ಕೊವಿಡ್ ವೇಳೆ ತಮ್ಮ ಕಾರ್ಮಿಕರನ್ನು ವಿಮಾನದಲ್ಲಿ ಊರಿಗೆ ಕಳುಹಿಸಿದ್ದ ದೆಹಲಿಯ ರೈತ ಆತ್ಮಹತ್ಯೆ

| Updated By: ಸುಷ್ಮಾ ಚಕ್ರೆ

Updated on: Aug 24, 2022 | 11:46 AM

ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರು ತಮ್ಮ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವರ ಕುಟುಂಬಸ್ಥರನ್ನು ಭೇಟಿಯಾಗಲು ಅವರನ್ನು ವಿಮಾನದ ಮೂಲಕ ಬಿಹಾರಕ್ಕೆ ಕಳುಹಿಸಿದ್ದರು.

ಕೊವಿಡ್ ವೇಳೆ ತಮ್ಮ ಕಾರ್ಮಿಕರನ್ನು ವಿಮಾನದಲ್ಲಿ ಊರಿಗೆ ಕಳುಹಿಸಿದ್ದ ದೆಹಲಿಯ ರೈತ ಆತ್ಮಹತ್ಯೆ
Follow us on

ನವದೆಹಲಿ: ಕೊವಿಡ್-19 (COVID-19) ಎಲ್ಲೆಡೆ ವ್ಯಾಪಕವಾಗಿ ಹರಡಿದ್ದ ಸಮಯದಲ್ಲಿ ಬಿಹಾರ (Bihar) ಮೂಲದ ತಮ್ಮ ಕಾರ್ಮಿಕರನ್ನು ಮನೆಗೆ ಕಳುಹಿಸಲು ವಿಮಾನದ ಟಿಕೆಟ್ ಖರೀದಿಸಿ, ವಿಮಾನದಲ್ಲಿ ಕಳುಹಿಸಿಕೊಟ್ಟಿದ್ದ ದೆಹಲಿ (Delhi) ಮೂಲದ ರೈತ ಪಪ್ಪನ್ ಸಿಂಗ್ ಗೆಹ್ಲೋಟ್ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ದೆಹಲಿಯ ಟಿಗಿ ಪುರ್ ಗ್ರಾಮದ ತಮ್ಮ ಮನೆಯಲ್ಲಿ ಅವರು ಮಂಗಳವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನಿನ್ನೆ ಸಂಜೆ 5 ಗಂಟೆಗೆ ಈ ಘಟನೆ ಕುರಿತು ನಮಗೆ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪಪ್ಪನ್ ಸಿಂಗ್ ಗೆಹ್ಲೋಟ್ ಸೂಸೈಡ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಅನಾರೋಗ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ. ಅಲ್ಲದೆ, ಈ ಕೃತ್ಯಕ್ಕೆ ತಾವೇ ಜವಾಬ್ದಾರರು ಎಂದು ಬರೆದಿದ್ದಾರೆ. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Farmers Protest: ಭಾರೀ ಭದ್ರತೆಯ ನಡುವೆ ದೆಹಲಿಯ ಜಂತರ್ ಮಂತರ್​ನಲ್ಲಿ ರೈತರ ಪ್ರತಿಭಟನೆ, ಕರ್ನಾಟಕದಿಂದಲ್ಲೂ ಭಾಗಿ

ಕೊವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅವರು ತಮ್ಮ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅವರ ಕುಟುಂಬಸ್ಥರನ್ನು ಭೇಟಿಯಾಗಲು ಅವರನ್ನು ವಿಮಾನದ ಮೂಲಕ ಬಿಹಾರಕ್ಕೆ ಕಳುಹಿಸಿದ್ದರು. ಇದಾದ ನಂತರ ಗೆಹ್ಲೋಟ್ ಬಹಳ ಚರ್ಚೆಯಲ್ಲಿದ್ದರು. ಅನೇಕರು ಅವರನ್ನು ದೆಹಲಿಯ ಸೋನು ಸೂದ್ ಎಂದು ಕರೆಯುತ್ತಿದ್ದರು. ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಕೂಡ ಈ ಬಗ್ಗೆ ಪ್ರಸ್ತಾಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:46 am, Wed, 24 August 22