
ನವದೆಹಲಿ: ಒಂದು ಕಾಲದಲ್ಲಿ ದೆಹಲಿಯಲ್ಲಿ ಪ್ರಬಲವಾಗಿದ್ದ ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ಈ ವರ್ಷ ಸೋಲಿನತ್ತ ಮುಖ ಮಾಡಿದೆ. ಏಕೆಂದರೆ, ಹೆಚ್ಚಿನ ಎಕ್ಸಿಟ್ ಪೋಲ್ ಸಮೀಕ್ಷೆ ಫಲಿತಾಂಶಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸೋಲನ್ನಪ್ಪಲಿದೆ ಎಂದು ಭವಿಷ್ಯ ನುಡಿದಿದೆ. 1998ರಿಂದ 2013ರವರೆಗೆ ದೆಹಲಿಯನ್ನು ಆಳಿದ ಕಾಂಗ್ರೆಸ್ 2015 ಮತ್ತು 2020ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ವರ್ಷದ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಹೆಚ್ಚಿನ ಸಮೀಕ್ಷಕರು ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ವಿಫಲವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗಾಗಿ, ಈ ಬಾರಿ ದೆಹಲಿಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಪಡೆಯುವುದು ಕೂಡ ಕಷ್ಟಕರವಾಗಿದೆ ಎನ್ನಲಾಗುತ್ತಿದೆ.
ಹೆಚ್ಚಿನ ನಿರ್ಗಮನ ಸಮೀಕ್ಷೆಗಳು ದೆಹಲಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಗೆ ಭಾರೀ ಗೆಲುವು ಸಿಗಲಿದೆ ಎಂದು ಹೇಳಿವೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಈ ವರ್ಷ ಅಧಿಕಾರದಿಂದ ಕೆಳಗಿಳಿಯುವ ಭವಿಷ್ಯ ನುಡಿದಿವೆ. ಪೀಪಲ್ಸ್ ಪಲ್ಸ್ ಬಿಜೆಪಿಗೆ ಭಾರಿ ಗೆಲುವು ಎಂದು ಭವಿಷ್ಯ ನುಡಿದಿದೆ. ಬಿಜೆಪಿ 51-60 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದ್ದರೆ, ಎಎಪಿ 10-19 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದೆ. ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದಿದೆ.
ಇದನ್ನೂ ಓದಿ: ದೆಹಲಿ ವಿಧಾನಸಭಾ ಚುನಾವಣೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮತದಾನ
ಚಾಣಕ್ಯ ಸ್ಟ್ರಾಟಜೀಸ್ ನಿರ್ಗಮನ ಸಮೀಕ್ಷೆಯು ಬಿಜೆಪಿ 39-44 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ. ಎಎಪಿ 25-28 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಚಾಣಕ್ಯ ಸ್ಟ್ರಾಟಜೀಸ್ ಕಾಂಗ್ರೆಸ್‌ಗೆ ಕೇವಲ ಮೂರು ಸ್ಥಾನ ಪಡೆಯಲಿದೆ ಎಂದು ಹೇಳಿದೆ. ಬೇರೆಲ್ಲ ಸಮೀಕ್ಷೆಗಳಿಗಿಂತ ಈ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಘೋಷಿಸಲಾಗಿದೆ.
ಮ್ಯಾಟ್ರಿಜ್ ಮಾತ್ರ ನೇರ ಪೈಪೋಟಿಯನ್ನು ಭವಿಷ್ಯ ನುಡಿದಿರುವ ಏಕೈಕ ನಿರ್ಗಮನ ಸಮೀಕ್ಷೆಯಾಗಿದೆ. ಬಿಜೆಪಿ 35-40 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಹೇಳಿದೆ. ಎಎಪಿ 32-37 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದಿದೆ. ಕಾಂಗ್ರೆಸ್‌ಗೆ 0-1 ಸ್ಥಾನಗಳ ಭವಿಷ್ಯ ನುಡಿದಿದೆ.
ಜೆವಿಸಿ ಚುನಾವಣೋತ್ತರ ಸಮೀಕ್ಷೆಯು ಬಿಜೆಪಿಗೆ 39-45 ಸ್ಥಾನಗಳು ಮತ್ತು ಆಮ್ ಆದ್ಮಿ ಪಕ್ಷಕ್ಕೆ 22-31 ಸ್ಥಾನಗಳು ಸಿಗಲಿವೆ ಎಂದು ಭವಿಷ್ಯ ನುಡಿದಿದೆ. ಅದು ಕಾಂಗ್ರೆಸ್‌ಗೆ 0-2 ಸ್ಥಾನಗಳ ಭವಿಷ್ಯ ನುಡಿದಿದೆ.
ಇದನ್ನೂ ಓದಿ: ಆಪ್ಗೆ ಭಾರೀ ಹಿನ್ನಡೆ, 27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಾಧ್ಯತೆ; ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ
ಪಿ-ಮಾರ್ಕ್ ಬಿಜೆಪಿಗೆ 39-49 ಸ್ಥಾನಗಳು ಮತ್ತು ಎಎಪಿಗೆ 21-31 ಸ್ಥಾನಗಳನ್ನು ನೀಡಿದೆ. ಅದು ಕಾಂಗ್ರೆಸ್‌ಗೆ 0-1 ಸ್ಥಾನವನ್ನು ನೀಡಿದೆ. ಪೀಪಲ್ಸ್ ಇನ್‌ಸೈಟ್ ಕೂಡ ಬಿಜೆಪಿಗೆ 40-44 ಸ್ಥಾನಗಳು ಮತ್ತು ಎಎಪಿಗೆ 25-29 ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್ 0-1 ಸ್ಥಾನವನ್ನು ಗೆಲ್ಲುತ್ತದೆ ಎಂದು ಅದು ಹೇಳಿದೆ. ಪೋಲ್ ಡೈರಿ ಬಿಜೆಪಿಗೆ 42-50 ಸ್ಥಾನಗಳು ಮತ್ತು ಎಎಪಿಗೆ 18-25 ಸ್ಥಾನಗಳನ್ನು ನೀಡಿದೆ. ಕಾಂಗ್ರೆಸ್ 0-2 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅದು ಭವಿಷ್ಯ ನುಡಿದಿದೆ.
2015 ಮತ್ತು 2020 ರ ವಿಧಾನಸಭಾ ಚುನಾವಣೆ:
2015ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ 70 ಸ್ಥಾನಗಳಲ್ಲಿ 67 ಸ್ಥಾನಗಳನ್ನು ಗೆದ್ದಿತ್ತು. ಉಳಿದ 3 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ತನ್ನ ಖಾತೆಯನ್ನು ತೆರೆಯಲು ಸಹ ಸಾಧ್ಯವಾಗಲಿಲ್ಲ. ಆಮ್ ಆದ್ಮಿ ಪಕ್ಷ (ಎಎಪಿ) 2020ರಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡಿತು. ಆಮ್ ಆದ್ಮಿ ಪಕ್ಷವು 62 ಸ್ಥಾನಗಳನ್ನು ಗೆದ್ದಿತು. ಬಿಜೆಪಿ 8 ಸ್ಥಾನಗಳನ್ನು ಗೆದ್ದುಕೊಂಡಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ