ಆಪ್​ಗೆ ಭಾರೀ ಹಿನ್ನಡೆ, 27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಾಧ್ಯತೆ; ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ

Delhi Exit Poll 2025: ದೆಹಲಿಯಲ್ಲಿ ಇಂದು ಮುಂಜಾನೆಯಿಂದ ನಡೆದ ವಿಧಾನಸಭೆ ಚುನಾವಣೆ ಅಂತ್ಯಗೊಂಡಿದೆ. ಈಗಾಗಲೇ ಚುನಾವಣೋತ್ತರ ಸಮೀಕ್ಷೆಗಳ ವರದಿಗಳು ಪ್ರಕಟವಾಗಲಾರಂಭಿಸಿದ್ದು, ಅದರ ಪ್ರಕಾರ, ಬಿಜೆಪಿ ಭಾರೀ ಬಹುಮತದಿಂದ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಆಮ್ ಆದ್ಮಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಯಾವೆಲ್ಲ ಚುನಾವಣೋತ್ತರ ಸಮೀಕ್ಷೆಗಳು ಏನು ಹೇಳುತ್ತವೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಲಿದೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಇಲ್ಲಿದೆ.

ಆಪ್​ಗೆ ಭಾರೀ ಹಿನ್ನಡೆ, 27 ವರ್ಷದ ಬಳಿಕ ದೆಹಲಿಯಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಾಧ್ಯತೆ; ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟ
Delhi Elections Exit Poll
Follow us
ಸುಷ್ಮಾ ಚಕ್ರೆ
|

Updated on:Feb 05, 2025 | 7:18 PM

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ದೈನಿಕ ಭಾಸ್ಕರ್ ಸಮೀಕ್ಷೆಯಂತೆ ದೆಹಲಿಯಲ್ಲಿ ಮತ್ತೊಮ್ಮೆ ಆಮ್ ಆದ್ಮಿ ಪಕ್ಷಕ್ಕೆ ಜನರು ಸರ್ಕಾರ ರಚಿಸುವ ಅವಕಾಶ ನೀಡಲಿದ್ದಾರೆ. ಆದರೆ, ಮ್ಯಾಟ್ರಿಜ್​ ಸಮೀಕ್ಷೆ, ಪೀಪಲ್​ ಇನ್​ಸೈಟ್​​​, ಪೀಪಲ್ ಪಲ್ಸ್​, ಡಿವಿ ರಿಸರ್ಚ್‌, ಚಾಣಕ್ಯ ಸ್ಟ್ರಾಟಜಿ ಪ್ರಕಾರ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗಲಿದೆ. 27 ವರ್ಷಗಳ ನಂತರ ಬಿಜೆಪಿ ದೆಹಲಿಯಲ್ಲಿ ಪುನರಾಗಮನ ಮಾಡಲಿದೆ ಎಂದು ಬಹುತೇಕ ಸಮೀಕ್ಷೆದಾರರು ಭವಿಷ್ಯ ನುಡಿದಿದ್ದಾರೆ. ಈ ರೇಸ್​ನಲ್ಲಿ ಎಎಪಿ ಎರಡನೇ ಸ್ಥಾನದಲ್ಲಿದೆ.

ಮ್ಯಾಟ್ರಿಜ್​ ಸಮೀಕ್ಷೆ:

ಬಿಜೆಪಿ: 35-40 ಸ್ಥಾನ

ಪೀಪಲ್​ ಇನ್​ಸೈಟ್​​​:

ಬಿಜೆಪಿ: 40-44

ಆಮ್​ ಆದ್ಮಿ ಪಕ್ಷ: 25-29

ಕಾಂಗ್ರೆಸ್​ ಪಕ್ಷ: 1

ಪಿ-ಮಾರ್ಕ್‌ ಸಮೀಕ್ಷೆ:

ಬಿಜೆಪಿ: 39-49

ಆಮ್ ಆದ್ಮಿ ಪಕ್ಷ: 21-31

ಕಾಂಗ್ರೆಸ್‌: 0

ಇತರರು: 0

ಡಿವಿ ರಿಸರ್ಚ್‌:

ಬಿಜೆಪಿ 36-44

ಆಪ್‌: 26-34

ಕಾಂಗ್ರೆಸ್: 0

ಇತರರು: 0

ಪೀಪಲ್ ಪಲ್ಸ್​:

ಬಿಜೆಪಿ: 51-60

ಎಎಪಿ: 10-19

ಚಾಣಕ್ಯ ಸ್ಟ್ರಾಟಜಿ:

ಬಿಜೆಪಿ: 39-44

ಆಪ್‌: 25-28

ಕಾಂಗ್ರೆಸ್: 2-3

ಇತರರು: 0

ದೈನಿಕ ಭಾಸ್ಕರ್:

ಆಪ್‌: 43-47

ಬಿಜೆಪಿ: 23-27

ಕಾಂಗ್ರೆಸ್: 0-1

ದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ಇಂದು ತಮ್ಮ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ ಮತದಾನವನ್ನು ಚಲಾಯಿಸಿದರು. ಮತದಾನ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು ಮತ್ತು ಸಂಜೆ 6 ಗಂಟೆಯವರೆಗೆ ನಡೆಯಿತು. ಇದು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಯಾಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಕ್ಷವು ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ರಚಿಸುತ್ತದೆ. ಚುನಾವಣಾ ಆಯೋಗವು ಫೆಬ್ರವರಿ 8ರ ಶನಿವಾರ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:06 pm, Wed, 5 February 25

ದೇವರ ಗುಡಿ ಕಟ್ಟಿ ಪಾಪ ತೊಳೆದುಕೊಳ್ಳಲು ಮುಂದಾಗಿದ್ದ ಬಾಗಪ್ಪ ಹರಿಜನ!
ದೇವರ ಗುಡಿ ಕಟ್ಟಿ ಪಾಪ ತೊಳೆದುಕೊಳ್ಳಲು ಮುಂದಾಗಿದ್ದ ಬಾಗಪ್ಪ ಹರಿಜನ!
ರೌಡಿಶೀಟರ್ ಬಾಗಪ್ಪ ಹರಿಜನ್ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅರೋಪಿಯಾಗಿದ್ದ
ರೌಡಿಶೀಟರ್ ಬಾಗಪ್ಪ ಹರಿಜನ್ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅರೋಪಿಯಾಗಿದ್ದ
ಎಐ ಆ್ಯಪ್​ಗಳ ಲೋಪ ಎತ್ತಿತೋರಿಸಿದ ಮೋದಿ
ಎಐ ಆ್ಯಪ್​ಗಳ ಲೋಪ ಎತ್ತಿತೋರಿಸಿದ ಮೋದಿ
ಊಹಾಪೋಹಗಳನ್ನು ನೆಚ್ಚಿಕೊಂಡು ಸುದ್ದಿಗಳನ್ನು ಬಿತ್ತರಿಸಬೇಡಿ: ಖರ್ಗೆ
ಊಹಾಪೋಹಗಳನ್ನು ನೆಚ್ಚಿಕೊಂಡು ಸುದ್ದಿಗಳನ್ನು ಬಿತ್ತರಿಸಬೇಡಿ: ಖರ್ಗೆ
ತುಮಕೂರು: ಸರ್ಕಾರಿ ವಸತಿ ನಿಲಯದ 20 ವಿದ್ಯಾರ್ಥಿಗಳು ಅಸ್ವಸ್ಥ
ತುಮಕೂರು: ಸರ್ಕಾರಿ ವಸತಿ ನಿಲಯದ 20 ವಿದ್ಯಾರ್ಥಿಗಳು ಅಸ್ವಸ್ಥ
ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಸುಳಿವು ನೀಡಿದ ಮಲ್ಲಿಕಾರ್ಜುನ್​ ಖರ್ಗೆ
ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಸುಳಿವು ನೀಡಿದ ಮಲ್ಲಿಕಾರ್ಜುನ್​ ಖರ್ಗೆ
ತನ್ನ ಸಹೋದರ ರವಿ ಹತ್ಯೆಯ ಸೇಡನ್ನು ಪ್ರಕಾಶ್ @ಪಿಂಟೂ ತೀರಿಸಿಕೊಂಡನೇ?
ತನ್ನ ಸಹೋದರ ರವಿ ಹತ್ಯೆಯ ಸೇಡನ್ನು ಪ್ರಕಾಶ್ @ಪಿಂಟೂ ತೀರಿಸಿಕೊಂಡನೇ?
ಕುಂಭಮೇಳದಲ್ಲಿ ಭಾಗಿಯಾಗುವ ಅಗತ್ಯವಿಲ್ಲ ಅಂದಿದ್ಯಾಕೆ ಶಿವಕುಮಾರ್?
ಕುಂಭಮೇಳದಲ್ಲಿ ಭಾಗಿಯಾಗುವ ಅಗತ್ಯವಿಲ್ಲ ಅಂದಿದ್ಯಾಕೆ ಶಿವಕುಮಾರ್?
‘ಮಜಾ ಟಾಕೀಸ್​’ನಲ್ಲಿ ಪ್ರೇಮಿಗಳು; ಈ ಬಾರಿ ಮತ್ತಷ್ಟು ಮನರಂಜನೆ ಪಕ್ಕಾ 
‘ಮಜಾ ಟಾಕೀಸ್​’ನಲ್ಲಿ ಪ್ರೇಮಿಗಳು; ಈ ಬಾರಿ ಮತ್ತಷ್ಟು ಮನರಂಜನೆ ಪಕ್ಕಾ 
Video: ಮಾರ್ಸಿಲ್ಲೆಗೆ ಬಂದಿಳಿದ ಪ್ರಧಾನಿ ಮೋದಿ, ಸಾವರ್ಕರ್​ಗೆ ಗೌರವ
Video: ಮಾರ್ಸಿಲ್ಲೆಗೆ ಬಂದಿಳಿದ ಪ್ರಧಾನಿ ಮೋದಿ, ಸಾವರ್ಕರ್​ಗೆ ಗೌರವ