ದೆಹಲಿ: ಜಾಗಿಂಗ್​​ಗೆ ಹೋಗಿದ್ದ ಕಾಂಗ್ರೆಸ್ ಸಂಸದೆಯ ಸರ ದೋಚಿ ಪರಾರಿಯಾದ ಕಳ್ಳ

ಕಳ್ಳನೊಬ್ಬ ಕಾಂಗ್ರೆಸ್ ಸಂಸದೆಯ ಸರ(Chain) ದೋಚಿ ಪರಾರಿಯಾಗಿರುವ ಘಟನೆ ದೆಹಲಿಯ ಚಾಣಕ್ಯಪುರಿಯಲ್ಲಿ ನಡೆದಿದೆ. ಹೈ ಸೆಕ್ಯೂರಿಟಿ ವಲಯದಲ್ಲಿ ಕಾಂಗ್ರೆಸ್​ ಸಂಸದೆ ಆರ್ ಸುಧಾರ ಸರ ಕಳ್ಳತನವಾಗಿದೆ. ದೆಹಲಿಯ ತಮಿಳುನಾಡು ಹೌಸ್‌ನಿಂದ ಜಾಗಿಂಗ್​​ಗೆ ಹೋಗಿದ್ದ ಸುಧಾ ಬಳಿ, ಬೈಕ್​​ನಲ್ಲಿ ಬಂದ ಅಪರಿಚಿತ ಯುವಕನೊಬ್ಬ 32 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ.

ದೆಹಲಿ: ಜಾಗಿಂಗ್​​ಗೆ ಹೋಗಿದ್ದ ಕಾಂಗ್ರೆಸ್ ಸಂಸದೆಯ ಸರ ದೋಚಿ ಪರಾರಿಯಾದ ಕಳ್ಳ
ಸುಧಾ

Updated on: Aug 04, 2025 | 3:12 PM

ನವದೆಹಲಿ, ಆಗಸ್ಟ್​ 04: ಕಳ್ಳನೊಬ್ಬ ಕಾಂಗ್ರೆಸ್ ಸಂಸದೆಯ ಸರ(Chain) ದೋಚಿ ಪರಾರಿಯಾಗಿರುವ ಘಟನೆ ದೆಹಲಿಯ ಚಾಣಕ್ಯಪುರಿಯಲ್ಲಿ ನಡೆದಿದೆ. ಹೈ ಸೆಕ್ಯೂರಿಟಿ ವಲಯದಲ್ಲಿ ಕಾಂಗ್ರೆಸ್​ ಸಂಸದೆ ಆರ್ ಸುಧಾರ ಸರ ಕಳ್ಳತನವಾಗಿದೆ. ದೆಹಲಿಯ ತಮಿಳುನಾಡು ಹೌಸ್‌ನಿಂದ ಜಾಗಿಂಗ್​​ಗೆ ಹೋಗಿದ್ದ ಸುಧಾ ಬಳಿ, ಬೈಕ್​​ನಲ್ಲಿ ಬಂದ ಅಪರಿಚಿತ ಯುವಕನೊಬ್ಬ 32 ಗ್ರಾಂ ತೂಕದ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ.

ಬೆಳಗ್ಗೆ 6.15ರ ಸುಮಾರಿಗೆ ಘಟನೆ ನಡೆದಿದೆ. ಆ ವ್ಯಕ್ತಿ ಹೆಲ್ಮೆಟ್​ ಧರಿಸಿದ್ದ, ನಿಧಾನವಾಗಿ ತನ್ನ ಎದುರು ಬರುತ್ತಿದ್ದ ಹಾಗಾಗಿ ಅನುಮಾನ ಬಂದಿರಲಿಲ್ಲ. ಅವನು ಹತ್ತಿರ ಬಂದ ತಕ್ಷಣ ಸರ ಕಸಿದುಕೊಂಡು ಓಡಿಹೋದ. ಘಟನೆಯಲ್ಲಿ ಸುಧಾ ಅವರ ಕುತ್ತಿಗೆಯಲ್ಲಿ ಗಾಯಗಳಾಗಿವೆ ಮತ್ತು ಅವರ ಚೂಡಿದಾರ್ ಕೂಡ ಹರಿದಿದೆ.

2024ರ ತಮ್ಮ ಅಫಿಡವಿಟ್​ನಲ್ಲಿ ಸುಧಾ ತಮ್ಮ ಬಳಿ 480 ಗ್ರಾಂ ಚಿನ್ನವಿದೆ ಎಂದು ಹೇಳಿಕೊಂಡಿದ್ದರು. ಅದರ ಮೌಲ್ಯ 27 ಲಕ್ಷ ರೂ. ಎಂದು ಹೇಳಿದ್ದರು. ಅವರ ಬಳಿ 37 ಲಕ್ಷಕ್ಕೂ ಹೆಚ್ಚು ಆಸ್ತಿ ಇದೆ. ಅಲ್ಲದೆ, ಅವರ ವಿರುದ್ಧ 10 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಇಲ್ಲಿಯವರೆಗೆ ಅಂತಿಮಗೊಳಿಸಲಾದ ಎಲ್ಲಾ ಪ್ರಕರಣಗಳಲ್ಲಿ ಅವರು ತಪ್ಪಿತಸ್ಥರೆಂದು ಸಾಬೀತಾಗಿಲ್ಲ ಎಂದು ಅವರು ಬಹಿರಂಗಪಡಿಸಿದ್ದರು.

ಸಂಸದೆ ಸುಧಾ ಈ ಕುರಿತು ಮಾತನಾಡಿ, ಈ ಘಟನೆ ತುಂಬಾ ಆಘಾತಕಾರಿಯಾಗಿದೆ. ದೇಶದ ರಾಜಧಾನಿಯ ಈ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲದಿದ್ದರೆ,ದೇಶದ ಉಳಿದ ಭಾಗಗಳಲ್ಲಿ ನಾವು ಸುರಕ್ಷತೆಯನ್ನು ಎಲ್ಲಿ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದ್ದಾರೆ. ಈ ಘಟನೆಯ ಬಗ್ಗೆ ಸುಧಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಈ ವಿಷಯದಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರನ್ನು ಸಂಪರ್ಕಿಸಿ ಅಪರಾಧಿಯನ್ನು ಶೀಘ್ರದಲ್ಲೇ ಬಂಧಿಸುವಂತೆ ಮನವಿ ಮಾಡಿದ್ದಾರೆ.

ಮತ್ತಷ್ಟು ಓದಿ: ಮುಳುಬಾಗಿಲುನಲ್ಲಿ ಮಹಿಳೆಯೊಬ್ಬರನ್ನು ಅಟ್ಟಾಡಿಸಿ ನಕಲಿ ಚಿನ್ನದ ಸರ ದೋಚಿದ ಸರಗಳ್ಳರ ಜೋಡಿ

ತಮಿಳುನಾಡಿನ ಮೈಲಾಡುತುರೈ ಕ್ಷೇತ್ರದ ಸಂಸದೆ ಸುಧಾ, ಸಂಸದರಿಗೆ ಅಧಿಕೃತ ವಸತಿ ಸೌಕರ್ಯ ಇನ್ನೂ ಹಂಚಿಕೆಯಾಗದ ಕಾರಣ ಕಳೆದ ಒಂದು ವರ್ಷದಿಂದ ತಮಿಳುನಾಡು ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ.
ಈ ಘಟನೆ ವಿವಿಐಪಿ ಚಾಣಕ್ಯಪುರಿ ಪ್ರದೇಶದಲ್ಲಿ ನಡೆದಿದೆ.

ಸಂಸದೆ ಸುಧಾ ಏನಂದ್ರು?

ಅನೇಕ ವಿದೇಶಿ ರಾಯಭಾರ ಕಚೇರಿಗಳು, ಪ್ರಮುಖ ಸರ್ಕಾರಿ ಕಟ್ಟಡಗಳು ಮತ್ತು ವಿವಿಐಪಿ ಸಂಸ್ಥೆಗಳು ಇಲ್ಲಿವೆ. ಈ ಘಟನೆಯು ರಾಜಧಾನಿ ದೆಹಲಿಯ ಭದ್ರತಾ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಹುಡುಕಲಾಗುತ್ತಿದೆ.

ಕೆಲವು ವಾರಗಳ ಹಿಂದೆ, ರಾಜಧಾನಿಯ ಶಹದಾರ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಸರ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದರು. ಚಿಂತಾಮಣಿ ಪ್ರದೇಶದಲ್ಲಿ ಪೊಲೀಸರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಆರೋಪಿಗಳು ಸಂಚಾರ ಪೊಲೀಸರ ಮೇಲೆ ದಾಳಿ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 2:04 pm, Mon, 4 August 25