Sign In

By signing in or creating an account, you agree with Associated Broadcasting Company's Terms & Conditions and Privacy Policy.

TiE India Internet Day; ಬೆಂಗಳೂರು, ದೆಹಲಿ, ಭುವನೇಶ್ವರದಲ್ಲಿ ಕಾರ್ಯಕ್ರಮಗಳು; ದಿನಾಂಕ ಮತ್ತಿತರ ವಿವರ ತಿಳಿಯಿರಿ

iDay Celebration From TiE: ದಿ ಇಂಡಸ್ ಆಂಟ್ರಪ್ರೆನ್ಯೂರ್ಸ್ (TiE) ಗುಂಪಿನ ವತಿಯಿಂದ 12ನೇ ಆವೃತ್ತಿಯ ಇಂಡಿಯಾ ಇಂಟರ್ನೆಟ್ ಡೇ ಅನ್ನು ಆಗಸ್ಟ್ 24ರಂದು ಆಚರಿಸಲಾಗುತ್ತಿದೆ. ದೆಹಲಿಯ ಬಳಿಕ ಆಗಸ್ಟ್ 26ರಂದು ಬೆಂಗಳೂರಿನಲ್ಲಿ, ಆಗಸ್ಟ್ 29ರಂದು ಭುವನೇಶ್ವರದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿವಿಧ ಗಣ್ಯರು ಚರ್ಚಾಗೋಷ್ಠಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

TiE India Internet Day; ಬೆಂಗಳೂರು, ದೆಹಲಿ, ಭುವನೇಶ್ವರದಲ್ಲಿ ಕಾರ್ಯಕ್ರಮಗಳು; ದಿನಾಂಕ ಮತ್ತಿತರ ವಿವರ ತಿಳಿಯಿರಿ
ಇಂಡಿಯಾ ಇಂಟರ್ನೆಟ್ ಡೇ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 23, 2023 | 10:43 AM

ನವದೆಹಲಿ, ಆಗಸ್ಟ್ 23: ನಾಳೆ (ಆಗಸ್ಟ್ 24) TiE ಸಂಸ್ಥೆ ವತಿಯಿಂದ ಇಂಡಿಯಾ ಇಂಟರ್ನೆಟ್ ಡೇ (iDay) ಆಚರಿಸಲಾಗುತ್ತಿದೆ. ಇದು 12ನೇ ಆವೃತ್ತಿಯ ಐಡೇ ಆಗಲಿದ್ದು, ದೆಹಲಿ ವಿಭಾಗದ TiE ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ‘ಎಐ ಪವರ್ಡ್ ಇಂಡಿಯಾ: ವಿಷನ್ ಅಂಡ್ ರಿಯಾಲಿಟಿ’ ಎಂಬುದು ಈ 12ನೇ ಆವೃತ್ತಿಯ ಕಾರ್ಯಕ್ರಮದ ಥೀಮ್. ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ವ್ಯಾವಹಾರಿಕ ರೂಪುರೇಖೆಯನ್ನು ಹೇಗೆ ಬದಲಾಯಿಸುತ್ತಿದೆ ಎಂಬುದನ್ನು ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ. ಆಗಸ್ಟ್ 25ರಂದು ಬೆಂಗಳೂರಿನಲ್ಲೂ ಈ ಕಾರ್ಯಕ್ರಮ ನಡೆಯುತ್ತದೆ. ಕರ್ನಾಟಕ ರಾಜ್ಯ ಸರ್ಕಾರದ ಐಟಿ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನ ಓಲಾ ಸಹ-ಸಂಸ್ಥಾಪಕ ಭವೀಶ್ ಅಗರ್ವಾಲ್ ಮೊದಲಾದವರು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಇಂಡಿಯಾ ಇಂಟರ್ನೆಟ್ ಡೇ ಮೊದಲ ಬಾರಿಗೆ ಆಯೋಜಿಸಿದ್ದು 2012ರಲ್ಲಿ. ಆಗಿನಿಂದ ಇದು ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಭಾರತದ ಸ್ಟಾರ್ಟಪ್ ನಗರಿಗಳೆನಿಸಿದ ಬೆಂಗಳೂರು, ದೆಹಲಿ ಮತ್ತು ಭುಬನೇಶ್ವರ್​ನಲ್ಲಿ ಐಡೇ ಆಚರಿಸಲಾಗುತ್ತದೆ. ಬೆಂಗಳೂರಿನಲ್ಲಿ ಆಗಸ್ಟ್ 25ರಂದು ಕಾರ್ಯಕ್ರಮ ನಡೆಯುತ್ತದೆ. ಮೂರನೇ ಸ್ಟಾರ್ಟಪ್ ಹಬ್ ಎನಿಸಿದ ಒಡಿಶಾದ ಭುವನೇಶ್ವರ್ ನಗರದಲ್ಲಿ ಆಗಸ್ಟ್ 29ರಂದು ಚರ್ಚಾಗೋಷ್ಠಿ ನಡೆಯುತ್ತದೆ.

ಇದನ್ನೂ ಓದಿ: ಟಾಟಾ ಗ್ರೂಪ್ ಮಾಲಕತ್ವದ ಕ್ಯಾರಟ್​ಲೇನ್ ಕಂಪನಿಯ ಉದ್ಯೋಗಿಗಳಿಗೆ ಸಿಗಲಿದೆ 340 ಕೋಟಿ ರೂ ಮೊತ್ತದ ಪಾಲು

TiEಯಿಂದ ನಡೆಯುವ ಇಂಡಿಯಾ ಇಂಟರ್ನೆಟ್ ಡೇ ಕಾರ್ಯಕ್ರಮದಲ್ಲಿ ಮಾತನಾಡುವ ಕೆಲ ಗಣ್ಯರಿವರು:

  • ಪ್ರಿಯಾಂಕ್ ಖರ್ಗೆ, ಕರ್ನಾಟಕ ಐಟಿ ಸಚಿವ
  • ಭವೀಶ್ ಅಗರ್ವಾಲ್, ಓಲಾ ಕ್ಯಾಬ್ಸ್ ಸಹ-ಸಂಸ್ಥಾಪಕ
  • ರಾಣಾ ಬರುವಾ, ಹಾವಸ್ ಇಂಡಿಯಾ ಗ್ರೂಪ್ ಸಿಇಒ
  • ವಾಣಿ ಕೋಲ, ಕಳಾರಿ ಕ್ಯಾಪಿಟಲ್ ಎಂಡಿ
  • ಅಂಕುರ್ ವಾರಿಕೂ ಗುಡ್, ವೆಬ್​ವೇದ ಸಂಸ್ಥಾಪಕ
  • ಪ್ರಿಯಾಂಕಾ ಗಿಲ್, ಗುಡ್ ಮೀಡಿಯಾ ಸಿಇಒ ಮತ್ತು ಗ್ಲಾಮ್ ಗ್ರೂಪ್ ಸಂಸ್ಥಾಪಕರು
  • ಪೀಯುಶ್ ಬನ್ಸಾಲ್, ಲೆನ್ಸ್​ಕಾರ್ಟ್ ಸಹ-ಸಂಸ್ಥಾಪಕರು
  • ದೀಪ್ ಕಾಲ್ರ, ಮೇಕ್ ಮೈ ಟ್ರಿಪ್ ಸಂಸ್ಥಾಪಕರು
  • ರಾಜನ್ ಆನಂದನ್, ಪೀಕ್ ಎಕ್ಸ್​ವಿ ಪಾರ್ಟ್ನರ್ಸ್ ಅಂಡ್ ಸರ್ಜ್ ಸಂಸ್ಥೆಯ ಎಂಡಿ
  • ಆಶೀಶ್ ಮೋಹಪಾತ್ರ, ಆಫ್​ಬ್ಯುಸಿನೆಸ್ ಮತ್ತು ಆಕ್ಸಿಝೋ ಸಹ-ಸಂಸ್ಥಾಪಕರು
  • ಆಂಶೂ ಶರ್ಮಾ, ಮ್ಯಾಜಿಕ್​ಪಿನ್ ಸಹ-ಸಂಸ್ಥಾಪಕರು

ಇದನ್ನೂ ಓದಿ: ಒಂದು ಕಾಲದಲ್ಲಿ ಗೂರ್ಖಾ ಪಡೆಗಳಿಂದ ರಕ್ಷಣೆ ಪಡೆದಿದ್ದ ಈ ಸುಲ್ತಾನನ ಬಳಿ 500 ರೋಲ್ಸ್ ರಾಯ್ಸ್, 300 ಫೆರಾರಿ ಸೇರಿ 7,000 ವಾಹನಗಳು

ಇಂಡಿಯಾ ಇಂಟರ್ನೆಟ್ ಡೇ ಯಾಕಾಗಿ?

ಭಾರತದ ಅಂತರ್ಜಾಲ ಉದ್ಯಮದ ಗಣ್ಯರನ್ನು ಒಂದು ವೇದಿಕೆ ತಂದು ವಿಚಾರ ವಿನಿಯಮಕ್ಕೆ ಆಸ್ಪದ ಮಾಡುವ ಉದ್ದೇಶದಿಂದ ಭಾರತ ಅಂತರ್ಜಾಲ ದಿನ ಅಥವಾ ಇಂಡಿಯಾ ಇಂಟರ್ನೆಟ್ ಡೇ ಅನ್ನು ಆಚರಿಸಲಾಗುತ್ತಿದೆ. ಹೊಸ ಸ್ಟಾರ್ಟಪ್ ಸಂಸ್ಥಾಪಕರಿಗೆ ಈ ಉದ್ಯಮದ ಹಿರಿಯರೊಂದಿಗೆ ಮುಖಾಮುಖಿಯಾಗುವ ಮತ್ತು ನೇರವಾಗಿ ಸಂವಾದ ನಡೆಸುವ ಹಾಗೂ ಈ ಮೂಲಕ ಹೊಸ ಸಾಧ್ಯಾಸಾಧ್ಯತೆಗಳನ್ನು ಅವಲೋಕಿಸುವ ಅವಕಾಶ ಈ ಕಾರ್ಯಕ್ರಮದಿಂದ ಸಿಗುತ್ತದೆ.

ಏನಿದು TiE?

TiE ಎಂದರೆ ದಿ ಇಂಡಸ್ ಆಂಟ್ರಪ್ರನ್ಯೂರ್ಸ್. ಇಂಡಸ್ ಪ್ರದೇಶ, ಅಂದರೆ ಭಾರತೀಯ ಉಪಖಂಡದ ಪ್ರದೇಶ ಮೂಲದ ಯಶಸ್ವಿ ಉದ್ಯಮಿಗಳು, ಕಾರ್ಪೊರೇಟ್ ಎಕ್ಸಿಕ್ಯೂಟಿವ್​ಗಳು, ಹಿರಿಯ ವೃತ್ತಿಪರರ ಒಂದು ಗುಂಪು ಇದು. ದೆಹಲಿ-ಎನ್​ಸಿಆರ್, ಬೆಂಗಳೂರು ಸೇರಿದಂತೆ ವಿಶ್ವದ ಅನೇಕ ನಗರಗಳಲ್ಲಿ ಇದರ ವಿಭಾಗಗಳಿವೆ. ಈ ವರ್ಷದ ಇಂಡಿಯಾ ಇಂಟರ್ನೆಟ್ ಡೇ ಆಯೋಜಿಸಿರುವ ದೆಹಲಿ-ಎನ್​ಸಿಆರ್​ನ TiE ಚಾಪ್ಟರ್ ಬಹಳ ಸಕ್ರಿಯವಾಗಿರುವ ವಿಭಾಗಗಳಲ್ಲಿ ಒಂದು.

ಈ ವರ್ಷದ ಆಚರಣೆಯಲ್ಲಿ ಇಡೀ ವರ್ಷಾದ್ಯಂತ ವಿವಿಧ ಮಾಸ್ಟರ್​ಕ್ಲಾಸ್​ಗಳು, ವರ್ಕ್​ಶಾಪ್​ಗಳು ನಡೆಯಲಿವೆ. ನವೋದ್ಯಮಿಗಳಿಗೆ ಸಹಾಯಕವಾಗಬಲ್ಲಂತಹ ವಿವಿಧ ಸ್ತರದ ಕಾರ್ಯಕ್ರಮಗಳು ವರ್ಷಾದ್ಯಂತ ಆಯೋಜಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ