ದೆಹಲಿಯಲ್ಲಿ ವಿಪರೀತ ಶೀತ ಗಾಳಿ; ಹೃದಯಾಘಾತ, ಅತಿ ರಕ್ತದೊತ್ತಡ, ಮೆದುಳಿನ ಸ್ಟ್ರೋಕ್ ಸಮಸ್ಯೆ ಹೆಚ್ಚಳ

| Updated By: ಸುಷ್ಮಾ ಚಕ್ರೆ

Updated on: Jan 14, 2023 | 12:47 PM

ಶೀತ ಅಲೆಗಳ ಕಾರಣದಿಂದಾಗಿ ಸುಮಾರು ಶೇ. 10ರಿಂದ 15ರಷ್ಟು ಹೆಚ್ಚು ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಿದ್ದಾರೆ.

ದೆಹಲಿಯಲ್ಲಿ ವಿಪರೀತ ಶೀತ ಗಾಳಿ; ಹೃದಯಾಘಾತ, ಅತಿ ರಕ್ತದೊತ್ತಡ, ಮೆದುಳಿನ ಸ್ಟ್ರೋಕ್ ಸಮಸ್ಯೆ ಹೆಚ್ಚಳ
ದೆಹಲಿಯಲ್ಲಿ ಶೀತಗಾಳಿ
Image Credit source: times now
Follow us on

ನವದೆಹಲಿ: ದೆಹಲಿಯಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಇದರಿಂದ ದೆಹಲಿಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ತುರ್ತು ವಿಭಾಗಗಳಲ್ಲಿ ಮುಂಜಾನೆ ಹೃದಯಾಘಾತ (Heart Attack), ಮೆದುಳಿನ ಪಾರ್ಶ್ವವಾಯು (Brain Stroke) ಮತ್ತು ಅಧಿಕ ರಕ್ತದೊತ್ತಡ (High BP) ಹೊಂದಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ದೆಹಲಿಯಲ್ಲಿ ಕಳೆದ 23 ವರ್ಷಗಳಲ್ಲಿ ಮೂರನೇ ಬಾರಿ ಅತ್ಯಂತ ಕೆಟ್ಟ ಶೀತ ಅಲೆ (Cold Wave) ದಾಖಲಾಗಿದೆ.

ದೆಹಲಿಯ ಲೋಕನಾಯಕ್ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಅವರ ಪ್ರಕಾರ, ಶೀತ ಅಲೆಗಳ ಕಾರಣದಿಂದಾಗಿ ಸುಮಾರು ಶೇ. 10ರಿಂದ 15ರಷ್ಟು ಹೆಚ್ಚು ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಮತ್ತು ಅಧಿಕ ರಕ್ತದೊತ್ತಡಕ್ಕೆ ಒಳಗಾಗುತ್ತಿದ್ದಾರೆ. ಶೀತ ಗಾಳಿಯಿಂದ 50ರಿಂದ 70 ವರ್ಷದವರು ಹೆಚ್ಚು ತೊಂದರೆಗೆ ಒಳಗಾಗುತ್ತಿದ್ದಾರೆ.

ಇದನ್ನೂ ಓದಿ: Spicy Ghee Recipe: ಚಳಿಗಾಲದ ಸೋಂಕಿನಿಂದ ಕಾಪಾಡಲು ತುಪ್ಪವನ್ನು ಈ ರೀತಿಯಾಗಿ ಬಳಸಿ

ಜನರು ತಮ್ಮ ಮಧುಮೇಹ ಮತ್ತು ರಕ್ತದೊತ್ತಡದ ಬಗ್ಗೆ ನಿಯಮಿತವಾಗಿ ಚೆಕಪ್ ಮಾಡಿಸಬೇಕು. ಆದಷ್ಟು ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು ಎಂದು ಡಾ. ಸುರೇಶ್ ಕುಮಾರ್ ಸಲಹೆ ನೀಡಿದ್ದಾರೆ. ಕೆಲವು ಖಾಸಗಿ ಆಸ್ಪತ್ರೆಗಳು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪಾರ್ಶ್ವವಾಯು ರೋಗಿಗಳಲ್ಲಿ 9%ರಷ್ಟು ಏರಿಕೆ ಕಂಡುಬಂದಿದೆ.

ಪಾರ್ಶ್ವವಾಯುಗೆ ಒಳಗಾದ ಸುಮಾರು 25% ರೋಗಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ವಿಶೇಷವಾಗಿ ಮೆಟ್ರೋ ನಗರಗಳಲ್ಲಿ ಇವರ ಸಂಖ್ಯೆ ಹೆಚ್ಚಾಗಿದೆ. ನಿದ್ರೆಯ ಕೊರತೆ, ಕಳಪೆ ಗುಣಮಟ್ಟದ ಆಹಾರ ಮತ್ತು ಅತಿಯಾದ ಮಾನಸಿಕ ಒತ್ತಡದಂತಹ ಜೀವನಶೈಲಿಯಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ