Breaking News: ಡಿಸೆಂಬರ್ 8ಕ್ಕೆ ಭಾರತ್ ಬಂದ್! ರೈತ ಒಕ್ಕೂಟಗಳ ಘೋಷಣೆ
ಪಂಜಾಬ್ ರೈತರು ಡಿಸೆಂಬರ್ 8ರಂದು ಭಾರತ್ ಬಂದ್ ಘೋಷಿಸಿದ್ದಾರೆ.
ದೆಹಲಿ: ಪಂಜಾಬ್ ರೈತರು ಡಿಸೆಂಬರ್ 8ರಂದು ಭಾರತ್ ಬಂದ್ಗೆ ಕರೆ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಒಮ್ಮತ ಮೂಡದ ಕಾರಣ ದೆಹಲಿ ಚಲೋ ಬಂದ್ ಸ್ವರೂಪ ಪಡೆಯಲಿದೆ. ದೆಹಲಿಯ ಎಲ್ಲ ಟೋಲ್ ಬೂತ್ ಮತ್ತು ರಸ್ತೆಗಳನ್ನು ಬಂದ್ ಮಾಡಲಿದ್ದೇವೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಭೂಸುಧಾರಣಾ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ 9 ದಿನಗಳಿಂದ ಪಂಜಾಬ್ನ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಕೇಂದ್ರದ ಜೊತೆ ಹಲವು ಸುತ್ತಿನ ಸಭೆ ನಡೆಸಿದ ನಂತರವೂ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಬಂದ್ಗೆ ಕರೆ ಕೊಡಲಾಗಿದೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.
ಪ್ರಧಾನಿ ಪ್ರತಿಕೃತಿ ದಹನ, ಪ್ರಶಸ್ತಿ ವಾಪಸ್
ಡಿಸೆಂಬರ್ 5 ರಂದು ಪ್ರಧಾನಿ, ಕಾರ್ಪೊರೇಟ್ ಕಂಪನಿಗಳ ಪ್ರತಿಕೃತಿಯನ್ನು ದಹಿಸಲು ರೈತರು ನಿರ್ಧರಿಸಿದ್ದಾರೆ. ಡಿಸೆಂಬರ್ 7 ರಂದು ಹಲವು ಕ್ರೀಡಾಪಟುಗಳು ಪ್ರಶಸ್ತಿ ವಾಪಸ್ ಮಾಡಲಿದ್ದಾರೆ ಎಂದು ರೈತ ಒಕ್ಕೂಟಗಳು ತಿಳಿಸಿವೆ.
Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
Published On - 5:40 pm, Fri, 4 December 20