ದೆಹಲಿ: ದೇಶದಲ್ಲಿ 5ಜಿ ಟೆಲಿಕಾಂ ತಂತ್ರಜ್ಞಾನ ಜಾರಿಗೆ ತರುವುದನ್ನು ಪ್ರಶ್ನಿಸಿ ಹಿರಿಯ ನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ರದ್ದು ಮಾಡಿದೆ. ದೂರುದಾರರಿಗೆ ₹ 20 ಲಕ್ಷ ದಂಡ ವಿಧಿಸಿದೆ. 5ಜಿ ತರಂಗಾತರಗಳು ಮಾನವರು ಮತ್ತು ಇತರ ಜೀವಿಗಳ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಸರಿಯಾದ ಅಧ್ಯಯನ ನಡೆದಿಲ್ಲ. ಸಂಭಾವ್ಯ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು ಎಂದು ಒತ್ತಾಯಿಸಿ ಜೂಹಿ ಚಾವ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯವು ಅರ್ಜಿದಾರರು ಪ್ರಚಾರ ಗಳಿಸಲೆಂದು ಈ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗೆ ಸರಿಯಾದ ತಳಹದಿಯೇ ಇಲ್ಲ. ಅನಗತ್ಯವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಅಭಿಪ್ರಾಯಪಟ್ಟಿತು. ನಮಗೆ ಅರ್ಜಿ ಸಲ್ಲಿಸುವ ಬದಲು ಮೊದಲು ಸರ್ಕಾರದ ಗಮನ ಸೆಳೆಯಬೇಕಿತ್ತು ಎಂದು ನ್ಯಾಯಾಲಯ ಹೇಳಿತು.
ಏನಿದು ಪ್ರಕರಣ?
ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ನಟಿ ಜೂಹಿ ಚಾವ್ಲಾ ಕಾನೂನು ವ್ಯಾಜ್ಯ ಹೂಡಿದ್ದರು. 5G ತಂತ್ರಜ್ಞಾನವು ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್ಗೆ ಜನರು ಮತ್ತು ಪ್ರಾಣಿಗಗಳನ್ನು 10ರಿಂದ 100 ಪಟ್ಟಿನ ತನಕ ಒಡ್ಡುತ್ತದೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಈ ವಿಚಾರಣೆಯನ್ನು ದೆಹಲಿ ಹೈಕೋರ್ಟ್ನ ಮತ್ತೊಂದು ಪೀಠಕ್ಕೆ ವರ್ಗಾಯಿಸಿತ್ತು.
ಈ ಕುರಿತು ಮಾತನಾಡಿದ್ದ ಜೂಹಿ ಚಾವ್ಲಾ ಅವರ ವಕ್ತಾರರರು, 5G ತಂತ್ರಜ್ಞಾನವು ಮನುಷ್ಯರಿಗೆ ಮತ್ತು ಎಲ್ಲ ಜೀವಿಗಳಿಗೂ ಸುರಕ್ಷಿತ ಎಂಬುದನ್ನು ಪ್ರತಿವಾದಿಗಳು ಸ್ಪಷ್ಟಪಡಿಸಬೇಕು. ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್ ಅಧ್ಯಯನ ವರದಿಯನ್ನು ಅದಕ್ಕೆ ಪೂರಕವಾಗಿ ನೀಡುವಂತೆ ಸೂಚಿಸಲು ಮನವಿ ಮಾಡಲಾಗಿದೆ ಎಂದಿದ್ದರು.
(Delhi High Court dismisses Juhi Chawlas plea against 5G network imposes Rs 20 lakh fine says its an Attempt to gain publicity)
ಇದನ್ನೂ ಓದಿ: 5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ
ಇದನ್ನೂ ಓದಿ: 5G technology: 4K ಗುಣಮಟ್ಟದ ಒಂದು ಇಡೀ ಸಿನಿಮಾ 25 ಸೆಕೆಂಡ್ನಲ್ಲಿ ಡೌನ್ಲೋಡ್ ಮಾಡಬಹುದಾದ 5G ಬಗ್ಗೆ ಗೊತ್ತೆ?
Published On - 5:44 pm, Fri, 4 June 21