ಬ್ಯಾಂಕಾಕ್​ನಿಂದ 18, ಫ್ರಾನ್ಸ್​ನಿಂದ 21 ಆಕ್ಸಿಜನ್ ಟ್ಯಾಂಕರ್​ಗಳನ್ನು ಆಮದು ಮಾಡಲು ನಿರ್ಧಾರ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

|

Updated on: Apr 27, 2021 | 3:02 PM

Arvind Kejriwal: ಮುಂದಿನ ತಿಂಗಳಲ್ಲಿ  ದೆಹಲಿಯಲ್ಲಿ 44 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಅದರಲ್ಲಿ 8 ಸ್ಥಾವರಗಳನ್ನು ಕೇಂದ್ರವು ಏಪ್ರಿಲ್ 30 ರೊಳಗೆ ಸ್ಥಾಪಿಸಲಿದೆ. 44 ಸ್ಥಾವರಗಳಲ್ಲಿ 36 ಸ್ಥಾವರಗಳನ್ನು ದೆಹಲಿ ಸರ್ಕಾರವು ಸ್ಥಾಪಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬ್ಯಾಂಕಾಕ್​ನಿಂದ 18, ಫ್ರಾನ್ಸ್​ನಿಂದ 21 ಆಕ್ಸಿಜನ್ ಟ್ಯಾಂಕರ್​ಗಳನ್ನು ಆಮದು ಮಾಡಲು ನಿರ್ಧಾರ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Follow us on

ದೆಹಲಿ: ಕೊವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಸುವುದಕ್ಕಾಗಿ ಬ್ಯಾಂಕಾಕ್​ನಿಂದ​ 18 ಮತ್ತು ಫ್ರಾನ್ಸ್​​ನಿಂದ 21 ಆಕ್ಸಿಜನ್ ಟ್ಯಾಂಕರ್​ ಗಳನ್ನು ಆಮದು ಮಾಡಿಕೊಳ್ಳಲು ರಾಜ್ಯ  ಸರ್ಕಾರ ನಿರ್ಧರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಂಗಳವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಬ್ಯಾಂಕಾಕ್​ನಿಂದ 18 ಆಕ್ಸಿಜನ್ ಟ್ಯಾಂಕರ್​ಗಳನ್ನು ಆಮದು ಮಾಡಲು ತೀರ್ಮಾನಿಸಿದ್ದೇವೆ. ಅವುಗಳು ನಾಳೆ ಬರಲಿವೆ. ಇದಕ್ಕಾಗಿ ವಾಯುಪಡೆಯ ವಿಮಾನವನ್ನು ಬಳಸಲು ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಈ ಬಗ್ಗೆ ಮಾತುಕತೆ ನಡೆದು ಬರುತ್ತಿದೆ. ಈ ಮಾತುಕತೆ ಯಶಸ್ವಿಯಾಗಲಿದೆ ಎಂದು ಭಾವಿಸುತ್ತೇನೆ. ಹೀಗೆ ಮಾಡುವುದಾದರೆ ಸರಬರಾಜು ಮಾಡಲು ಸಮಸ್ಯೆ ಇರುವುದಿಲ್ಲ ಎಂದು ಹೇಳಿದ್ದಾರೆ.

ಫ್ರಾನ್ಸ್​ನಿಂದ ಆಕ್ಸಿಜನ್ ಆಮದು ಮಾಡುವ ಬಗ್ಗೆ ಕೇಳಿದಾಗ, ನಾವು ಫ್ರಾನ್ಸ್​ನಿಂದ  21 ರೆಡಿ ಟು ಯೂಸ್ ಆಕ್ಸಿಜನ್ ಟ್ಯಾಂಕರ್ ಆಮದು ಮಾಡುತ್ತಿದ್ದೇವೆ. ಅವುಗಳನ್ನು ಶೀಘ್ರದಲ್ಲೇ ತರಲಾಗುವುದು. ಇವುಗಳನ್ನು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಈ ಮೂಲಕ ಆಸ್ಪತ್ರೆಗಳಲ್ಲಿನ ಆಕ್ಸಿಜನ್ ಕೊರತೆ ಪರಿಹರಿಸಲಾಗುವುದು ಎಂದಿದಾರೆ.


ಕೇಂದ್ರವು ರಾಷ್ಟ್ರ ರಾಜಧಾನಿಗೆ ನೀಡಿದ್ದ ಆಮ್ಲಜನಕವನ್ನು ಸ್ವೀಕರಿಸುವಲ್ಲಿ ದೆಹಲಿ ಸರ್ಕಾರ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಮುಂದಿನ ತಿಂಗಳಲ್ಲಿ  ದೆಹಲಿಯಲ್ಲಿ 44 ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುವುದು ಅದರಲ್ಲಿ 8 ಸ್ಥಾವರಗಳನ್ನು ಕೇಂದ್ರವು ಏಪ್ರಿಲ್ 30 ರೊಳಗೆ ಸ್ಥಾಪಿಸಲಿದೆ. 44 ಸ್ಥಾವರಗಳಲ್ಲಿ 36 ಸ್ಥಾವರಗಳನ್ನು ದೆಹಲಿ ಸರ್ಕಾರವು ಸ್ಥಾಪಿಸಲಿದೆ.

ಕಳೆದ ಕೆಲವು ದಿನಗಳಲ್ಲಿ, ನಾನು ಈ ವಿಷಯದಲ್ಲಿ ಸಹಾಯ ಕೋರಿ ವಿವಿಧ ಕೈಗಾರಿಕೋದ್ಯಮಿಗಳಿಗೆ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದೇನೆ. ನಮಗೆ ಎಲ್ಲಾ ಭಾಗಗಳಿಂದಲೂ ಅಪಾರ ಬೆಂಬಲ ದೊರೆತಿದೆ ಮತ್ತು ಭರವಸೆಯನ್ನು ಹೊಂದಿದ್ದೇವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿ ಸರ್ಕಾರಕ್ಕೆ ಸಹಾಯ ಮಾಡುತ್ತಿರುವ ಎಲ್ಲರಿಗೂ ನಾವು ಆಭಾರಿಯಾಗಿದ್ದೇವೆ. ಪ್ರಸ್ತುತ ಕೊವಿಡ್ 19 ಸಾಂಕ್ರಾಮಿಕ ರೋಗದ ವಿರುದ್ಧ ದೆಹಲಿಯ ಹೋರಾಟದಲ್ಲಿ ಕಳೆದ ಮೂರು ದಿನಗಳು ಅತ್ಯಂತ ಕಠಿಣವಾಗಿವೆ. ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವೆಲ್ಲರೂ ಒಗ್ಗೂಡಬೇಕಾಗುತ್ತದೆ. ಒಗ್ಗಟ್ಟಾಗುವ ಮೂಲಕವೇ ನಾವು ಈ ಅಲೆಯನ್ನು ಗೆಲ್ಲಲು ಸಾಧ್ಯವಾಗುತ್ತದೆ ಎಂದು ಸಿಎಂ ಕೇಜ್ರಿವಾಲ್ ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಕೊವಿಡ್ ಪ್ರಕರಣಗಳು ಏರಿಕೆಯಾಗಿದ್ದು ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಕೊರತೆ ತೀವ್ರವಾಗಿದೆ.ಸೋಮವಾರ ದೆಹಲಿಯಲ್ಲಿ 20,201 ಹೊಸ ಕೊವಿಡ್ -19 ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1,047,916 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಹೇಳಿದೆ. ಕಳೆದ 24 ಗಂಟೆಗಳಲ್ಲಿ 380 ಜನರು ಸಾವನ್ನಪ್ಪಿದ್ದಾರೆ. ಇದು ಕಳೆದ ವರ್ಷ ಸಾಂಕ್ರಾಮಿಕ ರೋಗದ ಪ್ರಾರಂಭದಿಂದೀಚೆಗೆ ಒಂದೇ ದಿನ ಅತಿ ಹೆಚ್ಚು ಸಾವು ವರದಿಯಾದ ದಿನವಾಗೆ. ದೆಹಲಿಯಲ್ಲಿ ಸಾವಿನ ಸಂಖ್ಯೆ 14,628 ಆಗಿದ್ದು, ಚೇತರಿಕೆ ಸಂಖ್ಯೆ 940,930 ಕ್ಕೆ ತಲುಪಿದೆ. ಪ್ರಸ್ತುತ, ದೆಹಲಿಯಲ್ಲಿ 92,358 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ:  ದೆಹಲಿಯಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ ಉಚಿತ: ಅರವಿಂದ್ ಕೇಜ್ರಿವಾಲ್

(Delhi govt decided to import 18 oxygen tankers from Bangkok 21 from France says CM Arvind Kejriwal)

Published On - 2:59 pm, Tue, 27 April 21