5G technology: 4K ಗುಣಮಟ್ಟದ ಒಂದು ಇಡೀ ಸಿನಿಮಾ 25 ಸೆಕೆಂಡ್​ನಲ್ಲಿ ಡೌನ್​ಲೋಡ್ ಮಾಡಬಹುದಾದ 5G ಬಗ್ಗೆ ಗೊತ್ತೆ?

5G technology:  4K ಗುಣಮಟ್ಟದ ಒಂದು ಇಡೀ ಸಿನಿಮಾ 25 ಸೆಕೆಂಡ್​ನಲ್ಲಿ ಡೌನ್​ಲೋಡ್ ಮಾಡಬಹುದಾದ 5G ಬಗ್ಗೆ ಗೊತ್ತೆ?
ಸಾಂದರ್ಭಿಕ ಚಿತ್ರ

ಭಾರತದಲ್ಲಿ 5G ತಂತ್ರಜ್ಞಾನ ಶುರುವಾಗುವುದಕ್ಕೆ ದೊಡ್ಡ ಸಂಖ್ಯೆಯ ಜನರು ಎದುರು ನೋಡುತ್ತಿದ್ದಾರೆ. ಆದರೆ ಇದರಿಂದ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ. ಹಾಗಿದ್ದರೆ ಏನಿದು 5G ? ಇಲ್ಲಿದೆ ವಿವರಣೆ.

TV9kannada Web Team

| Edited By: Srinivas Mata

Jun 04, 2021 | 5:36 PM


ಭಾರತದಲ್ಲಿ 5G ತಂತ್ರಜ್ಞಾನ ಆರಂಭ ಆಗಬಾರದು ಎಂದು ನಟಿ- ಪರಿಸರ ಹೋರಾಟಗಾರ್ತಿ ಜೂಹಿ ಚಾವ್ಲಾ ಕೋರ್ಟ್ ಮೆಟ್ಟಿಲೇರಿದ್ದು, ಅರ್ಜಿ ದೋಷಪೂರಿತವಾಗಿದೆ ಮತ್ತು ಮಾಧ್ಯಮ ಪ್ರಚಾರಕ್ಕೆ ಇದೆಲ್ಲ ಮಾಡಲಾಗುತ್ತಿದೆ ಎಂದು ದೆಹಲಿ ಹೈಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ನಿಮಗೆ ಗೊತ್ತಿರಬಹುದು. ಅಂದ ಹಾಗೆ ಐದನೇ ತಲೆಮಾರಿನ (5th Generation) ವಯರ್​ಲೆಸ್ ನೆಟ್​ವರ್ಕ್​ನಿಂದ ಆರೋಗ್ಯಕ್ಕೆ ಹಾನಿ ಆಗುತ್ತದೆ ಮತ್ತು ಜನರ ಸುರಕ್ಷತೆ ಬಹಳ ಮುಖ್ಯ ಎಂಬ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜೆ.ಆರ್. ಮಿಧಾ ಕಾಯ್ದಿರಿಸಿದ್ದಾರೆ. ಈ ವಿಚಾರವನ್ನು ಕೋರ್ಟ್​ಗೆ ತರುವ ಮೊದಲಿಗೆ ದೂರಸಂಪರ್ಕ ಇಲಾಖೆ (DoT) ಬಳಿ ಏಕೆ ತೆರಳಿಲ್ಲ ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳುವ ಮೊದಲಿಗೆ ಈ ಪ್ರಕರಣದ ಸಿಂಧುತ್ವವನ್ನು ನಿರ್ಧರಿಸುವುದಾಗಿ ಏಕಸದಸ್ಯ ಪೀಠವು ಹೇಳಿದೆ. ಈಗಿನ್ನೂ ಭಾರತದಲ್ಲಿ ಈ ತಂತ್ರಜ್ಞಾನದ ಪರೀಕ್ಷೆ ಆರಂಭ ಆಗಿರುವಾಗ ಅರ್ಜಿ ಹಾಕಿಕೊಳ್ಳಲಾಗಿದೆ. ಅಂದ ಹಾಗೆ 5G ತಂತ್ರಜ್ಞಾನ ಭಾರತದಲ್ಲಿ ಶುರುವಾದರೆ ಇಂಟರ್​ನೆಟ್ ವೇಗಕ್ಕೆ ಭಾರೀ ಉತ್ತೇಜನ ದೊರೆಯುತ್ತದೆ.

5G ತಂತ್ರಜ್ಞಾನದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗುತ್ತಿರುವುದು ಇದೇ ಮೊದಲೇನಲ್ಲ. ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವೈಜ್ಞಾನಿಕ ವಲಯದವರು ತಂತ್ರಜ್ಞಾನದ ಪರಿಣಾಮದ ಬಗ್ಗೆ ಜಾಗತಿಕವಾಗಿಯೇ ಧ್ವನಿ ಎತ್ತಿದ್ದಾರೆ.

ಏನಿದು 5G?
ಇದು ಐದನೇ ತಲೆಮಾರಿನ ಮೊಬೈಲ್ ನೆಟ್​ವರ್ಕ್. ಜಾಗತಿಕ ವಯರ್​ಲೆಸ್​ ಗುಣಮಟ್ಟವನ್ನು 1G, 2G, 3G, 4G ಆದ ಮೇಲೆ 5Gಗೆ ಮೇಲೇರಿಸುತ್ತಿದೆ. ಈ ಮೂಲಕ ಇಂಟರ್​ನೆಟ್ ಜೋಡಣೆ ವ್ಯಾಪಕ ಆಗುತ್ತದೆ. ವರ್ಚುವಲಿ ಎಲ್ಲರನ್ನೂ ಹಾಗೂ ಎಲ್ಲವನ್ನೂ ಜೋಡಿಸುತ್ತದೆ. ಮಷೀನ್​ಗಳಿರಬಹುದು, ವಸ್ತುಗಳು ಅಥವಾ ಸಾಧನಗಳು ಎಲ್ಲವೂ ಲಿಂಕ್ ಆಗುತ್ತವೆ. ಈ ತಂತ್ರಜ್ಞಾನವು ನಿಮ್ಮ ಮೊಬೈಲ್​ಗೆ ಎಂಥ ವೇಗ ತಂದುಕೊಡುತ್ತದೆ ಅಂದರೆ, ಒಂದು ಸೆಕೆಂಡ್​ಗೆ 10GB ಬರುತ್ತದೆ. ಇವತ್ತಿಗೆ ಅಮೆರಿಕದ ಮೊಬೈಲ್​ಫೋನ್​ಗಳಲ್ಲಿ ಸಿಗುತ್ತಿರುವ 4G ಇಂಟರ್​ನೆಟ್​ ವೇಗಕ್ಕೆ ಹೋಲಿಸಿದಲ್ಲಿ 600 ಪಟ್ಟು ವೇಗ ಮತ್ತು ಗೂಗಲ್​ನ ಫೈಬರ್ ಸ್ಟ್ಯಾಂಡರ್ಡ್ ಹೋಮ್ ಬ್ರಾಡ್​ಬ್ಯಾಂಡ್ ಸೇವೆಗಿಂತ 10 ಪಟ್ಟು ವೇಗ. 4K ಗುಣಮಟ್ಟದ ಒಂದು ಇಡೀ ಸಿನಿಮಾವನ್ನು ಕೇವಲ 25 ಸೆಕೆಂಡ್​ನಲ್ಲಿ ಡೌನ್​ಲೋಡ್​ ಮಾಡಬಹುದಾಗಿರುತ್ತದೆ ಎನ್ನುತ್ತಾರೆ ತಜ್ಞರು.

ಹೆಚ್ಚಿನ ಮಲ್ಟಿ- ಜಿಬಿಪಿಎಸ್​ ಡೇಟಾ ವೇಗವನ್ನು ದೊರಕಿಸುವ ಸಲುವಾಗಿ 5G ವಯರ್​ಲೆಸ್​ ತಂತ್ರಜ್ಞಾನ ಇರುವುದು, ಹೆಚ್ಚಿನ ವಿಶ್ವಾಸರ್ಹತೆ, ಭಾರೀ ನೆಟ್​ವರ್ಕ್ ಸಾಮರ್ಥ್ಯಕ್ಕೆ, ಹೆಚ್ಚು ಲಭ್ಯಕ್ಕೆ ಮತ್ತು ಬಳಕೆದಾರರಿಗೆ ಏಕರೀತಿ ಅನುಭವ ದೊರೆಯುವುದಕ್ಕೆ. ಉತ್ತಮ ಪ್ರದರ್ಶನ ಮತ್ತು ಸುಧಾರಿತ ಕ್ಷಮತೆಯು ಹೊಸ ಬಗೆಯ ಬಳಕೆದಾರರ ಅನುಭವವನ್ನು ನೀಡುವುದಕ್ಕೆ ಈ ತಂತ್ರಜ್ಞಾನ ಇದೆ. ಹೊಸ ಕೈಗಾರಿಕೆಗಳನ್ನು ಸಂಪರ್ಕಿಸುತ್ತದೆ ಎನ್ನುತ್ತಾರೆ ತಂತ್ರಜ್ಞರು. ಕಳೆದ ಕೆಲ ಸಮಯದಿಂದ ಕಡಿಮೆ ವೆಚ್ಚದ ಸಲಕರಣೆಗಳನ್ನು ಚೀನಾ ಮೂಲದ ಹುವೈ ನೀಡುತ್ತಿದೆ. ಭದ್ರತೆ ಕಾರಣಗಳಿಗಾಗಿ ಹಲವು ದೇಶಗಳಲ್ಲಿ ಇದನ್ನು ಬಳಸುತ್ತಿಲ್ಲ. ಆ ಕಂಪೆನಿಗೆ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್​ಎ- ಚೀನಾ ಸೇನೆ) ಜತೆಗೆ ನಂಟಿದೆ ಎಂಬುದು ಆರೋಂಪ. ತಂತ್ರಜ್ಞಾನದಲ್ಲಿ ಎರಿಕ್ಸನ್ ಮತ್ತು ಕ್ವಾಲ್​ಕಾಮ್ ಕೂಡ ಜಾಗತಿಕ ಮಟ್ಟದಲ್ಲಿ ಹೆಸರಾಗಿದ್ದಾರೆ.

5G ಆರೋಗ್ಯ ಅಪಾಯಗಳು
2015ರಲ್ಲಿ ವೈಜ್ಞಾನಿಕ ಸಮುದಾಯದ ಕೆಲವರು ಈ ತಂತ್ರಜ್ಞಾನ ಜಾರಿಯ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಮನವಿ ಮಾಡಿದರು. ಆ ನಂತರ 2017ರಲ್ಲಿ ಯುರೋಪಿಯನ್ ಒಕ್ಕೂಟದಲ್ಲಿ ಮನವಿ ಮಾಡಿದರು. ಇದಕ್ಕೆ 390 ವಿಜ್ಞಾನಿಗಳು ಮತ್ತು ವೈದ್ಯರ ಬೆಂಬಲ ಇತ್ತು. 5G ನಿಯೋಜನೆ ತಡೆಯಬೇಕು ಎಂದು ಕೇಳಲಾಯಿತು. ಈ ತಂತ್ರಜ್ಞಾನದಿಂದ ಯಾವುದೇ ನಕಾರಾತ್ಮಕ ಪರಿಣಾಮ ಇಲ್ಲ ಎಂದು ಸರಿಯಾದ ವೈದ್ಯಕೀಯ ಮೌಲ್ಯಮಾಪನ ಆಗುವ ತನಕ ಜಾರಿಗೆ ಬರಬಾರದು ಎಂಬುದು ಮನವಿ ಆಗಿತ್ತು.

“5G ವಯರ್​ಲೆಸ್​ ಸಂವಹನದಿಂದ ಮಾನವ ಆರೋಗ್ಯದ ಮೇಲಿನ ಪರಿಣಾಮಗಳು” – ಎಂಬ ಹೆಸರಿನಲ್ಲಿ ನಡೆದ ಅಧ್ಯಯನವನ್ನು ಯುರೋಪಿಯನ್ ಸಂಸತ್ ಸಂಶೋಧನಾ ಸರ್ವೀಸ್​ನ (EPRS) ಮಿರೊಸ್ಲವ ಕರಬೊಯ್​ಚೆವ ಎಂಬುವವರು 2020ರ ಮಾರ್ಚ್​ನಲ್ಲಿ ಪ್ರಕಟಿಸಿದರು. ಮೊಬೈಲ್ ಫೋನ್​ಗಳು ಮತ್ತು 5Gಯಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದರು. ಆದರೆ ವಿಜ್ಞಾನಿಗಳು, 5G ತಂತ್ರಜ್ಞಾದಿಂದ ಮನುಷ್ಯರಿಗೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದಾರೆ. ಕ್ಯಾನ್ಸರ್, ಡಿಎನ್​ಎ ಹಾನಿ ಮತ್ತಿತರ ಸಮಸ್ಯೆಗಳು ಕಾಡಬಹುದು ಎಂದು ಹೇಳಿದ್ದಾರೆ. ವಯರ್​ಲೆಸ್ ತಂತ್ರಜ್ಞಾನದಿಂದ ಎದುರಾಗುವ ಆರೋಗ್ಯ ಸಮಸ್ಯೆಗಳೇನು ಎಂಬ ಬಗ್ಗೆ ಯುರೋಪಿಯನ್ ಒಕ್ಕೂಟದಿಂದ ಯಾವುದೇ ಅಧ್ಯಯನ ಆಗಿಲ್ಲ. ಆದರೆ 5G ತಂತ್ರಜ್ಞಾನದ ಬಗ್ಗೆ ಕೆಲವೇ ಕೆಲವು ಅಧ್ಯಯನಗಳು ಮಾತ್ರ ನಡೆದಿವೆ.

ಅಂತರರಾಷ್ಟ್ರೀಯ ಮಾರ್ಗದರ್ಶಿ ಸೂತ್ರ
ಎಲೆಕ್ಟ್ರೋಮ್ಯಾಗ್ನಟಿಕ್ ಫೀಲ್ಡ್​ಗಳಿಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಂಸ್ಥೆಗಳು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ನೀಡಿವೆ. ಸದ್ಯಕ್ಕೆ, ಇಂಟರ್​ನ್ಯಾಷನಲ್ ಕಮಿಷನ್ ಆನ್ ನಾನ್- ಅಯಾನೈಸಿಂಗ್ ರೇಡಿಯೇಷನ್ ಪ್ರೊಟೆಕ್ಷನ್ ಮತ್ತು ಇನ್​ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ ಎಂಜಿನಿಯರ್ಸ್ ಇವೆರಡು ಇಂಟರ್​ನ್ಯಾಷನ್ ಕಮಿಟಿ ಆನ್ ಎಲೆಕ್ಟ್ರೋಮ್ಯಾಗ್ನೆಟಿಕ್ ಸೇಫ್ಟಿ ಇವುಗಳ ಮಾರ್ಗದರ್ಶಿ ಸೂತ್ರದ ಪ್ರಕಾರ ನಡೆಸುಕೊಳ್ಳುತ್ತಿವೆ. ಇವು ತಂತ್ರಜ್ಞಾನ ವಿಚಾರದಲ್ಲಿ ನಿರ್ದಿಷ್ಟವಾದದ್ದೇನಲ್ಲ. ಇವು ರೇಡಿಯೋಫ್ರೀಕ್ವೆನ್ಸಿಸ್ 300 Ghz ಕವರ್ ಮಾಡುತ್ತವೆ. ಅದರಲ್ಲಿ 5G ಒಳಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Tv9 Digital Live: ಜಗತ್ತಿನ ವೇಗಕ್ಕೆ ಹೊಂದಿಕೊಳ್ಳಲು ಭಾರತಕ್ಕೆ ಬೇಕು 5ಜಿ ತಂತ್ರಜ್ಞಾನ: ಅಪಾಯಗಳೇನು? ಪರಿಹಾರವುಂಟೆ?

(Why many people opposing 5G technology rollout? Here is an explainer

Follow us on

Related Stories

Most Read Stories

Click on your DTH Provider to Add TV9 Kannada