Fire Accident: ತೈವಾನ್ನಲ್ಲಿ ಭಾರೀ ಬೆಂಕಿ ದುರಂತ; 46 ಜನ ಸಜೀವ ದಹನ, 41ಕ್ಕೂ ಹೆಚ್ಚು ಮಂದಿಗೆ ಗಾಯ
Taiwan Fire Accident: 13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ಮಹಡಿಗಳು ಸುಟ್ಟು ಕರಕಲಾಗಿವೆ. ತೈವಾನ್ನಲ್ಲಿ ನಡೆದ ಈ ದುರಂತದಲ್ಲಿ 41 ಜನರು ಗಾಯಗೊಂಡಿದ್ದು, 46 ಮಂದಿ ಸಜೀವ ದಹನವಾಗಿದ್ದಾರೆ.
ತೈವಾನ್: ದಕ್ಷಿಣ ತೈವಾನ್‌ನ ನಗರವಾದ ಕಾಹೊಹ್ಸ್ಯುಂಗ್ನಲ್ಲಿ ನಿನ್ನೆ ರಾತ್ರಿ ಕಟ್ಟಡವೊಂದಕ್ಕೆ ಬೆಂಕಿ ತಗುಲಿದ್ದು, 46 ಜನರು ಸಾವನ್ನಪ್ಪಿದ್ದಾರೆ. 13 ಮಹಡಿಗಳ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಗ್ನಿ ದುರಂತದಲ್ಲಿ ಸಾಕಷ್ಟು ಜನರು ಗಾಯಗೊಂಡಿದ್ದಾರೆ. ಅಗ್ನಿಶಾಮಕ ದಳದವರು ಅದನ್ನು ನಿಯಂತ್ರಣಕ್ಕೆ ತರುವ ಮುನ್ನ ಅನೇಕ ಮಹಡಿಗಳಿಗೆ ಬೆಂಕಿ ವ್ಯಾಪಿಸಿದೆ.
13 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಹಲವು ಮಹಡಿಗಳು ಸುಟ್ಟು ಕರಕಲಾಗಿವೆ. ಈ ದುರಂತದಲ್ಲಿ 41 ಜನರು ಗಾಯಗೊಂಡಿದ್ದು, 46 ಮಂದಿ ಸಜೀವ ದಹನವಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಸಾವನ್ನಪ್ಪಿದವರಲ್ಲಿ ಬಹುತೇಕರು 7ನೇ ಮಹಡಿಯಲ್ಲಿ ವಾಸವಾಗಿದ್ದವರು. ಈ ಮಹಡಿಯಲ್ಲಿ ಸಾಕಷ್ಟು ಬಾಡಿಗೆ ಮನೆಗಳಿದ್ದು, ರಾತ್ರಿ ಎಲ್ಲರೂ ನಿದ್ರೆ ಮಾಡುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಉಳಿದ ಮಹಡಿಗಳಲ್ಲಿ ಕಮರ್ಷಿಯಲ್ ಅಂಗಡಿಗಳು ಕೂಡ ಇದ್ದು, ಹೆಚ್ಚೇನೂ ಅನಾಹುತಗಳು ಸಂಭವಿಸಿಲ್ಲ. ಮೊದಲ 5 ಮಹಡಿಗಳನ್ನು ಕಮರ್ಷಿಯಲ್ ಬಳಕೆಗೆ ನೀಡಲಾಗಿತ್ತು. ರಾತ್ರಿಯ ವೇಲೆ ಎಲ್ಲರೂ ಮನೆಗೆ ತೆರಳಿದ್ದರಿಂದ ಆ ಮಹಡಿಗಳಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿ ಆರ್ಥಿಕ ನಷ್ಟ ಮಾತ್ರ ಸಂಭವಿಸಿದೆ. ಅಲ್ಲಿ ಪ್ರಾಣಹಾನಿಯೇನೂ ಆಗಿಲ್ಲ.
ಇದನ್ನೂ ಓದಿ: ಮುಂಬೈನ ಕುರ್ಲಾದಲ್ಲಿ ಅಗ್ನಿ ಅವಘಡ: 20 ದ್ವಿಚಕ್ರವಾಹನಗಳು ಸುಟ್ಟು ಭಸ್ಮ
ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಸ್ಫೋಟ; ಸುತ್ತಮುತ್ತ 300-400 ಮೀಟರ್ ವ್ಯಾಪಿಸಿರುವ ಬೆಂಕಿ
Published On - 5:46 pm, Thu, 14 October 21