯರ ಪಾತ್ರವನ್ನು ಗುರುತಿಸಬೇಕು ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹೇಳಿದರು.

ಮಾಜಿ ಪ್ರಧಾನಿ ಇಂದಿರಾಗಾಂಧಿಯವರನ್ನು ಹೊಗಳಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ರಕ್ಷಣಾ ಸಚಿವ ರಾಜನಾಥ್​ ಸಿಂಗ್​
Follow us on

ಶಾಂಘೈ ಸಹಕಾರ ಸಂಸ್ಥೆಯ ಸೆಮಿನಾರ್​ನಲ್ಲಿ ಇಂದು ಮಾತನಾಡಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮಾಜಿ ಪ್ರಧಾನಿ ಇಂದಿರಾಗಾಂಧಿ (Indira Gandhi)ಯವರನ್ನು ಹೊಗಳಿದ್ದಾರೆ. ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದ ರಾಜನಾಥ್​ ಸಿಂಗ್(Rajnath Singh)​, ನಮ್ಮ ದೇಶದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಹಲವು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದಲ್ಲದೆ, ಇಂಡೋ-ಪಾಕ್​ ಯುದ್ಧದ ಸಮಯದಲ್ಲೂ ಗಟ್ಟಿಯಾಗಿ ನಿರ್ಧಾರವನ್ನು ಕೈಗೊಂಡು, ಆ ಕಠಿಣ ಸಮಯವನ್ನೂ ಎದುರಿಸಿದರು ಎಂದು ಹೇಳಿದರು. ಅಷ್ಟೇ ಅಲ್ಲ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿ, ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್​ ಬಗ್ಗೆಯೂ ಮಾತನಾಡಿದರು. ಹಾಗೇ, ರಾಷ್ಟ್ರೀಯ ಅಭಿವೃದ್ಧಿಗಾಗಿ ಮಹಿಳಾಶಕ್ತಿಯನ್ನು ಸಕಾರಾತ್ಮಕ ಬಳಸಿಕೊಳ್ಳುವಲ್ಲಿ ಭಾರತ ಅಪಾರ ಅನುಭವ ಹೊಂದಿದೆ ಎಂದೂ ಹೇಳಿದ್ದಾರೆ.  

ಸಶಸ್ತ್ರ ಪಡೆಗಳಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಚರ್ಚಿಸುವುದು ಸಮರ್ಥನೀಯವಾಗಿದ್ದರೂ, ಉಳಿದಂತೆ ಭದ್ರತೆ ಮತ್ತು ರಾಷ್ಟ್ರನಿರ್ಮಾಣದ ಇತರ ಕ್ಷೇತ್ರಗಳಲ್ಲೂ ಸ್ತ್ರೀಯರ ಪಾತ್ರವನ್ನು ಗುರುತಿಸಬೇಕು ಮತ್ತು ಅವರ ಪಾಲ್ಗೊಳ್ಳುವಿಕೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ರಾಜನಾಥ್​ ಸಿಂಗ್​ ಹೇಳಿದರು. ಹಾಗೇ, ನಮ್ಮ ರಾಷ್ಟ್ರಪತಿಗಳಾಗಿದ್ದ ಪ್ರತಿಭಾ ಪಟೇಲ್​ ಸಶಸ್ತ್ರಪಡೆಯ ಸರ್ವೋಚ್ಛ ಕಮಾಂಡರ್​ ಆಗಿದ್ದರು. ಒಮ್ಮೆ ಅವಲೋಕಿಸಿದರೆ ಇಂತ ಹಲವು ಉದಾಹರಣೆಗಳು ಸಿಗುತ್ತವೆ. ನಮ್ಮ ದೇಶವನ್ನು ರಕ್ಷಿಸಲು ಕೈಯಿಗೆ ಶಸ್ತ್ರ ತೆಗೆದುಕೊಂಡ ಸ್ತ್ರೀಯರು ಅನೇಕರಿದ್ದಾರೆ. ಅವರಲ್ಲಿ ಪ್ರಮುಖವಾಗಿ ರಾಣಿ ಲಕ್ಷ್ಮೀಬಾಯಿ ಸದಾ ಸ್ಮರಣೀಯರು, ಗೌರವಾರ್ಹರು ಎಂದು ಹೇಳಿದ್ದಾರೆ.

ಸರಸ್ವತಿ ಜ್ಞಾನ ದೇವತೆಯಾಗಿದ್ದರೆ, ತಾಯಿ ದುರ್ಗಾ ರಕ್ಷಣೆ, ಬಲದ ಪ್ರತೀಕವಾಗಿದ್ದಾಳೆ. ಈ ತಾಯಿ ವಿನಾಶ ಮತ್ತು ಯುದ್ಧದ ಸಂಕೇತವೂ ಹೌದು ಎಂದು ಹೇಳಿದ ರಾಜನಾಥ್​ ಸಿಂಗ್, ಸಶಸ್ತ್ರಪಡೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಗೆ ಮುಕ್ತ ಅವಕಾಶ ನೀಡಿದ ಕೆಲವೇ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಈಗಂತೂ ಭಾರತೀಯ ಸೇನೆಯಲ್ಲಿ ಮಹಿಳಾ ಸೈನಿಕರಿಗೆ ಶಾಶ್ವತ ಆಯೋಗ ರಚನೆಯಾಗಿದೆ ಎಂದು ತಿಳಿಸಿದರು. ಇನ್ನು ಶತಮಾನಗಳಿಂದಲೂ ಭಾರತೀಯ ಸೇನೆಯ ನರ್ಸಿಂಗ್​ ಸೇವೆ ವಿಭಾಗದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದು ಹೆಮ್ಮೆಯ ವಿಷಯ ಎಂದರು.

ಇದನ್ನೂ ಓದಿ: Fire Accident: ತೈವಾನ್​ನಲ್ಲಿ ಭಾರೀ ಬೆಂಕಿ ದುರಂತ; 46 ಜನ ಸಜೀವ ದಹನ, 41ಕ್ಕೂ ಹೆಚ್ಚು ಮಂದಿಗೆ ಗಾಯ

ಸಲಗಕ್ಕೆ ಫ್ಯಾನ್ಸ್​ ಜೈಕಾರ; ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಅಭಿಮಾನಿಗಳು ಏನ್​ ಹೇಳಿದ್ರು?