AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ: ಮನೀಶ್​ ಸಿಸೋಡಿಯಾ ಸೇರಿ 20 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಎಎಪಿ

ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್​ ಆದ್ಮಿ ಪಕ್ಷವು 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಪಟ್ಪರ್ಗಂಜ್ ಶಾಸಕರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕ್ಷೇತ್ರವನ್ನು ಬದಲಾಯಿಸಿದೆ.

ದೆಹಲಿ: ಮನೀಶ್​ ಸಿಸೋಡಿಯಾ ಸೇರಿ 20 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಎಎಪಿ
ಮನೀಶ್​ ಸಿಸೋಡಿಯಾ Image Credit source: Deccan Herald
ನಯನಾ ರಾಜೀವ್
|

Updated on: Dec 09, 2024 | 2:00 PM

Share

ಮುಂಬರಲಿರುವ ದೆಹಲಿ ವಿಧಾನಸಭಾ ಚುನಾವಣೆಗೆ ಆಮ್​ ಆದ್ಮಿ ಪಕ್ಷವು 20 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಪಟ್ಪರ್ಗಂಜ್ ಶಾಸಕರಾಗಿರುವ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕ್ಷೇತ್ರವನ್ನು ಬದಲಾಯಿಸಿದೆ.

ಈಗ ಅವರು ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸಿಸೋಡಿಯಾ ಅವರ ಸ್ಥಾನ – ಪತ್ಪರ್ಗಂಜ್ – ಶಿಕ್ಷಣತಜ್ಞ ಮತ್ತು ಜನಪ್ರಿಯ ಯೂಟ್ಯೂಬರ್ ಅವಧ್ ಓಜಾ ಅವರಿಗೆ ನೀಡಲಾಯಿತು – ಅವರು ಇತ್ತೀಚೆಗೆ ಆಡಳಿತ ಪಕ್ಷಕ್ಕೆ ಸೇರಿದ್ದರು. ಈ ಪಟ್ಟಿಯಲ್ಲಿ ಜೀತೇಂದರ್​ ಸಿಂಗ್ ಶುಂಟಿ (ಶಹದಾರದಿಂದ ಕಣಕ್ಕಿಳಿದಿದ್ದಾರೆ) ಮತ್ತು ಸುರೀಂದರ್ ಪಾಲ್ ಸಿಂಗ್ ಬಿಟ್ಟು (ತಿಮಾರ್‌ಪುರ್) ಅವರ ಹೆಸರುಗಳೂ ಸೇರಿವೆ, ಅವರು ಇತ್ತೀಚೆಗೆ ಬಿಜೆಪಿಯನ್ನು ತೊರೆದು ಎಎಪಿ ಸೇರಿದ್ದಾರೆ.

ಹಾಲಿ ಎಎಪಿ ಶಾಸಕ ಮತ್ತು ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರನ್ನು ಸಿಂಗ್ ಹೆಸರಿಗೆ ಬದಲಿಸಿದರೆ, ಸದನದಲ್ಲಿ ಎಎಪಿಯ ಮುಖ್ಯ ಸಚೇತಕ ದಿಲೀಪ್ ಪಾಂಡೆ ಬದಲಿಗೆ ಬಿಟ್ಟು ಅವರನ್ನು ಕಣಕ್ಕಿಳಿಸಲಾಗಿದೆ.

ಪ್ರಮುಖ ಮಾಹಿತಿ 17 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ ತಂದೆಗೆ ಟಿಕೆಟ್ ಸಿಗದ 2 ಶಾಸಕರ ಪುತ್ರರಿಗೆ ಟಿಕೆಟ್ ನೀಡಲಾಗಿದೆ ಈ ಪಟ್ಟಿಯಲ್ಲಿ 17 ಹೊಸ ಹೆಸರುಗಳಿವೆ ಇಬ್ಬರು ಶಾಸಕರ ಸ್ಥಾನ ಬದಲಾಗಿದೆ ಕಳೆದ ಚುನಾವಣೆಯಲ್ಲಿ ಸೋತಿದ್ದ ದೀಪು ಚೌಧರಿ ಅವರಿಗೆ ಗಾಂಧಿ ನಗರದಿಂದ ಟಿಕೆಟ್ ನೀಡಲಾಗಿತ್ತು ತಿಮಾರ್‌ಪುರ ಶಾಸಕ ದಿಲೀಪ್ ಪಾಂಡೆ ಅವರ ಟಿಕೆಟ್ ಸುರೇಂದ್ರ ಪಾಲ್ ಬಿಟ್ಟು ಅವರಿಗೆ ನೀಡಲಾಗಿದೆ. ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ ಶಾಸಕ ಪ್ರಹ್ಲಾದ್ ಸಿಂಗ್ ಸಾಹ್ನಿ ಪುತ್ರ ಪ್ರದೀಪ್ ಸಿಂಗ್ ಸಾಹ್ನಿ ಅವರಿಗೆ ಟಿಕೆಟ್ ನೀಡಲಾಗಿದೆ.

ಮತ್ತಷ್ಟು ಓದಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿ ಸ್ಪರ್ಧೆ; ಆಪ್ ಜೊತೆ ಮೈತ್ರಿ ಇಲ್ಲ ಎಂದು ಘೋಷಣೆ

ಕೃಷ್ಣನಗರದಿಂದ ಶಾಸಕ ಎಸ್.ಕೆ.ಬಗ್ಗಾ ಅವರ ಪುತ್ರ ವಿಕಾಸ್ ಬಗ್ಗಗೆ ಟಿಕೆಟ್ ನೀಡಲಾಗಿದೆ. ಎಎಪಿ ತನ್ನ ಮೊದಲ ಪಟ್ಟಿಯಲ್ಲಿ 11 ಅಭ್ಯರ್ಥಿಗಳನ್ನು ಚುನಾವಣೆಗೆ ಘೋಷಿಸಿತ್ತು. 70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿಗೂ ಮೊದಲು ಚುನಾವಣೆ ನಡೆಯಲಿದೆ.

ಅಭ್ಯರ್ಥಿಯ ಹೆಸರು ಮತ್ತು ಕ್ಷೇತ್ರ ನರೇಲಾ – ದಿನೇಶ್ ಭಾರದ್ವಾಜ್ ತಿಮಾರ್ಪುರ್ – ಸುರೇಂದರ್ ಪಾಲ್ ಸಿಂಗ್ ಬಿಟ್ಟು ಆದರ್ಶ ನಗರ – ಮುಖೇಶ್ ಗೋಯೆಲ್ ಮುಂಡ್ಕ – ಜಸ್ಬೀರ್ ಕರಾಲ ಮಂಗೋಲ್ಪುರಿ – ರಾಕೇಶ್ ಜಾತವ್ ಧರ್ಮರಕ್ಷಕ ರೋಹಿಣಿ – ಪ್ರದೀಪ್ ಮಿತ್ತಲ್ ಚಾಂದಿನಿ ಚೌಕ್ – ಪುನರ್ದೀಪ್ ಸಿಂಗ್ ಸಾಹ್ನಿ ಪಟೇಲ್ ನಗರ – ಪರ್ವೇಶ್ ರತನ್ ಮದಿಪುರ – ರಾಖಿ ಬಿಡ್ಲಾನ್ ಜನಕಪುರಿ – ಪ್ರವೀಣ್ ಕುಮಾರ್ ಬಿಜ್ವಾಸನ್ – ಸುರೇಂದ್ರ ಭಾರದ್ವಾಜ್

ಪಾಲಂ – ಜೋಗಿಂದರ್ ಸೋಲಂಕಿ ಜಂಗ್ಪುರ – ಮನೀಶ್ ಸಿಸೋಡಿಯಾ ದಿಯೋಲಿ – ಪ್ರೇಮ್ ಕುಮಾರ್ ಚೌಹಾಣ್ ತ್ರಿಲೋಕಪುರಿ – ಅಂಜನಾ ಪರ್ಚಾ ಪತ್ಪರ್ಗಂಜ್ – ಅವಧ್ ಓಜಾ ಕೃಷ್ಣ ನಗರ – ವಿಕಾಸ್ ಬಗ್ಗ ಗಾಂಧಿ ನಗರ – ನವೀನ್ ಚೌಧರಿ (ದೀಪು) ಶಹದಾರ –  ಜಿತೇಂದರ್ ಸಿಂಗ್ ಶುಂಟಿ ಮುಸ್ತಫಾಬಾದ್ – ಆದಿಲ್ ಅಹ್ಮದ್ ಖಾನ್

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ