Plastic free Napkin: ಪ್ಲಾಸ್ಟಿಕ್ ಮುಕ್ತ ನ್ಯಾಪ್ಕಿನ್ ತಯಾರಿಸಿದ ಪ್ರೀತಿ ರಾಮ್‍ದಾಸ್, ಇಲ್ಲಿದೆ ಉಪಯುಕ್ತ ಮಾಹಿತಿ
ಪ್ಯಾಡ್ ವುಮನ್ ಎಂದು ಕರೆಯಲ್ಪಡುವ ತಮಿಳುನಾಡು ಮೂಲದ ಪ್ರೀತಿ ರಾಮ್‍ದಾಸ್ ಅವರು ಪ್ಲಾಸ್ಟಿಕ್ ಮುಕ್ತ, ಜೈವಿಕ ವಿಘಟನೀಯ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ತಯಾರಿಸಿದ್ದಾರೆ.
ಪ್ಯಾಡ್ ವುಮನ್ ( Pad Woman) ಎಂದು ಕರೆಯಲ್ಪಡುವ ತಮಿಳುನಾಡು ಮೂಲದ ಪ್ರೀತಿ ರಾಮ್‍ದಾಸ್ (Preeti Ramdas) ಅವರು ಪ್ಲಾಸ್ಟಿಕ್ ಮುಕ್ತ, ಜೈವಿಕ ವಿಘಟನೀಯ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ತಯಾರಿಸಿದ್ದಾರೆ. ಪ್ರೀತಿ ಅವರು ತಮ್ಮ ಸಂಶೋಧನೆಯಲ್ಲಿ ಮಹಿಳೆಯರು ದೊಡ್ಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಕಂಡುಕೊಂಡರು. ಆ ಸಮಸ್ಯೆಯೇ ಪ್ಲಾಸ್ಟಿಕ್ ಪ್ಯಾಡ್. ಒಂದು ವರ್ಷದಲ್ಲಿ ಮಹಿಳೆಯರು ಸುಮಾರು 12 ಬಿಲಿಯನ್ ಪ್ಯಾಡ್‍ಗಳನ್ನು ಡಿಸ್ಪೋಸ್ ಮಾಡುತ್ತಾರೆ. ಮತ್ತು ಒಂದು ಸ್ಯಾನಿಟರಿ ಪ್ಯಾಡ್ ಭೂಮಿಯಲ್ಲಿ ಕರಗಿ ಹೋಗಲು ಸುಮಾರು 800 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಎಂಬುವುದನ್ನು ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.
ಹಾಗೇನೆ ಪ್ಲಾಸ್ಟಿಕ್ ಪ್ಯಾಡ್‍ಗಳು ಮಹಿಳೆಯರ ಆರೋಗ್ಯಕ್ಕೂ ತುಂಬಾನೇ ಹಾನಿಕಾರಕವಾಗಿದೆ ಎಂಬುದು ಅವರಿಗೆ ತಮ್ಮ ಅಧ್ಯಯನದಲ್ಲಿ ತಿಳಿಯುತ್ತದೆ. ಪರಿಸರ ಸಂರಕ್ಷಣೆ ಮತ್ತು ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಪ್ಲಾಸ್ಟಿಕ್ ಸ್ಯಾನಿಟರಿ ನ್ಯಾಪ್‍ಕಿನ್‍ಗೆ ಪರ್ಯಾಯವಾಗಿ ಇವರು ಸಸ್ಯ ಮೂಲದ ಜೈವಿಕ ವಿಘಟನೀಯ ಪ್ಯಾಡ್‍ನ್ನು ತಯಾರಿಸಲು ಮುಂದಾದರು.
ಇದನ್ನು ಓದಿ:Woman Health: ಖಾಸಗಿ ಭಾಗಗಳ ಸ್ವಚ್ಛತೆಯ ಬಗ್ಗೆ ಈ ಅಂಶಗಳನ್ನು ನೆನಪಿಡಿ
ಪ್ರೀತಿ ಪ್ಯಾಡ್‍ಗಳನ್ನು ತಯಾರಿಸಲು ಸಸ್ಯ ಮೂಲದ ಸೆಲ್ಯುಲೋಸ್ ಬಳಸುತ್ತಾರೆ. ಮತ್ತು ಹೈಜೀನಿಕ್ ದೃಷ್ಟಿಯಿಂದ ಬೇವು ಮತ್ತು ಅರಶಿನವನ್ನು ಬಳಸುತ್ತಾರೆ. ಮತ್ತು ದುರ್ಗಂಧವನ್ನು ಹೋಗಲಾಡಿಸಲು ನಿಂಬೆ ಮತ್ತು ಇತರ ಗಿಡಮೂಲಿಕೆ ಅಂಶಗಳನ್ನು ಅದರಲ್ಲಿ ಬಳಕೆ ಮಾಡುತ್ತಾರೆ. ಹಾಗೂ 3 ವರ್ಷಗಳ ಈ ಪ್ರಯೋಗವೂ ಇವರಿಗೆ ಉತ್ತಮ ಫಲಿತಾಂಶವನ್ನು ನೀಡಿತು. ಪ್ಯಾಡ್ ತಯಾರಿಸಿದ ಬಳಿಕ ಇವರು ತಮ್ಮ ಕುಟುಂಬದವರು ಮತ್ತು ಸ್ನೇಹಿರಿಗೆ ಪ್ಯಾಡ್‍ಗಳನ್ನು ಕೊಟ್ಟು ಇದು ಪರಿಣಾಮಕಾರಿಯಾಗಿದೆಯೇ ಎಂದು ಪ್ರಯೋಗ ಮಾಡುತ್ತಾರೆ.
View this post on Instagram
ಈ ಪ್ರಯೋಗದಲ್ಲಿ ಇವರಿಗೆ ಕುಟುಂಬ ಮತ್ತು ಸ್ನೇಹಿತರಿಂದ ಧನಾತ್ಮಕ ಪ್ರತಿಕ್ರಿಯೆ ಸಿಗುತ್ತದೆ. ಮತ್ತು ಈ ಪ್ಯಾಡ್ ಧರಿಸಿ ಅವರಿಗೆ ಯಾವುದೇ ರೀತಿಯ ಲೀಕೇಜ್, ದೇಹ ದುರ್ಗಂಧ ಇಲ್ಲ, ಇನ್‍ಫೆಕ್ಷನ್ ಇಲ್ಲ ಹಾಗೂ ಇದು ತುಂಬಾನೇ ಆರಾಮದಾಯಕವಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ.
ಈ ಜೈವಿಕ ಪ್ಯಾಡ್‍ಗಳನ್ನು ಮಣ್ಣಿನಲ್ಲಿ ಹಾಕಿ ಅದರ ಕರಗುವಿಕೆಯ ಬಗ್ಗೆಯೂ ಪ್ರಯೋಗವನ್ನು ನಡೆಸುತ್ತಾರೆ. ಈ ಪ್ರಯೋಗದಲ್ಲಿ ಇವರು ಪ್ಯಾಡ್‍ನ್ನು ಮಣ್ಣಿನಲ್ಲಿ ಹಾಕಿ ಕೇವಲ 15 ದಿನಗಳಲ್ಲಿ ಅದು ಮಣ್ಣಿನಲ್ಲಿ ಕರಗಿ ಹೋಗುತ್ತದೆ ಎಂಬುವುದನ್ನು ಅವರು ಕಂಡುಕೊಂಡಿದ್ದಾರೆ. ಪ್ರೀತಿ ರಾಮ್‍ದಾಸ್ ಅವರು ಕಂಡುಕೊಂಡ ಈ ಜೈವಿಕ ಪ್ಯಾಡ್ ಹೈಜೀನಿಕ್ ಹಾಗೇನೇ ಪರಿಸರ ಸ್ನೇಹಿ ಆಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Thu, 12 January 23