Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್​​ಗೆ ಚಾಕುವಿನಿಂದ ಇರಿದ ಮಹಿಳೆ

ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್​​ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ನಡೆದಿದೆ. ದ್ವಾರಕಾದ ಸೆಕ್ಟರ್ 23ರಲ್ಲಿ ಶುಕ್ರವಾರದಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿ: ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್​​ಗೆ ಚಾಕುವಿನಿಂದ ಇರಿದ ಮಹಿಳೆ
ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್​​ಗೆ ಚಾಕುವಿನಿಂದ ಇರಿದ ಮಹಿಳೆ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 23, 2023 | 2:23 PM

ದೆಹಲಿ,ಆ.23: ವಿಳಾಸ ಕೇಳುವ ನೆಪದಲ್ಲಿ ಡೆಲಿವರಿ ಬಾಯ್​​ಗೆ (delivery boy) ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ನೈಋತ್ಯ ದೆಹಲಿಯ ದ್ವಾರಕಾದಲ್ಲಿ ನಡೆದಿದೆ. ದ್ವಾರಕಾದ ಸೆಕ್ಟರ್ 23ರಲ್ಲಿ ಶುಕ್ರವಾರದಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಇಬ್ಬರ ನಡುವಿನ ಸಂವಹನ ನಡೆಸಿರುವ ಬಗ್ಗೆ ವಿಡಿಯೋದಲ್ಲಿ ತೋರಿಸಲಾಗಿದೆ. ಪೊಲೀಸರ ಪ್ರಕಾರ, ಮಹಿಳೆ ಚಾಕುವಿನಿಂದ ಡೆಲಿವರಿ ಬಾಯ್ ಮೇಲೆ ಮೂರ್ನಾಲ್ಕು ಬಾರಿ ಹಲ್ಲೆ ನಡೆಸಿದ್ದಾಳೆ ಎಂದು ಹೇಳಲಾಗಿದೆ.

ವೀಡಿಯೋದಲ್ಲಿ, ಮಹಿಳೆಯು ಡೆಲಿವರಿ ಬಾಯ್​​ಯೊಂದಿಗೆ ಮಾತನಾಡಲು ಅವನ ಹಿಂದೆ ಹೋಗುತ್ತಿರುವುದನ್ನು ಕಾಣಬಹುದು. ಆತ ಮಾತನಾಡಲು ಹಿಂದೆ ತಿರುಗಿದಾಗ, ಆಕೆ ವೇಗವಾಗಿ ಆತನ ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಾಳೆ. ಇನ್ನು ಈ ಮಹಿಳೆ ಡೆಲಿವರಿ ಬಾಯ್ ಸ್ಕೂಟರ್‌ ಕೀಯನ್ನು ಕೂಡ ಪಕ್ಕದಲ್ಲಿದ್ದ ಪೊದೆಗೆ ಎಸೆಯುತ್ತಿರುವ ದೃಶ್ಯವನ್ನು ನೋಡಬಹುದು.

ಈ ಘಟನೆಯನ್ನು ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸುತ್ತಿದ್ದಂತೆ ಡೆಲಿವರಿ ಬಾಯ್​ನ್ನು ನೆಲಕ್ಕೆ ತಳ್ಳುತ್ತಾಳೆ. ಜತೆಗೆ ಆತನ ಸ್ಕೂಟಿಯ ಟೈರ್​​ನ್ನು ಚಾಕುವಿನಿಂದ 20 ಸೆಕೆಂಡುಗಳ ಕಾಲ ಕತ್ತರಿಸಲು ಪ್ರಯತ್ನಿಸುತ್ತಾಳೆ. ಸ್ಥಳಕ್ಕೆ ಬಂದ ಸ್ಥಳೀಯರಿಗೆ ಚಾಕು ತೋರಿಸಿ ಭಯಪಡಿಸಲು ಮುಂದಾಗುತ್ತಾಳೆ. ಇನ್ನೊಂದು ಕಡೆ ಪೊಲೀಸರಿಗೂ ಈ ವಿಚಾರದ ಬಗ್ಗೆ ಸ್ಥಳೀಯರು ತಿಳಿಸುತ್ತಾರೆ. ಸ್ಥಳಕ್ಕೆ ಬಂದು ಪೊಲೀಸರು ಆಕೆಯಿಂದ ಚಾಕನ್ನು ಕಸಿದುಕೊಳ್ಳುತ್ತಾರೆ.

ಇದನ್ನೂ ಓದಿ:ಗ್ರಾಹಕರ ಹೂಕುಂಡವೇನೋ ಒಡೆಯಿತು, ಡೆಲಿವರಿ ಸಿಬ್ಬಂದಿ ಮುಂದೇನು ಮಾಡಿದ?

ಈ ಸಮಯದಲ್ಲಿ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಆಕೆ ಪಕ್ಕದಲ್ಲಿದ್ದ ಕೋಲು ಎತ್ತಿಕೊಂಡು ಪೊಲೀಸರು ಮತ್ತು ಸ್ಥಳೀಯರ ಕಾರುಗಳ ಮೇಲೆ ದಾಳಿ ಮಾಡುತ್ತಾಳೆ. ಆಕೆಯನ್ನು ಹಿಡಿಯಲು ಮಹಿಳಾ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಸ್ಥಳೀಯ ನಿವಾಸಿಗಳ ಪ್ರಕಾರ, 42 ವರ್ಷದ ಈ ಮಹಿಳೆ ಡಿಡಿಎ ಫ್ಲಾಟ್‌ನಲ್ಲಿ ಬಾಡಿಗೆದಾರರಾಗಿ ಏಕಾಂಗಿಯಾಗಿ ವಾಸಿಸುತ್ತಿದ್ದರು ಮತ್ತು ತನ್ನ ನೆರೆಹೊರೆಯವರೊಂದಿಗೆ ಇಂತಹ ಅನೇಕ ಜಗಳಗಳನ್ನು ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಈಕೆಯ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಡೆಲಿವರಿ ಬಾಯ್​​ನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಡೆಲಿವರಿ ಬಾಯ್​​ಯಿಂದ ಮಾಹಿತಿಯನ್ನು ಪಡೆದಿದ್ದು, ತನಿಖೆಯನ್ನು ನಡೆಸಲಾಗುವುದು ಮತ್ತು ಆಕೆಯ ಹಿಂದಿನ ಇತಿಹಾಸ ಏನು? ಎಂಬುದನ್ನು ಕೂಡ ತಿಳಿದುಕೊಳ್ಳಲಾಗುವುದು. ಇದರ ಜತೆಗೆ ಪೊಲೀಸರ ಮೇಲೆ ಹಲ್ಲೆ ಮಾಡಿದಕ್ಕಾಗಿ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್​​ ಅಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ