
ನವದೆಹಲಿ, ಆಗಸ್ಟ್ 6: ದೆಹಲಿಯಲ್ಲಿ ಆಘಾತಕಾರಿ ಘಟನೆಯೊಂದು (Shocking News) ನಡೆದಿದೆ. ಇಂದು (ಆಗಸ್ಟ್ 6) ಮಧ್ಯಾಹ್ನ 3.56ರ ಸುಮಾರಿಗೆ ಮಗಳೇ ಅಪ್ಪನನ್ನು ಕೊಲೆ ಮಾಡಿದ್ದಾಳೆ. ದೆಹಲಿಯ ಎಂಎಸ್ ಪಾರ್ಕ್‌ನಲ್ಲಿರುವ ಜಿಟಿಬಿ ಆಸ್ಪತ್ರೆಗೆ ಚಂದ್ ಗೋಯಲ್ ಎಂಬ 55 ವರ್ಷದ ವ್ಯಕ್ತಿಯನ್ನು ಅವರ ಮಗ ಶಿವಂ ಪ್ರಜ್ಞಾಹೀನ ಮತ್ತು ಗಾಯಗೊಂಡ ಸ್ಥಿತಿಯಲ್ಲಿ ದಾಖಲಿಸಿದ್ದರು. ಆದರೆ, ಅದಾದ ಕೆಲವೇ ನಿಮಿಷಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಈ ಘಟನೆಯ ಸಮಯದಲ್ಲಿ ಕುಟುಂಬ ಸದಸ್ಯರು ಹಾಜರಿದ್ದರು.
ಶಿವಂ ಹೇಳಿಕೆಯ ಪ್ರಕಾರ, ಈ ಘಟನೆಯ ಸಮಯದಲ್ಲಿ ಅವರ ಸಹೋದರಿ ಅನು (32 ವರ್ಷ), ಅವರ ತಾಯಿ ಬಾಲಾ ದೇವಿ ಮತ್ತು ಅವರ ಪತ್ನಿ ಪ್ರಿಯಾ (29 ವರ್ಷ) ಎಲ್ಲರೂ ಶಹದಾರಾದ ರಾಮನಗರದ ಬುಧ್ ಬಜಾರ್‌ನಲ್ಲಿರುವ ತಮ್ಮ ಮನೆಯಲ್ಲಿದ್ದರು. ಶಿವಂ ಅವರ ಅಪ್ಪನೇ ಸಾವನ್ನಪ್ಪಿದ ವ್ಯಕ್ತಿ. ಶಿವಂ ಅವರ ಅವಿವಾಹಿತ ತಂಗಿ ಅನು ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.
ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಕಾರಿನೊಳಗೆ ಇಬ್ಬರು ಪುರುಷರ ನಿಗೂಢ ಸಾವು
ಶಿವಂ ಅವರ ಪತ್ನಿ ಪ್ರಿಯಾ ಅವರ ಹೇಳಿಕೆಯ ಆಧಾರದ ಮೇಲೆ, ತಂದೆ ಟೇಕ್ ಚಂದ್ ಗೋಯಲ್ ಅವರ ಮೇಲೆ ಅವರ ಮಗಳು ಅನು ಅಡುಗೆ ಮಾಡುವ ಬಾಣಲೆಯಿಂದ ಹೊಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಲ್ಲೆಯಿಂದ ಚಂದ್ ಗೋಯಲ್ ಮಾರಣಾಂತಿಕ ಗಾಯಗಳಿಂದು ಕುಸಿದುಬಿದ್ದರು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಮೃತಪಟ್ಟಿದ್ದರು. ಅನು ತನ್ನ ತಂದೆಯನ್ನು ಕೊಲ್ಲಲು ಕಾರಣವೇನೆಂದು ತಿಳಿದುಬಂದಿಲ್ಲ.
ಆರೋಪಿ ಅನು ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ