ದೆಹಲಿ ಉದ್ಯಮಿ ಹತ್ಯೆ: ಯಾರನ್ನೋ ಕೊಲ್ಲಲು ಬಂದವರು ಮತ್ಯಾರನ್ನೋ ಕೊಂದ್ರು
ಬೆಳಗ್ಗೆ ವಾಕಿಂಗ್ಗೆಂದು ತೆರಳಿದ್ದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ಶನಿವಾರ ನಡೆದಿದೆ. ಆದರೆ ಆರೋಪಿಗಳು ಕೊಲ್ಲಲು ಬಂದಿದ್ದು ಯಾರನ್ನೋ ಹತ್ಯೆ ಮಾಡಿದ್ದು ಮತ್ಯಾರನ್ನೋ ಎಂದು ಉದ್ಯಮಿ ಸುನಿಲ್ ಜೈನ್ ಸುಮಿತ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ಬೆಳಗ್ಗೆ ವಾಕಿಂಗ್ಗೆಂದು ತೆರಳಿದ್ದ ಉದ್ಯಮಿಯೊಬ್ಬರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ಶನಿವಾರ ನಡೆದಿದೆ. ಆದರೆ ಆರೋಪಿಗಳು ಕೊಲ್ಲಲು ಬಂದಿದ್ದು ಯಾರನ್ನೋ ಹತ್ಯೆ ಮಾಡಿದ್ದು ಮತ್ಯಾರನ್ನೋ ಎಂದು ಉದ್ಯಮಿ ಸುನಿಲ್ ಜೈನ್ ಸುಮಿತ್ ಎನ್ಡಿಟಿವಿಗೆ ತಿಳಿಸಿದ್ದಾರೆ.
ದೆಹಲಿಯ ಶಾಹದಾರ ಜಿಲ್ಲೆಯ ಫರ್ಶ್ ಬಜಾರ್ ಪ್ರದೇಶದಲ್ಲಿ ಶನಿವಾರ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಸುನಿಲ್ ಅವರ ಮೇಲೆ ಗುಂಡು ಹಾರಿಸಿದ್ದರು. ಮೊದಲು ಸುನಿಲ್ ಬಳಿ ನಿಮ್ಮ ಮೊಬೈಲ್ ಬಿದ್ದಿದೆ ಎಂದು ಹೇಳಿದರು, ಬಳಿಕ ಹರಿಯಾನ್ವಿ ಭಾಷೆಯಲ್ಲಿ ವಿರಾಟ್ ಎಂದರೆ ಯಾರು ಎಂದು ವಿಚಾರಿಸಿದ್ದರು. ಅದಕ್ಕೆ ಸುನಿಲ್ ಯಾರೆಂದು ಗೊತ್ತಿಲ್ಲ ಎಂದು ಹೇಳಿದ್ದರು. ಆಗ ದಾಳಿಕೋರರಲ್ಲಿ ಒಬ್ಬನು ಜೈನ್ ಅವರನ್ನು ತೋರಿಸುತ್ತಾ ಇವರೇ ಎಂದು ಕೂಗಿದ್ದಾನೆ. ದಾಳಿಕೋರ ಜೈನ್ ಮೇಲೆ ಏಳರಿಂದ ಎಂಟು ಬಾರಿ ಗುಂಡು ಹಾರಿಸಿದ್ದ.
ಪೊಲೀಸರು ವಿರಾಟ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ಅವರ ಜೀವಕ್ಕೂ ಅಪಾಯವಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿ ಆಕಾಶ್ ಶರ್ಮಾ ಮತ್ತು ರಿಷಭ್ ಎಂಬ ಇಬ್ಬರನ್ನು ಕೊಂದಿದ್ದಕ್ಕಾಗಿ ಅಪ್ರಾಪ್ತನನ್ನು ಕಳೆದ ತಿಂಗಳು ಬಂಧಿಸಲಾಗಿತ್ತು, ಅಪ್ರಾಪ್ತನ ತಂದೆಯ ಹೆಸರು ವಿರಾಟ್ ಎಂಬುದು ತಿಳಿದುಬಂದಿದೆ. ಶೂಟರ್‌ಗಳು ಹುಡುಕುತ್ತಿದ್ದ ವಿರಾಟ್ ಅವರೇ ಎಂಬುದು ಇನ್ನೂ ಖಚಿತವಾಗಿಲ್ಲ.
ಮತ್ತಷ್ಟು ಓದಿ: ವಾಕಿಂಗ್ ಮುಗಿಸಿ ಬರುತ್ತಿದ್ದ ವ್ಯಕ್ತಿಗೆ ದೆಹಲಿಯಲ್ಲಿ ಗುಂಡಿಕ್ಕಿ ಹತ್ಯೆ; ಬಿಜೆಪಿ ವಿರುದ್ಧ ಅರವಿಂದ್ ಕೇಜ್ರಿವಾಲ್ ಆಕ್ರೋಶ
ಉದ್ಯಮಿಯನ್ನು ಕೊಲ್ಲಲು ಶೂಟರ್ಸ್ 9 ಎಂಎಂ ಮತ್ತು 7.61 ಎಂಎಂ ಪಿಸ್ತೂಲ್‌ಗಳನ್ನು ಬಳಸಿದ್ದಾರೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮೃತರು ಕೃಷ್ಣನಗರದ ನಿವಾಸಿಯಾಗಿದ್ದು, ಪಾತ್ರೆ ಅಂಗಡಿ ಇಟ್ಟುಕೊಂಡಿದ್ದರು, ಯಾರ ಜತೆಯೂ ವೈಷಮ್ಯವಿರಲಿಲ್ಲ ಎಂಬುದು ತಿಳಿದುಬಂದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ