ದೆಹಲಿ: ಬೀದಿಯಲ್ಲಿ ಯುವತಿ ಶವ ಪತ್ತೆ, ಮೈಮೇಲೆ ಬುಲೆಟ್ ಗುರುತು

ದೆಹಲಿಯ ರಸ್ತೆಯೊಂದರಲ್ಲಿ ಯುವತಿಯೊಬ್ಬಳು ಗುಂಡೇಟಿಗೆ ಬಲಿಯಾಗಿದ್ದಾರೆ, ಮೃತಳ ಗುರುತು ಇನ್ನೂ ಪತ್ತೆಯಾಗಿಲ್ಲ. ಯುವತಿಯೊಬ್ಬಳಿಗೆ ಗುಂಡು ಹಾರಿಸಲಾಗಿದೆ ಎಂದು ನಮಗೆ ಕರೆ ಬಂದಿತ್ತು. ಜಿಟಿಬಿ ಎನ್‌ಕ್ಲೇವ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಸುಮಾರು 20 ವರ್ಷ ವಯಸ್ಸಿನವಳಂತೆ ಕಾಣುತ್ತಿದ್ದು, ಎರಡು ಗುಂಡುಗಳ ಗಾಯಗಳಾಗಿವೆ. ಯುವತಿಯೊಬ್ಬಳಿಗೆ ಗುಂಡು ಹಾರಿಸಲಾಗಿದೆ ಎಂದು ನಮಗೆ ಕರೆ ಬಂದಿತ್ತು. ಜಿಟಿಬಿ ಎನ್‌ಕ್ಲೇವ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಸುಮಾರು 20 ವರ್ಷ ವಯಸ್ಸಿನವಳಂತೆ ಕಾಣುತ್ತಿದ್ದು, ಎರಡು ಗುಂಡುಗಳ ಗಾಯಗಳಾಗಿವೆ.

ದೆಹಲಿ: ಬೀದಿಯಲ್ಲಿ ಯುವತಿ ಶವ ಪತ್ತೆ, ಮೈಮೇಲೆ ಬುಲೆಟ್ ಗುರುತು
ಗುಂಡಿನ ದಾಳಿ

Updated on: Apr 15, 2025 | 10:40 AM

ದೆಹಲಿ, ಏಪ್ರಿಲ್ 15: ದೆಹಲಿಯ ಶಹದಾರಾದ ಜಿಟಿಬಿ ಎನ್​ಕ್ಲೇವ್ ಬಳಿ ಸುಮಾರು 20 ವರ್ಷ ಆಸುಪಾಸಿನ ಯುವತಿ ಶವ ಪತ್ತೆಯಾಗಿದೆ. ಆಕೆಯ ಮೈಮೇಲೆ ಬುಲೆಟ್ ಗುರುತುಗಳಿವೆ. ಗುಂಡೇಟಿನಿಂದ ಆಕೆ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ ಉಪ ಪೊಲೀಸ್ ಆಯುಕ್ತೆ ನೇಹಾ ಮಾತನಾಡಿ, ಯುವತಿಯೊಬ್ಬಳಿಗೆ ಗುಂಡು (Bullet)ಹಾರಿಸಲಾಗಿದೆ ಎಂದು ನಮಗೆ ಕರೆ ಬಂದಿತ್ತು. ಜಿಟಿಬಿ ಎನ್‌ಕ್ಲೇವ್ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಸುಮಾರು 20 ವರ್ಷ ವಯಸ್ಸಿನವಳಂತೆ ಕಾಣುತ್ತಿದ್ದು, ಎರಡು ಗುಂಡುಗಳ ಗಾಯಗಳಾಗಿವೆ.

ಯುವತಿಯ ಗುರುತು ಇನ್ನೂ ತಿಳಿದಿಲ್ಲ, ಮತ್ತು ಮರಣೋತ್ತರ ಪರೀಕ್ಷೆಯಿಂದ ಹೆಚ್ಚಿನ ವಿವರಗಳು ತಿಳಿದುಬರುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ಜಿಲ್ಲೆಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಮಾರ್ಚ್ 29 ರಂದು, ವಿವೇಕ್ ವಿಹಾರ್‌ನ ಸತ್ಯಂ ಎನ್‌ಕ್ಲೇವ್‌ನಲ್ಲಿರುವ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ
ಹೊಸ ಪಾಡ್‌ಕಾಸ್ಟ್‌ನಲ್ಲಿ ಡೈವೋರ್ಸ್ ಬಗ್ಗೆ ಚರ್ಚಿಸಿದ ಮಿಚೆಲ್ ಒಬಾಮಾ
ಪಾಕಿಸ್ತಾನದಲ್ಲಿ ರೈಲು ಹೈಜಾಕ್;27 ಉಗ್ರರ ಹತ್ಯೆ, 155 ಒತ್ತೆಯಾಳುಗಳ ರಕ್ಷಣೆ
ಪಾಕಿಸ್ತಾನದಲ್ಲಿ ಉಗ್ರರಿಂದ ಪ್ಯಾಸೆಂಜರ್​​ ರೈಲು ಹೈಜಾಕ್; 11 ಸೈನಿಕರ ಹತ್ಯೆ
ಒಡಿಶಾ ವಿಧಾನಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಶಾಸಕರಿಂದ ಪರಸ್ಪರ ಹಲ್ಲೆ

ಜಿಲ್ಮಿಲ್ ಕಾಲೋನಿಯಲ್ಲಿರುವ ಡಿಡಿಎ ಫ್ಲಾಟ್ ಸಂಖ್ಯೆ 118 ಎ ಮನೆಗೆ ಪ್ರವೇಶಿಸಿದಾಗ, ಚೀಲದೊಳಗೆ ಮಹಿಳೆಯ ಕೊಳೆತ ಶವ ಪತ್ತೆಯಾಗಿದ್ದು, ಅದನ್ನು ಕಂಬಳಿಯಲ್ಲಿ ಸುತ್ತಿ ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಧೂಪದ್ರವ್ಯದ ಕಡ್ಡಿಯನ್ನು ಹೊತ್ತಿಸಿ ಪೆಟ್ಟಿಗೆಯ ಮೇಲೆ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತ್ತಷ್ಟು ಓದಿ:ಪ್ರೀತಿಗೆ ಸಿಕ್ಕ ಪ್ರತಿಫಲ! ವಿಶಾಖಪಟ್ಟಣದಲ್ಲಿ ಗಂಡನಿಂದ 9 ತಿಂಗಳ ಗರ್ಭಿಣಿ ಪತ್ನಿಯ ಕೊಲೆ

ಈ ಮನೆ ಸುಮಾರು 50-60 ವರ್ಷ ವಯಸ್ಸಿನ ವಿವೇಕಾನಂದ ಮಿಶ್ರಾ ಅವರಿಗೆ ಸೇರಿದ್ದು. ಒಳಗೆ ಪತ್ತೆಯಾದ ಶವವನ್ನು ಇನ್ನೂ ಗುರುತಿಸಲಾಗಿಲ್ಲ. ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಡಿಸಿಪಿ ಯಾದವ್ ಹೇಳಿದರು. ಎರಡೂ ಪ್ರಕರಣಗಳು ತನಿಖೆಯಲ್ಲಿವೆ. ಇದೀಗ ರಸ್ತೆಯಲ್ಲಿ ಪತ್ತೆಯಾಗಿರುವ ಯುವತಿಯ ಮೇಲೆ ಅತ್ಯಾಚಾರ ನಡೆಸಲಾಗಿದೆಯೇ, ಕೊಲೆ ಮಾಡಿದವರ್ಯಾರು, ಗುಂಡೇಟಿನಿಂದಲೇ ಆಕೆ ಸಾವನ್ನಪ್ಪಿದ್ದಾಳೆಯೇ ಈ ಎಲ್ಲಾ ಪ್ರಶ್ನೆಗಳಿಗೆ ಮರಣೋತ್ತರ ಪರೀಕ್ಷೆ ಬಳಿಕ ಉತ್ತರ ಸಿಗಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗು ಇಲ್ಲಿ ಕ್ಲಿಕ್ ಮಾಡಿ

Published On - 10:40 am, Tue, 15 April 25