Delhi Chaloಗೆ ಸಿಗುತ್ತಿದೆ ರಾಷ್ಟ್ರವ್ಯಾಪಿ ಬೆಂಬಲ: ಪಂಜಾಬ್​ ಕೃಷಿಕರಿಗೆ ದೊರೆಯಲಿದೆ ಕರುನಾಡ ರೈತರ ಬಲ

| Updated By: KUSHAL V

Updated on: Dec 05, 2020 | 2:08 PM

ಹಲವು ರಾಜ್ಯಗಳ ರೈತರು ದೆಹಲಿ ಚಲೋದ ಭಾಗವಾಗುವ ಸೂಚನೆ ದೊರೆಯುತ್ತಿದೆ. ಇದೀಗ, ದಕ್ಷಿಣ ಭಾರತದ ರಾಜ್ಯಗಳ ರೈತರೂ ಸಹ ಪಂಜಾಬ್ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

Delhi Chaloಗೆ ಸಿಗುತ್ತಿದೆ ರಾಷ್ಟ್ರವ್ಯಾಪಿ ಬೆಂಬಲ: ಪಂಜಾಬ್​ ಕೃಷಿಕರಿಗೆ ದೊರೆಯಲಿದೆ ಕರುನಾಡ ರೈತರ ಬಲ
ದೆಹಲಿಯತ್ತ ಪ್ರವಾಹೋಪಾದಿಯಲ್ಲಿ ಧಾವಿಸುತ್ತಿರುವ ರೈತರ ಗುಂಪು
Follow us on

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತ ಪರ ಸಂಘಟನೆಗಳು ಘೋಷಿಸಿರುವ  ದೆಹಲಿ ಚಲೋ ಪ್ರತಿಭಟನೆ ಇಡೀ ದೇಶಕ್ಕೆ ವ್ಯಾಪಿಸುತ್ತಿದೆ. ಹಲವು ರಾಜ್ಯಗಳ ರೈತರು ದೆಹಲಿ ಚಲೋದ ಭಾಗವಾಗುವ ಸೂಚನೆ ದೊರೆಯುತ್ತಿದೆ. ಇದೀಗ, ದಕ್ಷಿಣ ಭಾರತದ ರಾಜ್ಯಗಳ ರೈತರೂ ಸಹ ಪಂಜಾಬ್ ರೈತರಿಗೆ ಬೆಂಬಲ ಸೂಚಿಸಿದ್ದಾರೆ.ಕರ್ನಾಟಕ, ತಮಿಳುನಾಡು, ತೆಲಂಗಾಣ ರಾಜ್ಯದ ರೈತರೂ ದೆಹಲಿ ಚಲೋದ ಭಾಗವಾಗಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಕರ್ನಾಟಕದ ರೈತರು ಪಂಜಾಬ್ ರೈತರಿಗೆ ಬೆಂಬಲ ನೀಡಲು ಡಿಸೆಂಬರ್ 8 ರಂದು ದೆಹಲಿ ತಲುಪುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ದೇಶಾದ್ಯಂತ ಬೆಂಬಲದ ಅಗತ್ಯವಿರುವ ಕಾರಣ ಸಾಂಕೇತಿಕವಾಗಿ ರೈತರು ತೆರಳುವ ಸಾಧ್ಯತೆಯಿದೆ.

ಬಿಹಾರ, ತಮಿಳುನಾಡಿನಲ್ಲೂ ಕೇಂದ್ರದ ವಿರುದ್ಧ ಮೊಳಗಲಿದೆ ರೈತ ಕಹಳೆ
ಬಿಹಾರ ರಾಜಧಾನಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಎದುರು  RJD  ಪ್ರತಿಭಟನೆ ನಡೆಸಲಿದೆ. ಇತ್ತ, ತಮಿಳುನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ DMK ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲು ನಿರ್ಧರಿಸಿದೆ.

ಪಶ್ಚಿಮ ಬಂಗಾಳದಿಂದಲೂ ರೈತರ ಆಗಮನದ ಸಾಧ್ಯತೆ
ಈ ನಡುವೆ, ಪಶ್ಚಿಮ ಬಂಗಾಳದ ರೈತರು ಸಹ ದೆಹಲಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪಶ್ಚಿಮ ಬಂಗಾಳವಲ್ಲದೆ  ಅಸ್ಸಾಂ ಹಾಗೂ ಒಡಿಶಾದ ಕೃಷಿಕರು ಸಹ ಪಂಜಾಬ್ ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ದೆಹಲಿ ಚಲೋ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ, ಇತರ ಹಲವು ರಾಜ್ಯಗಳ ರೈತರು ದೆಹಲಿ ಚಲೋಗೆ ತಮ್ಮ ಬೆಂಬಲ ಘೋಷಿಸುವ ಮೂಲಕ ಈ ಪ್ರತಿಭಟನೆ ರಾಷ್ಟ್ರವ್ಯಾಪಿ ಸ್ವರೂಪ ಪಡೆಯಲಿದೆ.

Breaking News: ಡಿಸೆಂಬರ್ 8ಕ್ಕೆ ಭಾರತ್ ಬಂದ್! ರೈತ ಒಕ್ಕೂಟಗಳ ಘೋಷಣೆ