Spicy Ghee Recipe: ಚಳಿಗಾಲದ ಸೋಂಕಿನಿಂದ ಕಾಪಾಡಲು ತುಪ್ಪವನ್ನು ಈ ರೀತಿಯಾಗಿ ಬಳಸಿ
ತುಪ್ಪವನ್ನು ಬಿಸಿಯಾಗಿ ಜೊತೆಗೆ ಮಸಾಲೆಯನ್ನು ಸೇರಿಸಿ ಸವಿಯಿರಿ. ಇದು ಚಳಿಗಾಲದಲ್ಲಿ ಬರುವ ಸೋಂಕಿನಿಂದ ನಿಮ್ಮನ್ನು ಕಾಪಾಡುತ್ತದೆ. ಜೊತೆಗೆ ರುಚಿಯೂ ಕೂಡ ಉತ್ತಮವಾಗಿದೆ.
ತುಪ್ಪ(Ghee) ವನ್ನು ಭಾರತೀಯ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಜೊತೆಗೆ ಆರೋಗ್ಯ(Health)ವನ್ನು ಕಾಪಾಡುವ ಔಷಧೀಯ ಗುಣಗಳನ್ನು ಕೂಡ ತುಪ್ಪದಲ್ಲಿ ಕಾಣಬಹುದು. ಆದ್ದರಿಂದ ಚಳಿಗಾಲದಲ್ಲಿಯೂ ಕೂಡ ಉತ್ತಮ ಆರೋಗ್ಯ ಕ್ರಮ ರೂಢಿಸಿಕೊಳ್ಳಲು ನಿಮ್ಮ ಆಹಾರ ಕ್ರಮದಲ್ಲಿ ತುಪ್ಪವನ್ನು ಬಳಸಿ. ಪ್ರತಿದಿನ ತುಪ್ಪವನ್ನು ತಿನ್ನುವುದರಿಂದ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ನಿಮ್ಮ ದೇಹದಲ್ಲಿ ಆರೋಗ್ಯಕರ ಕೊಬ್ಬಾಗಿ ಕಾರ್ಯ ನಿರ್ವಹಿಸುತ್ತದೆ. ತುಪ್ಪವನ್ನು ಬಿಸಿಯಾಗಿ ಜೊತೆಗೆ ಮಸಾಲೆಯನ್ನು ಸೇರಿಸಿ ಸವಿಯಿರಿ. ಇದು ಚಳಿಗಾಲದಲ್ಲಿ ಬರುವ ಸೋಂಕಿನಿಂದ ನಿಮ್ಮನ್ನು ಕಾಪಾಡುತ್ತದೆ. ಜೊತೆಗೆ ರುಚಿಯೂ ಕೂಡ ಉತ್ತಮವಾಗಿದೆ. ಆದ್ದರಿಂದ ನೀವೂ ಕೂಡ ಮನೆಯಲ್ಲಿ ಮಸಾಲೆಯುಕ್ತ ಬಿಸಿ ತುಪ್ಪದ ಪಾಕ ವಿಧಾನವನ್ನು ಪ್ರಯತ್ನಿಸಿ ಎಂದು ಆರೋಗ್ಯ ತರಬೇತುದಾರ ದಿಗ್ವಿಜಯ್ ಸಿಂಗ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಮಸಾಲೆಯುಕ್ತ ಬಿಸಿ ತುಪ್ಪ:
ಬೇಕಾಗುವ ಸಾಮಾಗ್ರಿಗಳು:
ತುಪ್ಪ – 2 ಟೀಸ್ಪೂನ್ ಕರಿಮೆಣಸಿನ ಹುಡಿ- 1ಚಿಟಿಕೆ ಕೇಸರ್ ಎಳೆಗಳು – 2 ರಿಂದ 3 ಎಲಕ್ಕಿ ಪುಡಿ- 1 ಚಮಚ ಅರಿಶಿನ – 1 ಚಮಚ ಸೋಂಪು ಕಾಳಿನ ಪುಡಿ- 1/2 ಚಮಚ
ಮಾಡುವ ವಿಧಾನ:
ಕರಿಮೆಣಸು, ಏಲಕ್ಕಿ, ಸೋಂಪು, ಕೇಸರಿ ಎಳೆಗಳು ಮತ್ತು ಅರಿಶಿನವನ್ನು ತುಪ್ಪದೊಂದಿಗೆ ಮಿಶ್ರಣ ಮಾಡಿ. ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಸಂಗ್ರಹಿಸಿ. ಪ್ರತಿದಿನ 1 ರಿಂದ 2 ಚಮಚ ಸೇವಿಸಿ. ಚಳಿಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪ್ರಯತ್ನಿಸಿ.
ಇದನ್ನೂ ಓದಿ: ಹಸಿ ಹಾಗೂ ಬೇಯಿಸಿದ ತರಕಾರಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ
ನೆಗಡಿ ಇದ್ದರೆ ಬೆಚ್ಚಗಿನ ಹಾಲಿನೊಂದಿಗೆ ತುಪ್ಪವನ್ನು ಸೇವಿಸಿ. ನಿಮ್ಮ ದೇಹವು ಶೀತ, ಕೆಮ್ಮು ಅಥವಾ ಕಾಲೋಚಿತ ಜ್ವರಕ್ಕೆ ಹೆಚ್ಚು ಒಳಗಾಗುವ ಈ ಋತುವಿನಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ. ಜೊತೆಗೆ ನೀವು ಬಿಸಿ ಹಾಲು ಅಥವಾ ಆಹಾರದೊಂದಿಗೆ ತುಪ್ಪವನ್ನು ಸೇವಿಸುವುದು ಕೂಡ ಉತ್ತಮ. ಇದಲ್ಲದೇ ಈ ರೀತಿಯ ಪಾಕ ವಿಧಾನ ಮಾಡಲು ಸಮಯವಿಲ್ಲದಿದ್ದರೆ ನೀವು ದಿನ ನಿತ್ಯದ ಬಿಸಿ ಅನ್ನ, ಉಪಹಾರದೊಂದಿಗೆ ಒಂದು ಚಮಚ ತುಪ್ಪವನ್ನು ಸೇರಿಸಿ ಎಂದು ಅವರು ಸಲಹೆ ನೀಡುತ್ತಾರೆ.
ಸಂಸ್ಕರಿಸಿದ ಆಹಾರ, ಕಳಪೆ ಆಹಾರ ಪದ್ಧತಿ, ಕಡಿಮೆ ತರಕಾರಿಗಳು ಅಥವಾ ಹಣ್ಣುಗಳೊಂದಿಗೆ ಆಹಾರ, ಕಡಿಮೆ ಫೈಬರ್, ಹೆಚ್ಚು ಸಕ್ಕರೆ, ಕಳಪೆ ನಿದ್ರೆ, ಕಡಿಮೆ ನೀರು ಇಂತಹ ಆಹಾರ ಕ್ರಮಗಳು ನಿಮ್ಮ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ನಿಮ್ಮ ಕರುಳಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ ನಿಮ್ಮ ಆಹಾರ ಕ್ರಮದಲ್ಲಿ ತುಪ್ಪವನ್ನು ಸೇರಿಸಿಕೊಳ್ಳುವುದರಿಂದ ಇದು ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಮಾಡುತ್ತದೆ. ಕೇವಲ ಕರುಳಿನ ಆರೋಗ್ಯ ಮಾತ್ರವಲ್ಲದೇ ಉರಿಯೂತ ನಿವಾರಕವಾಗಿದೆ. ಜೊತೆಗೆ ಉತ್ತಮ ಕೊಲೆಸ್ಟ್ರಾಲ್, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಸಿಂಗ್ ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:12 am, Thu, 12 January 23