ಹಸುವಿನ ಕುರಿತ ಅಧ್ಯಯನಕ್ಕೆ ಗೋವನ್ನೇ ಸಾಕಿದ ದೆಹಲಿಯ ಹಂಸರಾಜ್​ ಕಾಲೇಜು

ದೆಹಲಿಯ ಕಾಲೇಜ್​ವೊಂದರಲ್ಲಿ ಹಸುವಿನ ಬಗ್ಗೆ ಅಧ್ಯಯನ ನಡೆಸಲು ಯೋಜನೆ ರೂಪಿಸಲಾಗಿದ. ಇದಕ್ಕಾಗಿ ಗೋ ರಕ್ಷಣೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಹಸುವಿನ ಕುರಿತ ಅಧ್ಯಯನಕ್ಕೆ ಗೋವನ್ನೇ ಸಾಕಿದ ದೆಹಲಿಯ ಹಂಸರಾಜ್​ ಕಾಲೇಜು
ಹಸು
Follow us
TV9 Web
| Updated By: Pavitra Bhat Jigalemane

Updated on:Jan 27, 2022 | 2:20 PM

ಭಾರತದಲ್ಲಿ ಗೋವಿಗೆ ಪವಿತ್ರ ಸ್ಥಾನವಿದೆ. ದೇವರೆಂದು ಪೂಜಿಸುತ್ತೇವೆ. ಇದೀಗ ದೆಹಲಿಯ ಕಾಲೇಜ್​ವೊಂದರಲ್ಲಿ ಹಸುವಿನ ಬಗ್ಗೆ ಅಧ್ಯಯನ ನಡೆಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಗೋ ರಕ್ಷಣೆ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೆಹಲಿಯ ಹಂಸರಾಜ್​ ಕಾಲೇಜಿನ (Hansraj College) ಕ್ಯಾಂಪಸ್​ನಲ್ಲಿ ಈ ಗೋ ರಕ್ಷಣೆ ಮತ್ತು ಸಂಶೋಧನಾ ಕೇಂದ್ರ (cow protection and research centre) ವನ್ನು ಸ್ಥಾಪಿಸಲಾಗಿದ್ದು, ಅಧ್ಯಯನಕ್ಕಾಗಿ ಒಂದು ಹಸುವನ್ನೂ ಸಾಕಲಾಗಿದೆ. ಈ ಕುರಿತು ಇಂಡಿಯನ್​ ಎಕ್ಸ್​ ಪ್ರೆಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುದ್ದಿ ಸಂಸ್ಥೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮ ಶರ್ಮಾ (Dr Rama Sharma) ಮಾತನಾಡಿ, ಹಸುವಿನ ವಿವಿಧ ಅಂಶಗಳ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ಈ ಗೋ ಸಂರಕ್ಷಣಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈಗಾಗಲೇ ಒಂದು ಹಸುವನ್ನು ಸಾಕಲಾಗಿದೆ. ಅಲ್ಲದೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶುದ್ಧ ಹಾಲು ಮತ್ತು ತುಪ್ಪವನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಗೋಬರ್​ಗ್ಯಾಸ್​ಅನ್ನು ಕೂಡ ಸ್ಥಾಪಿಸಲಾಗುವುದು ಎಂದಿದ್ದಾರೆ. 

ಮುಂದುವರೆದು ಮಾತನಾಡಿ, ಒಂದು ಹಸುವಿನಿಂದ ಆರಂಭಿಸಲಾದ ಈ ಯೋಜನೆಯ ಉದ್ದೇಶ, ಅಂದರೆ ಸಂಶೋಧನೆ ಫಲಕಾರಿಯಾದರೆ ಸ್ವಾಮಿ ದಯಾನಂದ ಸರಸ್ವತಿ ಗೋ ಸಂವರ್ಧನ್ ಏವಂ ಅನುಸಂಧಾನ ಕೇಂದ್ರ ಎಂದು ನಾಮಕರಣ ಮಾಡಲಾಗುವುದು. ನಮ್ಮದು ಆರ್ಯ ಸಮಾಜದ ಅಡಿಯಲ್ಲಿ ಬರುವ ದಯಾನಂದ ಆಂಗ್ಲೋ ವೇದಿಕ್ ಟ್ರಸ್ಟ್​ನ ಕಾಲೇಜ್​ ಆಗಿದೆ. ಹೀಗಾಗಿ ಪ್ರತೀ ತಿಂಗಳ ಮೊದಲನೇ ದಿನ ಹವನವನ್ನು ಮಾಡುತ್ತೇವೆ. ಜತೆಗೆ ಆ ತಿಂಗಳಿನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವವರನ್ನು ಆಹ್ವಾನಿಸುತ್ತೇವೆ. ಇದಕ್ಕಾಗಿ ಪ್ರತೀ ತಿಂಗಳು ಮಾರುಕಟ್ಟೆಗೆ ತೆರಳಿ ತುಪ್ಪ ಮತ್ತು ಬೇಕಾದ ಸಾಮಗ್ರಿಗಳನ್ನು ತರಬೇಕು. ಇದೀಗ ಹಸುವನ್ನು ಸಾಕಿದ ಮೇಲೆ ಅದರಿಂದ ದೊರೆಯುವ ಹಾಲು ಮತ್ತು ತುಪ್ಪವನ್ನು ಬಳಕೆ ಮಾಡುತ್ತೇವೆ ಎಂದಿದ್ದಾರೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ  ಗೋ ಸಂರಕ್ಷಣಾ ಕೇಂದ್ರದ ಸ್ಥಾಪನೆಗೆ ಕಟ್ಟಡವನ್ನು ಮಂಜೂರು ಮಾಡಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ;

129 ಮಕ್ಕಳ ಜನನಕ್ಕೆ ಕಾರಣವಾದ ಜಗತ್ತಿನ ಆರೋಗ್ಯವಂತ ವೀರ್ಯ ದಾನಿ ಕ್ಲೈವ್ ಜೋನ್ಸ್

Published On - 2:16 pm, Thu, 27 January 22

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು