AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಾಟಾ ಗ್ರೂಪ್ ಮಾಲಕತ್ವದ ಕ್ಯಾರಟ್​ಲೇನ್ ಕಂಪನಿಯ ಉದ್ಯೋಗಿಗಳಿಗೆ ಸಿಗಲಿದೆ 340 ಕೋಟಿ ರೂ ಮೊತ್ತದ ಪಾಲು

Caratlane Employees To Get Over Rs 300 Cr: ಭಾರತದ ಆನ್​ಲೈನ್ ರೀಟೇಲ್ ಆಭರಣ ಕಂಪನಿ ಕ್ಯಾರಟ್​ಲೇನ್​ನ ಹೆಚ್ಚುವರಿ ಷೇರುಪಾಲನ್ನು ಟೈಟಾನ್ ಕಂಪನಿ ಖರೀದಿಸುತ್ತಿದೆ. ಇದರ ಒಪ್ಪಂದದ ಅನ್ವಯ ಎಂಪ್ಲಾಯಿ ಷೇರ್ ಓನರ್​ಶಿಪ್ ಪ್ರೋಗ್ರಾಮ್ ಅಡಿಯಲ್ಲಿ ಕ್ಯಾರಟ್​ಲೇನ್​ನ ಕೆಲ ಉದ್ಯೋಗಿಗಳಿಗೆ 340ರಿಂದ 380 ಕೋಟಿ ರೂ ಸಿಗಲಿದೆ.

ಟಾಟಾ ಗ್ರೂಪ್ ಮಾಲಕತ್ವದ ಕ್ಯಾರಟ್​ಲೇನ್ ಕಂಪನಿಯ ಉದ್ಯೋಗಿಗಳಿಗೆ ಸಿಗಲಿದೆ 340 ಕೋಟಿ ರೂ ಮೊತ್ತದ ಪಾಲು
ಕ್ಯಾರಟ್​ಲೇನ್ ಕಂಪನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 22, 2023 | 6:28 PM

Share

ನವದೆಹಲಿ, ಆಗಸ್ಟ್ 22: ಭಾರತದ ಆನ್​ಲೈನ್ ಆಭರಣ ವ್ಯಾಪಾರ ಸಂಸ್ಥೆ ಕ್ಯಾರಟ್​ಲೇನ್​ನ (CaratLane) ಉದ್ಯೋಗಿಗಳಿಗೆ ಬಂಪರ್ ಗಿಫ್ಟ್ ಸಿಕ್ಕುತ್ತಿದೆ. ಟಾಟಾ ಗ್ರೂಪ್ ಮಾಲಿಕತ್ವದ ಟೈಟಾನ್ ಕಂಪನಿ ಕ್ಯಾರಟ್​ಲೇನ್​ನ ಷೇರುಪಾಲು ಹೆಚ್ಚಿಸಿಕೊಳ್ಳುತ್ತಿರುವುದು ಕ್ಯಾರಟ್​ಲೇನ್​ನ ಕೆಲ ಉದ್ಯೋಗಿಗಳನ್ನು ಕೋಟ್ಯಾಧೀಶ್ವರರನ್ನಾಗಿಸುತ್ತಿದೆ. ಟೈಟಾನ್​ನಿಂದ ಷೇರುಖರೀದಿಗೆ ಆಗಿರುವ ಒಪ್ಪಂದದ ಪ್ರಕಾರ ಕ್ಯಾರಟ್​ಲೇನ್​ನ ಷೇರುಗಳನ್ನು ಹೊಂದಿರುವ ಉದ್ಯೋಗಿಗಳಿಗೆ ಒಟ್ಟು 340 ಕೋಟಿ ರೂನಿಂದ 380 ಕೋಟಿ ರೂವರೆಗೆ ಹಣ ಸಿಗಲಿದೆ. ಉದ್ಯೋಗಿ ಷೇರುದಾರಿಕೆ ಯೋಜನೆ (ESOP- Empoyee Stock Ownership Programme) ಅಡಿ ಈ ಸೌಲಭ್ಯ ನೀಡಲಾಗುತ್ತಿದೆ.

ಕ್ಯಾರಟ್​ಲೇನ್ ಕಂಪನಿಯ ಸಂಸ್ಥಾಪಕರಾದ ಮಿಥುನ್ ಸಂಚೇತಿ ಮತ್ತು ಶ್ರೀನಿವಾಸ ಗೋಪಾಲನ್ ಹಾಗೂ ಅವರ ಕುಟುಂಬ ಸದಸ್ಯರುಗಳು ಹೊಂದಿರುವ ಶೇ. 27.18ರಷ್ಟು ಷೇರುಗಳನ್ನು ಟೈಟಾನ್ ಕಂಪನಿ 4,621 ಕೋಟಿ ರುಪಾಯಿ ಒಪ್ಪಂದದಲ್ಲಿ ಖರೀದಿಸುತ್ತಿದೆ. ಇದರೊಂದಿಗೆ ಕ್ಯಾರಟ್​ಲೇನ್ ಕಂಪನಿಯಲ್ಲಿ ಟೈಟಾನ್ ಪಾಲುದಾರಿಕೆ ಶೇ. 98.28ಕ್ಕೆ ಏರಲಿದೆ.

ಇದನ್ನೂ ಓದಿ: ಒಂದು ಕಾಲದಲ್ಲಿ ಗೂರ್ಖಾ ಪಡೆಗಳಿಂದ ರಕ್ಷಣೆ ಪಡೆದಿದ್ದ ಈ ಸುಲ್ತಾನನ ಬಳಿ 500 ರೋಲ್ಸ್ ರಾಯ್ಸ್, 300 ಫೆರಾರಿ ಸೇರಿ 7,000 ವಾಹನಗಳು

75 ಮಂದಿ ಉದ್ಯೋಗಿಗಳ ಪಾಲಾಗಲಿದೆ 340ರಿಂದ 380 ಕೋಟಿ ರೂ

ಕ್ಯಾರಟ್​ಲೇನ್ ಕಂಪನಿಯಲ್ಲಿ ಸರಿಸುಮಾರು 1,500 ಉದ್ಯೋಗಿಗಳು ರೀಟೇಲ್ ಮಾರಾಟ ಮತ್ತು ಮ್ಯಾನುಫ್ಯಾಕ್ಚರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ಸುಮಾರು 400 ಮಂದಿ ಉದ್ಯೋಗಿಗಳು ಕಾರ್ಪೊರೇಟ್ ಸ್ಟಾಫ್​ನಲ್ಲಿ ಇದ್ದಾರೆ. ಈ ಕಾರ್ಪೊರೇಟ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ಕಂಪನಿಯ ಷೇರುಗಳನ್ನು ಹಂಚಲಾಗುತ್ತದೆ. ಈ 400 ಮಂದಿ ಕಾರ್ಪೊರೇಟ್ ಸಿಬ್ಬಂದಿ ಪೈಕಿ 75 ಮಂದಿ ಮಾತ್ರ ಕ್ಯಾರಟ್​ಲೇನ್ ಷೇರು ಹೊಂದಿರುವುದು. ಒಟ್ಟಾರೆ ಉದ್ಯೋಗಿಗಳಲ್ಲಿ ಇವರ ಪ್ರಮಾಣ ಶೇ. 2ಕ್ಕಿಂತಲೂ ಕಡಿಮೆ.

ಇದನ್ನೂ ಓದಿ: Bengaluru Girl: ಬೆಂಗಳೂರಿನ 22 ವರ್ಷದ ಮಹಿಳಾ ಪೋಸ್ಟ್ ಮಾಸ್ಟರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಲ್ ಗೇಟ್ಸ್

ಈ 75 ಮಂದಿಗೆ ಎಂಪ್ಲಾಯಿ ಸ್ಟಾಕ್ ಓವರ್​ಶಿಪ್ ಪ್ಲಾನ್ ಅಡಿ 340 ರಿಂದ 380 ಕೋಟಿ ರೂ ಹಂಚಿಕೆ ಆಗುತ್ತದೆ. ಉದ್ಯೋಗಿಗಳ ಷೇರುಮಾಲಕತ್ವದ ಪ್ರಮಾಣಕ್ಕೆ ಅನುಗುಣವಾಗಿ ಹಣದ ಹಂಚಿಕೆ ಆಗುತ್ತದೆ. ಹೆಚ್ಚು ಷೇರು ಹೊಂದಿದ್ದವರಿಗೆ ಹೆಚ್ಚು ಹಣ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:26 pm, Tue, 22 August 23

Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
Video: ತಂದೆ ತಾಯಿ ಜಗಳದಲ್ಲಿ ಮಗಳು ಸತ್ತೇ ಹೋದಳು!
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
ಎಣ್ಣೆ ನಶೆಯಲ್ಲಿ ನಾಯಿ ಜೊತೆ ಯುವಕನ ಡ್ಯಾನ್ಸ್​​: ವಿಡಿಯೋ ವೈರಲ್​
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ನಮಗೊಂದು ಟ್ವೀಟ್ ಮಾಡಿಕೊಡಿ: ಕೇರಳ ಸಿಎಂಗೆ ದುಂಬಾಲು ಬಿದ್ದ ಬಿಜೆಪಿ!
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು