ಕೊರೊನಾ ಲಸಿಕೆ ತಯಾರಿಯಲ್ಲಿ ತೊಡಗಿರುವ ಅದಾರ್ ಪೂನಾವಾಲಾ.. ಏಷಿಯನ್ ಆಫ್ ದಿ ಇಯರ್

ಕೊರೊನಾ ಲಸಿಕೆ ತಯಾರಿಸಲು ಪುಣೆ ಮೂಲದ ಸೀರಮ್ ಸಂಸ್ಥೆಯ (ಎಸ್ಐಐ) ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಬ್ರಿಟನ್ನ ಸ್ವೀಡಿಷ್ ಔಷಧೀಯ ಕಂಪನಿಯಾದ ಅಸ್ಟ್ರಾಜೆನೆಕಾ ಜೊತೆ ಸಹಯೋಗ ಹೊಂದಿದ್ದು, ಭಾರತದಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.

ಕೊರೊನಾ ಲಸಿಕೆ ತಯಾರಿಯಲ್ಲಿ ತೊಡಗಿರುವ ಅದಾರ್ ಪೂನಾವಾಲಾ.. ಏಷಿಯನ್ ಆಫ್ ದಿ ಇಯರ್
ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಭಾತರದ ಸೀರಮ್ ಸಂಸ್ಥೆಯ ಮುಖ್ಯ ನಿರ್ವಾಹಕ ಆದರ್ ಪುನವಾಲ್ಲಾ
sandhya thejappa

| Edited By: sadhu srinath

Dec 05, 2020 | 12:45 PM

ಸಿಂಗಾಪುರ: ಕೊರೊನಾ ಸೋಂಕಿನ ವಿರುದ್ಧ ಹೋರಾಡಿದ ಕಾರ್ಯಕ್ಕಾಗಿ ವರ್ಷದ ಏಷ್ಯನ್ಯರು Asian of the Year ಎಂದು ಸಿಂಗಾಪುರದ ದಿ ಸ್ಟ್ರೈಟ್ಸ್ ದಿನಪತ್ರಿಕೆಯಲ್ಲಿ The Straits Times ಹೆಸರಿಸಲ್ಪಟ್ಟ ಆರು ಜನರ ಪೈಕಿಯಲ್ಲಿ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಭಾರತದ ಸೀರಮ್ ಸಂಸ್ಥೆಯ ಮುಖ್ಯ ನಿರ್ವಾಹಕ ಅದಾರ್ ಪೂನಾವಾಲಾ ಕೂಡ ಒಬ್ಬರಾಗಿದ್ದಾರೆ.

ಕೊರೊನಾ ಲಸಿಕೆ ತಯಾರಿಸಲು ಪುಣೆ ಮೂಲದ ಸೀರಮ್ ಸಂಸ್ಥೆಯ (ಎಸ್ಐಐ) ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಬ್ರಿಟನ್ನ ಸ್ವೀಡಿಷ್ ಔಷಧೀಯ ಕಂಪನಿಯಾದ ಅಸ್ಟ್ರಾಜೆನೆಕಾ ಜೊತೆ ಸಹಯೋಗ ಹೊಂದಿದ್ದು, ಭಾರತದಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.

ಚೀನಾದ ಸಂಶೋಧಕ ಜಾಂಗ್ಯುಂಗ್ಜೆನ್, ಆನ್ಲೈನ್ನಲ್ಲಿ ನಕ್ಷೆ ಮೂಲಕ ಪ್ರಕಟಿಸಿದ Sars-CoV-2 ತಂಡದ ಮೂರು ವಿಜ್ಞಾನಿಗಳಾದ ಚೀನಾದ ಮೇಜರ್ ಜನರಲ್ ಚೆನ್ ವೀ, ಜಪಾನ್​ನ  ಡಾ.ರ್ಯುಚಿ ಮೊರಿಶಿತಾ ಮತ್ತು ಸಿಂಗಾಪುರದ ಪ್ರೊ. ಓಯಿ ಎಂಗ್ ಇಯಾಂಗ್ರವರು. ಮತ್ತು ದಕ್ಷಿಣ ಕೊರಿಯಾದ ಸಿಯೋ ಜಂಗ್ ಜಿನ್ ಹಾಗೂ ಭಾರತದ ಅದಾರ್ ಪೂನಾವಾಲಾ ಸೇರಿದಂತೆ ಒಟ್ಟು 6 ಜನರನ್ನು ದಿ ಸ್ಟ್ರೈಟ್ಸ್ ದಿನಪತ್ರಿಕೆಯಲ್ಲಿ Asian of the Year ಎಂದು ಹೆಸರಿಸಲ್ಪಟ್ಟಿದೆ.

ಈಗಾಗಲೇ  Asian of the Year ಎಂದು ಗುರುತಿಸಿಕೊಂಡವರು ಕೊರೊನಾ ಎಂಬ ರಕ್ಕಸ ಸೋಂಕನ್ನು ತಡೆಯಲು ಹೆಚ್ಚು ಶ್ರಮವಹಿಸಿ ತಮ್ಮದೇ ಆದ ಕೊಡುಗೆ ನೀಡುವಲ್ಲಿ ನಿರತರಾಗಿದ್ದಾರೆ.

ಪೂನಾವಾಲಾ ಅವರ ತಂದೆ ಸೈರಸ್ ಪೂನಾವಾಲಾ 1966ರಲ್ಲಿ ಸೀರಮ್ ಸಂಸ್ಥೆಯನ್ನು ಸ್ಥಾಪಿಸಿದ್ದು, 2001ರ ಹೊತ್ತಿಗೆ ಅದಾರ್ ಪೂನಾವಾಲಾ ಸೀರಮ್ ಸಂಸ್ಥೆಗೆ ಸೇರಿಕೊಂಡು, 2011ರಲ್ಲಿ ಕಂಪನಿಯ ಜವಬ್ದಾರಿಯನ್ನು ವಹಿಸಿಕೊಂಡರು.

ಕುಟುಂಬದ 250 ಮಿಲಿಯನ್ ಡಾಲರ್ ಆದಾಯವನ್ನು ಸಂಸ್ಥೆಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಇರಿಸಿದ್ದು, ಎಲ್ಲಾ ಬಡ ರಾಷ್ಟ್ರಗಳಿಗೆ ನೀಡಲು ಕೊರೊನಾ ಲಸಿಕೆಗಳ ಪ್ರಮಾಣವನ್ನು ಹೆಚ್ಚಿಸಲು ಸಂಸ್ಥೆ ಸಹಾಯ ಮಾಡುತ್ತಿದೆ ಎಂದು ಆದರ್  ಪೂನಾವಾಲಾ ತಿಳಿಸಿದ್ದಾರೆ.

ಹೊಸ ಭರವಸೆ ಮೂಡಿಸಿದೆ ಮಾಡೆರ್ನಾ ಇನ್ಕ್​ ಕಂಪನಿಯ ಕೊರೊನಾ ಲಸಿಕೆ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada