Arvind Kejriwal: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಮಾರ್ಚ್ 28ರವರೆಗೆ ಇಡಿ ಕಸ್ಟಡಿಗೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಆಪ್ ಇಂಡಿಯಾ ಬ್ಲಾಕ್ ನಾಯಕರೊಂದಿಗೆ ಪಕ್ಷದ ಕಾರ್ಯಕರ್ತರು ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯ ಶಹೀದಿ ಪಾರ್ಕ್‌ನಲ್ಲಿ ಐಟಿಒದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ದೆಹಲಿ ಸಚಿವ ಮತ್ತು ಹಿರಿಯ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರಾಯ್ ಹೇಳಿದ್ದಾರೆ.

Arvind Kejriwal: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್​​ ಮಾರ್ಚ್ 28ರವರೆಗೆ ಇಡಿ ಕಸ್ಟಡಿಗೆ
ಅರವಿಂದ್ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on:Mar 22, 2024 | 9:02 PM

ದೆಹಲಿ ಮಾರ್ಚ್ 22: ಮದ್ಯ ನೀತಿ ಪ್ರಕರಣದಲ್ಲಿ (Delhi Excise Policy) ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು  7 ದಿನಗಳ  ಕಾಲ ಅಂದರೆ ಮಾರ್ಚ್ 28ರವರೆಗೆ ಇಡಿ ವಶದಲ್ಲಿರಿಸಲು ದೆಹಲಿ ರೋಸ್ ಅವೆನ್ಯೂ  ನ್ಯಾಯಾಲಯ ಆದೇಶ ನೀಡಿದೆ. ದೆಹಲಿ ಸಿಎಂ ಅವರನ್ನು 10 ದಿನಗಳ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ (ED) ಕೋರಿತ್ತು. ಅರವಿಂದ್ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ 9 ಸಮನ್ಸ್‌ಗಳನ್ನು ಉಲ್ಲಂಘಿಸಿದ್ದಾರೆ ಎಂದು ಇಡಿ ಹೇಳಿದ್ದು ಅವರ ಹೇಳಿಕೆಯನ್ನು ದಾಖಲಿಸಿದಾಗ ಅವರು ಸತ್ಯವನ್ನು ಬಹಿರಂಗಪಡಿಸಲಿಲ್ಲ ಅಥವಾ ಸರಿಯಾದ ಸಂಗತಿಗಳನ್ನು ನೀಡಲಿಲ್ಲ ಎಂದಿದೆ.

2022 ರಲ್ಲಿ ಎಎಪಿಯ ಗೋವಾ ಚುನಾವಣಾ ಪ್ರಚಾರದಲ್ಲಿ ಉತ್ಪತ್ತಿಯಾದ ಅಪರಾಧದ ಆದಾಯದ ಬಳಕೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ಹೇಳಿದೆ. ಕೆಲವು ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಡಲು ಮದ್ಯ ನೀತಿ ರೂಪಿಸುವ ಸಂಚಿನಲ್ಲಿ ಸಿಎಂ ಕೇಜ್ರಿವಾಲ್ ಭಾಗಿಯಾಗಿದ್ದಾರೆ, ಕಿಕ್‌ಬ್ಯಾಕ್‌ಗೆ ಒತ್ತಾಯಿಸುತ್ತಿದ್ದಾರೆ ಎಂದು ಇಡಿ ಕೋರ್ಟ್ ನಲ್ಲಿ ಹೇಳಿದೆ.

ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 28 ರವರೆಗೆ ಇಡಿ ಕಸ್ಟಡಿಗೆ ಕೋರ್ಟ್ ಆದೇಶಿಸಿದ್ದು ಈ ಬಗ್ಗೆ ಪ್ರತಿಕ್ರಿಯಿಸಿದ  ಎಎಪಿ ನಾಯಕಿ ಮತ್ತು ದೆಹಲಿ ಸಚಿವ ಅತಿಶಿ, “ಬಿಜೆಪಿ ಇಡಿ ಮರೆಯಲ್ಲಿ ನಿಂತು ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದೆ.. ಇಡಿ ಬಿಜೆಪಿಯ ಭಾಗವೇ ಎಂದು ಪಕ್ಷವು ಪತ್ರಿಕಾ ಪ್ರಕಟಣೆಯನ್ನು ನೀಡುತ್ತಿದೆ. ಇಲ್ಲಿಯವರೆಗೆ, ಎಎಪಿ ನಾಯಕರ ವಿರುದ್ಧ ಇಡಿಯಿಂದ ಯಾವುದೇ ಅಪರಾಧದ ಆದಾಯ ಕಂಡುಬಂದಿಲ್ಲ.  ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಕರಾಳ ದಿನ. ಇಂದು ನಡೆದಿರುವ ಪ್ರಜಾಪ್ರಭುತ್ವದ ಕೊಲೆಯನ್ನು ದೇಶದ ಜನತೆ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ

ಬಿಜೆಪಿ ವಿರುದ್ಧ ನಾಲ್ಕು ದಿನಗಳ ಪ್ರತಿಭಟನೆ: ಎಎಪಿ ಘೋಷಣೆ

ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನದ ವಿರುದ್ಧ ಆಪ್ ಇಂಡಿಯಾ ಬ್ಲಾಕ್ ನಾಯಕರೊಂದಿಗೆ ಪಕ್ಷದ ಕಾರ್ಯಕರ್ತರು ನಾಳೆ ಬೆಳಗ್ಗೆ 10 ಗಂಟೆಗೆ ದೆಹಲಿಯ ಶಹೀದಿ ಪಾರ್ಕ್‌ನಲ್ಲಿ ಐಟಿಒದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ದೆಹಲಿ ಸಚಿವ ಮತ್ತು ಹಿರಿಯ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಗೋಪಾಲ್ ರಾಯ್ ಹೇಳಿದ್ದಾರೆ.  ನಾಳೆ, ಭಗತ್ ಸಿಂಗ್, ರಾಜಗುರು ಅವರ ಶಹೀದಿ ದಿವಸ್. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಈ ದಿನವನ್ನು ಗುರುತಿಸಿ, ಮಾರ್ಚ್ 23 ರಂದು, ನಾವು ಶಹೀದಿ ಪಾರ್ಕ್, ಐಟಿಒ ಹೊರಗೆ ಪ್ರತಿಭಟನೆ ನಡೆಸುತ್ತೇವೆ ಎಂದು ರಾಯ್ ಹೇಳಿದರು. ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಭಾಗವಹಿಸಲಿದ್ದಾರೆ.

ಮಾರ್ಚ್ 24 ರಂದು ನಗರದಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಲಾಗುವುದು ಎಂದು ರಾಯ್ ಹೇಳಿದರು. ಮಾರ್ಚ್ 25 ರಂದು ಪಕ್ಷದ ಮುಖಂಡರು ಹೋಳಿ ಆಚರಿಸುವುದಿಲ್ಲ. ಮನೆ ಮನೆಗೆ ತೆರಳಿ ಬಿಜೆಪಿ ಕಾರ್ಯಚಟುವಟಿಕೆಗಳ ಬಗ್ಗೆ ಜನರಿಗೆ ತಿಳಿಸಲಿದ್ದಾರೆ. ಮರುದಿನ (ಮಾರ್ಚ್ 26) ‘ಪ್ರಧಾನಿ ಮನೆ’ ಎದುರು ಪ್ರತಿಭಟನೆ ನಡೆಸಲಾಗುವುದು. ಅಖಿಲ ಭಾರತ ಮಟ್ಟದಲ್ಲಿ ‘ಮೆಗಾ ಪ್ರತಿಭಟನೆ’ನಡೆಯಲಿದೆ ಎಂದು ರಾಯ್ ಹೇಳಿದ್ದಾರೆ.

‘ಎಂಸಿಸಿ ಜಾರಿಯಾದ ನಂತರ ಸಿಎಂ ಬಂಧನ ನೀತಿ ಸಂಹಿತೆಗೆ ವಿರುದ್ಧವಾಗಿದೆ.’ಎಂಸಿಸಿ ಮಾರ್ಚ್ 16 ರಂದು ಕಾರ್ಯರೂಪಕ್ಕೆ ಬಂದಿತು. ‘ನಿನ್ನೆ ರಾತ್ರಿ ಪಿಎಂ ನರೇಂದ್ರ ಮೋದಿ ದೆಹಲಿ ಸಿಎಂ ಅವರನ್ನು ಬಂಧಿಸಿದ್ದಾರೆ. ದೆಹಲಿಯ ಜನತೆ ಅರವಿನ್ ಕೇಜ್ರಿವಾಲ್ ಅವರನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿರುವುದು ಎಲ್ಲರಿಗೂ ಗೊತ್ತು. ಇಂದು ಎಲ್ಲೆಡೆ ಎಎಪಿ ಮಾದರಿ ಆಡಳಿತದ ಬಗ್ಗೆ ಚರ್ಚೆಯಾಗುತ್ತಿದೆ. ಪಂಜಾಬ್‌ನಲ್ಲಿ ಪಕ್ಷ ಸರ್ಕಾರ ಮಾಡಿದೆ. ಆದರೆ ಭಯಗೊಂಡಿರುವ ಬಿಜೆಪಿ ನಕಲಿ ಪ್ರಕರಣಗಳು ಮತ್ತು ಅಕ್ರಮ ದಾಳಿಗಳ ಮೂಲಕ ಎಲ್ಲಾ ವಿರೋಧ ಪಕ್ಷಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ’.

‘ದೇಶವು ಚುನಾವಣಾ ಬಾಂಡ್ ಭ್ರಷ್ಟಾಚಾರವನ್ನು ನೋಡುತ್ತಿದೆ. ಕೇಜ್ರಿವಾಲ್ ಹೊರಗಡೆ ಇದ್ದಿದ್ದರೆ ವಿಷಯ ಪ್ರಸ್ತಾಪಿಸುತ್ತಿದ್ದರು. ಅದಕ್ಕಾಗಿಯೇ ಅವರನ್ನು ಜೈಲಿಗೆ ಹಾಕಿದ್ದಾರೆ’ ‘ಎಎಪಿ ಕೇಂದ್ರ ಕಚೇರಿಯ ಎಲ್ಲಾ ಗೇಟ್‌ಗಳನ್ನು ಸೀಲ್ ಮಾಡಲಾಗಿದೆ. ಮೌನ ಪ್ರತಿಭಟನೆ ನಡೆಸುತ್ತಿದ್ದ ನಮ್ಮ ಕಾರ್ಯಕರ್ತರು ಹಾಗೂ ಸಚಿವರನ್ನು ವಶಕ್ಕೆ ಪಡೆಯಲಾಗಿದೆ. ಕೇಜ್ರಿವಾಲ್ ಅವರ ಕುಟುಂಬವನ್ನು ಗೃಹಬಂಧನದಲ್ಲಿ ಇರಿಸಲಾಗಿದೆ. ಆಖಿರ್ ಹುಮಾರೆ ದೇಶ್ ಕಾ ಪಿಎಂ ಕ್ಯಾ ಚಾಹ್ತೇ ಹೈ (ನಮ್ಮ ಪ್ರಧಾನಿಗೆ ಏನು ಬೇಕು)? ಭ್ರಷ್ಟಾಚಾರ ನಡೆಸಿದ ಉನ್ನತ ವ್ಯಕ್ತಿಗಳ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ನಾಯಕರೂ ಕೇಳುತ್ತಿದ್ದಾರೆ’ ಎಂದು ರಾಯ್ ಕೇಳಿದ್ದಾರೆ.

ಇದನ್ನೂ ಓದಿ: ದೆಹಲಿ ಮದ್ಯ ಹಗರಣದಲ್ಲಿ ಕೇಜ್ರಿವಾಲ್ ಕಿಂಗ್‌ಪಿನ್; ಪಂಜಾಬ್, ಗೋವಾ ಚುನಾವಣೆಗಳಲ್ಲಿ ಹಣದ ಜಾಡು ಪತ್ತೆ: ಇಡಿ

ಇದು ದೆಹಲಿ ಜನತೆಗೆ ಮಾಡಿದ ದ್ರೋಹ: ಸುನೀತಾ ಕೇಜ್ರಿವಾಲ್

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಅವರ ಬಂಧನವು ದೆಹಲಿ ಜನರಿಗೆ ಮಾಡಿದ ದ್ರೋಹವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು ‘ಮೋದಿಜೀ, ಮೂರು ಬಾರಿ ಆಯ್ಕೆಯಾದ ಮುಖ್ಯಮಂತ್ರಿಯನ್ನು ಅಧಿಕಾರದ ದುರಹಂಕಾರದಿಂದ ಬಂಧಿಸಿದ್ದಾರೆ. ಅವನು ಎಲ್ಲರನ್ನೂ ತುಳಿಯಲು ಪ್ರಯತ್ನಿಸುತ್ತಿದ್ದಾರೆ. ಇದು ದೆಹಲಿ ಜನತೆಗೆ ಮಾಡಿದ ದ್ರೋಹ. ನಿಮ್ಮ ಮುಖ್ಯಮಂತ್ರಿ ಸದಾ ನಿಮ್ಮೊಂದಿಗೆ ನಿಂತಿದ್ದಾರೆ. ಒಳಗಿರಲಿ, ಹೊರಗಿರಲಿ ಅವರ ಬದುಕು ದೇಶಕ್ಕೆ ಮುಡಿಪಾಗಿದೆ. ಸಾರ್ವಜನಿಕರಿಗೆ ಎಲ್ಲವೂ ಗೊತ್ತಿದೆ’ ಎಂದಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:09 pm, Fri, 22 March 24

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್