AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Votevibe Survey: ಸಂಸತ್ತಿನಲ್ಲಿ ನಡೆದ ‘ಆಪರೇಷನ್ ಸಿಂಧೂರ್​’ ಚರ್ಚೆ ಬಗ್ಗೆ ಜನರು ಏನಂತಾರೆ?

ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಬಾರಿಯ ಪ್ರಮುಖ ವಿಷಯವಸ್ತು ಎಂದರೆ ಅದು ಆಪರೇಷನ್ ಸಿಂಧೂರ್(Operation Sindoor), ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಚರ್ಚೆಗಾಗಿ ಒತ್ತಾಯಿಸಿದ್ದವು. ಜುಲೈ 28ರಿಂದ ಎರಡು ದಿನಗಳ ಕಾಲ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಪರೇಷನ್​ ಸಿಂಧೂರ್​ ಕುರಿತ ಚರ್ಚೆ ಹಾಗೂ ಪ್ರಶ್ನೋತ್ತರಗಳು ನಡೆದವು. ಇದೀಗ ಖಾಸಗಿ ಸಂಸ್ಥೆ ವೋಟ್ ವೈಬ್ ಸದನದಲ್ಲಿ ನಡೆದ ಆಪರೇಷನ್ ಸಿಂಧೂರ್​ ಬಗೆಗಿನ ಚರ್ಚೆ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಹಾಗಾದರೆ ಅಂದಿನ ಚರ್ಚೆ ಬಗ್ಗೆ ಜನರು ಏನೇನು ಹೇಳಿದ್ದಾರೆ ನೋಡೋಣ.

Votevibe Survey: ಸಂಸತ್ತಿನಲ್ಲಿ ನಡೆದ ‘ಆಪರೇಷನ್ ಸಿಂಧೂರ್​’ ಚರ್ಚೆ ಬಗ್ಗೆ ಜನರು ಏನಂತಾರೆ?
ನರೇಂದ್ರ ಮೋದಿ
ನಯನಾ ರಾಜೀವ್
|

Updated on:Aug 04, 2025 | 12:11 PM

Share

ನವದೆಹಲಿ, ಆಗಸ್ಟ್​ 04: ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಬಾರಿಯ ಪ್ರಮುಖ ವಿಷಯವಸ್ತು ಎಂದರೆ ಅದು ಆಪರೇಷನ್ ಸಿಂಧೂರ್(Operation Sindoor). ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಚರ್ಚೆಗಾಗಿ ಒತ್ತಾಯಿಸಿದ್ದವು. ಜುಲೈ 28ರಿಂದ ಎರಡು ದಿನಗಳ ಕಾಲ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಪರೇಷನ್​ ಸಿಂಧೂರ್​ ಕುರಿತ ಚರ್ಚೆ ಹಾಗೂ ಪ್ರಶ್ನೋತ್ತರಗಳು ನಡೆದವು. ಇದೀಗ ಖಾಸಗಿ ಸಂಸ್ಥೆ ವೋಟ್ ವೈಬ್ ಸದನದಲ್ಲಿ ನಡೆದ ಆಪರೇಷನ್ ಸಿಂಧೂರ್​ ಬಗೆಗಿನ ಚರ್ಚೆ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಹಾಗಾದರೆ ಅಂದಿನ ಚರ್ಚೆ ಬಗ್ಗೆ ಜನರು ಏನೇನು ಹೇಳಿದ್ದಾರೆ ನೋಡೋಣ.

ಮೊದಲ ಪ್ರಶ್ನೆ

ನಿಮ್ಮ ಪ್ರಕಾರ, ಸಂಸತ್ತಿನಲ್ಲಿ ನಡೆದ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯಲ್ಲಿ ಮೇಲುಗೈ ಯಾರದ್ದಿತ್ತು? ಆಪರೇಷನ್ ಸಿಂಧೂರ್ ಕುರಿತು ವೋಟ್ ವೈಬ್ ನಡೆಸಿದ ವೀಕ್ಲಿ ವೈಬ್ ಸಮೀಕ್ಷೆ ಪ್ರಕಾರ, ಈ ಚರ್ಚೆಯಲ್ಲಿ ಸರ್ಕಾರವೇ ಮೇಲು ಗೈ ಸಾಧಿಸಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಶೇ.33.6ರಷ್ಟು ಜನರು ಪ್ರತಿಪಕ್ಷಗಳು ಎಂದು ಹೇಳಿದ್ದರೆ, ಶೇ.43.4ರಷ್ಟು ಮಂದಿ ಸರ್ಕಾರವೇ ಮೇಗೈ ಸಾಧಿಸಿದೆ ಎಂದು ಹೇಳಿದೆ. ಅದರಲ್ಲಿ 35-44ವರ್ಷದವರು ಹಾಗೂ 55 ವರ್ಷಕ್ಕಿಂತ ಮೇಲ್ಪಟ್ಟವರು ಸರ್ಕಾರವನ್ನು ಬೆಂಬಲಿಸಿದ್ದಾರೆ.

ಎರಡನೇ ಪ್ರಶ್ನೆ

ನಿಮ್ಮ ಪ್ರಕಾರ ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ತಿನಲ್ಲಿ ಅತ್ಯುತ್ತಮ ಭಾಷಣ ಮಾಡಿದವರು ಯಾರು? ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತು ಅತ್ಯುತ್ತಮವಾಗಿ ಮಾತನಾಡಿದ್ದು, ಪ್ರಧಾನಿ ಮೋದಿ ಎಂದು ಶೇ.34 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ರಾಹುಲ್ ಗಾಂಧಿ ಎಂದು ಶೇ.27.2ರಷ್ಟು ಮಂದಿ ಹೇಳಿದ್ದರೆ, ಪ್ರಿಯಾಂಕಾ ಗಾಂಧಿ ಎಂದು ಶೇ.12.4ರಷ್ಟು ಮಂದಿ ಹೇಳಿದ್ದಾರೆ. ಶೇ.40ರಷ್ಟು ಪುರುಷರು ಮೋದಿಯವರನ್ನು ಬೆಂಬಲಿಸಿದರೆ, ಶೇ.31ರಷ್ಟು ಮಹಿಳೆಯರು ರಾಹುಲ್ ಗಾಂಧಿಯನ್ನು ಬೆಂಬಲಿಸಿದ್ದಾರೆ.

ಮತ್ತಷ್ಟು ಓದಿ: Votevibe Survey: ತಮಿಳುನಾಡು ಚುನಾವಣೆ, ಜನರ ನಾಡಿ ಮಿಡಿತ ಅರಿಯಲು ‘ವೋಟ್ ವೈಬ್’ ಸಮೀಕ್ಷೆ

ಮೂರನೇ ಪ್ರಶ್ನೆ

ಸಂಸತ್ತಿನಲ್ಲಿ ನಡೆದ ಚರ್ಚೆಯ ಆಧಾರದ ಮೇಲೆ, ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು ಎಂಬುದನ್ನು ನೀವು ಒಪ್ಪುತ್ತೀರಾ? ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದಲ್ಲಿ ಟ್ರಂಪ್ ಪಾತ್ರವಿದೆ ಎಂದು ಟ್ರಮಪ್ ಮಧ್ಯಸ್ಥಿಕೆ ವಹಿಸಿದ್ದರು ಎಂದು ಈ ಚರ್ಚೆಯ ಬಳಿಕ ನೀವು ನಂಬುತ್ತೀರಾ ಎಂದು ಕೇಳಲಾಗಿತ್ತು. ಶೇ.44.5ರಷ್ಟು ಮಂದಿ ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಶೇ.39ರಷ್ಟು ಮಂದಿ ಒಪ್ಪುತ್ತೇವೆ ಎಂದಿದ್ದಾರೆ. ನಂಬುವವರಲ್ಲಿ ಯುವಕರ ಸಂಖ್ಯೆಯೇ ಹೆಚ್ಚು. ಶೇ.58ರಷ್ಟು 55 ವರ್ಷಕ್ಕಿಂತ ಹೆಚ್ಚಿನವರು ಇದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ನಾಲ್ಕನೇ ಪ್ರಶ್ನೆ

ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಗುಣಮಟ್ಟವನ್ನು ನೀವು ಹೇಗೆ ನಿರ್ಣಯಿಸುತ್ತೀರಿ? ಬಹುಪಾಲು ಜನರು ಈ ಚರ್ಚೆಯನ್ನು ರಾಜಕೀಯ ಪ್ರೇರಿತವೆಂದು ಕಾಣುತ್ತಿದ್ದಾರೆ. ಶೇ.47.7 ರಷ್ಟು ಮಂದಿ ರಾಯಜೀಯ ಪ್ರೇರಿತ ಎಂದು ಹೇಳಿದ್ದು, ಶೇ.25.5ರಷ್ಟು ಮಂದಿ ತೃಪ್ತಿದಾಯಕವಾಗಿದೆ ಎಂದು, ಶೇ.,15.2ರಷಟು ಮಂದಿ ನಿರಾಶದಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐದನೇ ಪ್ರಶ್ನೆ

ಬಿಹಾರದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೇ? ಸಂಸತ್ತಿನಲ್ಲಿ ಬಿಹಾರದ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಬೇಕು ಎಂದು ಜನರು ಕೇಳಿದ್ದಾರೆ. ಶೇ.49.8ರಷ್ಟು ಮಂದಿ ಈ ಚರ್ಚೆ ಬಯಸಿದ್ದಾರೆ. ಶೇ.55ರಷ್ಟು ಪುರುಷರು ಹಾಗೂ ಶೇ.44ರಷ್ಟು ಮಹಿಳೆಯರು ಇದನ್ನು ಬೆಂಬಲಿಸಿದ್ದಾರೆ.

ಸಮೀಕ್ಷೆಯ ಒಟ್ಟು ಸಾರಾಂಶ

ಸಂಸತ್ತಿನಲ್ಲಿ ನಡೆದ ಆಪರೇಷನ್ ಸಿಂಧೂರ್ ಮೇಲಿನ ಚರ್ಚೆ ತೃಪ್ತಿದಾಯಕವಾಗಿದೆ, ಪ್ರಧಾನಿ ಮೋದಿಯ ಭಾಷಣವನ್ನು ಹೆಚ್ಚು ಮಂದಿ ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಚರ್ಚೆ ಬಯಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಆಪರೇಷನ್ ಸಿಂಧೂರ್ ಎಂದರೇನು?

ಏಪ್ರಿಲ್​ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಉಗ್ರರು ದಾಳಿ ನಡೆಸಿ 26 ಅಮಾಯಕರನ್ನು ಹತ್ಯೆಗೈದಿದ್ದರು. ಇದರ ಪ್ರತಿಯಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ನಾಶಪಡಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:10 pm, Mon, 4 August 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ