ದೆಹಲಿ: 10 ಹೊಸ ಒಮಿಕ್ರಾನ್ (Omicron) ಪ್ರಕರಣಗಳು ದಾಖಲಾಗಿದ್ದು, ನಗರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 20 ಕ್ಕೆ ತಲುಪಿದೆ. ಈ ಪೈಕಿ 10 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ (Satyendar Jain) ಹೇಳಿದ್ದಾರೆ. ಭಾರತವು 7,447 ಹೊಸ ಕೊರೊನಾವೈರಸ್ (Coronavirus) ಸೋಂಕು ಪ್ರಕರಣ ದಾಖಲಿಸಿದ್ದು, ಒಟ್ಟು ಕೊವಿಡ್ -19 (Covid-19) ಪ್ರಕರಣಗಳ ಸಂಖ್ಯೆಯನ್ನು 3,47,26,049 ಕ್ಕೆ ತಲುಪಿದೆ. ಆದರೆ ಸಕ್ರಿಯ ಪ್ರಕರಣಗಳು 86,415 ಕ್ಕೆ ಇಳಿದಿದೆ ಎಂದು ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ. ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ 391 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,76,869 ಕ್ಕೆ ಏರಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೊವಿಡ್-19 ಪ್ರಕರಣಗಳಲ್ಲಿ 830 ಪ್ರಕರಣಗಳ ಇಳಿಕೆ ದಾಖಲಾಗಿದೆ. ಇಂದು ಮುಂಜಾನೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಇನ್ನೂ ನಾಲ್ಕು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ 10 ಕ್ಕೆ ತಲುಪಿದೆ ಎಂದು ಹೇಳಿದ್ದಾರೆ. ಪ್ರಸ್ತುತ 40 ಶಂಕಿತ ಪ್ರಕರಣಗಳಿದ್ದು, ಅವರನ್ನು ಲೋಕನಾಯಕ್ ಆಸ್ಪತ್ರೆಗೆ ದಾಖಲಿಸಲಾಗಿದ, ಅವರಲ್ಲಿ 38 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದೆ. “ಯಾವುದೇ ಪ್ರಕರಣಗಳು ಇಲ್ಲಿಯವರೆಗೆ ಯಾವುದೇ ತೀವ್ರವಾದ ರೋಗಲಕ್ಷಣಗಳನ್ನು ಪ್ರದರ್ಶಿಸಿಲ್ಲ” ಎಂದು ಅವರು ಹೇಳಿದರು.
10 new cases of #OmicronVariant reported in Delhi, taking the total number of cases of the variant here to 20. A total of 10 people, out of these 20, have been discharged: Delhi Health Minister Sh. @SatyendarJain
— Shaleen (@ShaleenMitra) December 17, 2021
ಜಾಮ್‌ನಗರದ ಮೂವರು ಒಮಿಕ್ರಾನ್ ರೋಗಿಗಳು ಚೇತರಿಕೆ
ಈ ತಿಂಗಳ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರ ನಗರದಲ್ಲಿ ಕೊರೊನಾವೈರಸ್ನ ಒಮಿಕ್ರಾನ್ ರೂಪಾಂತರಕ್ಕೆ ತುತ್ತಾದ ಜಿಂಬಾಬ್ವೆ ಮೂಲದ ಎನ್‌ಆರ್‌ಐ ವ್ಯಕ್ತಿ, ಅವರ ಪತ್ನಿ ಮತ್ತು ಸೋದರ ಮಾವ ಈಗ ಚೇತರಿಸಿಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಮೂವರು ಒಮಿಕ್ರಾನ್ ರೋಗಿಗಳು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಅವರ ಇತ್ತೀಚಿನ ಕೊವಿಡ್ ಪರೀಕ್ಷೆಗಳು ನಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ, ನಂತರ ಮೂವರಿಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಒಮಿಕ್ರಾನ್ ವಾರ್ಡ್ ಈಗ ಖಾಲಿಯಾಗಿದೆ” ಎಂದು ಜಾಮ್‌ನಗರ ನಗರದ ಸರ್ಕಾರಿ ಜಿಜಿ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ ಸೌಗತ ಚಟರ್ಜಿ ಹೇಳಿದ್ದಾರೆ.
ಯುಕೆಯಿಂದ ಗೋವಾಕ್ಕೆ ಬಂದ ಮೂವರು ಪ್ರಯಾಣಿಕರಿಗೆ ಕೊವಿಡ್
ಶುಕ್ರವಾರ ಬೆಳಗ್ಗೆ ಯುನೈಟೆಡ್ ಕಿಂಗ್‌ಡಮ್‌ನಿಂದ ಗೋವಾಕ್ಕೆ ಆಗಮಿಸಿದ ಮೂವರು ಪ್ರಯಾಣಿಕರು ಕೊರೊನಾವೈರಸ್ ಗೆ ಧನಾತ್ಮಕ ಪರೀಕ್ಷೆ ನಡೆಸಿದರು. ಅವರು ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ತಿಳಿಯಲು ಅವರ ಮಾದರಿಗಳನ್ನು ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ ಎಂದು ರಾಜ್ಯ ಸಚಿವರು ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಇಂದು ಬೆಳಗ್ಗೆ ಯುಕೆಯಿಂದ ಆಗಮಿಸಿದ ವಿಮಾನದಿಂದ ಮೂವರು ರೋಗಿಗಳು ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗಾಗಿ ಕಳುಹಿಸಲಾಗಿದೆ, ವರದಿಗಳಿಗಾಗಿ ಕಾಯಲಾಗುತ್ತಿದೆ” ಎಂದು ಹೇಳಿದ್ದಾರೆ. ಈ ಮೂವರು ಪ್ರಯಾಣಿಕರು ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣದಿಂದ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ 101 ನೇ ವಿಮಾನದಲ್ಲಿ ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಗೋವಾ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: Joe Biden: ಲಸಿಕೆ ಪಡೆಯದವರಿಗೆ ‘ಸಾವಿನ ಚಳಿಗಾಲ’ ಮುಂದಿದೆ; ಒಮಿಕ್ರಾನ್ ಕುರಿತು ಅಮೇರಿಕಾ ಅಧ್ಯಕ್ಷ ಬಿಡೆನ್ ಹೇಳಿಕೆ