Shibu Soren: ಜಾರ್ಖಂಡ್ ಸಿಎಂ ಹೇಮಂತ್ಗೆ ಪಿತೃ ವಿಯೋಗ, ಮಾಜಿ ಸಿಎಂ, ಜೆಎಂಎಂ ಸಂಸ್ಥಾಪಕ ಶಿಬು ಸೊರೆನ್ ನಿಧನ
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ತಂದೆ ಶಿಬು ಸೊರೆನ್ ನಿಧನರಾಗಿದ್ದಾರೆ. ಶಿಬು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ ಸಂಸ್ಥಾಪಕರಾಗಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ತಂದೆ. ಶಿಬು ಸೊರೆನ್ ಅವರನ್ನು ಜುಲೈನಲ್ಲಿ ಮೂತ್ರಪಿಂಡದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾದ ಕಾರಣ, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.

ಜಾರ್ಖಂಡ್, ಆಗಸ್ಟ್ 04: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ)ಸಂಸ್ಥಾಪಕ ಶಿಬು ಸೊರೆನ್(Shibu Soren)ಕೊನೆಯುಸಿರೆಳೆದಿದ್ದಾರೆ. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಅವರು ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರು ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ತಂದೆ.
ಶಿಬು ಸೊರೆನ್ ಅವರನ್ನು ಜುಲೈನಲ್ಲಿ ಮೂತ್ರಪಿಂಡದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಗಂಭೀರವಾದ ಕಾರಣ, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು.
ಶಿಬು ಸೊರೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮತ್ತು ದೇಶದ ಹಿರಿಯ ನಾಯಕರಲ್ಲಿ ಒಬ್ಬರಾದ ಶಿಬು ಸೊರೆನ್ ಸಮಾಜದ ದುರ್ಬಲ ವರ್ಗಗಳ, ವಿಶೇಷವಾಗಿ ಬುಡಕಟ್ಟು ಸಮಾಜದ ಹಕ್ಕುಗಳು ಮತ್ತು ಸಬಲೀಕರಣಕ್ಕಾಗಿ ಜೀವಮಾನವಿಡೀ ಹೋರಾಡಿದ ಜಾರ್ಖಂಡ್‌ನ ಧೀಮಂತ ನಾಯಕರಲ್ಲಿ ಒಬ್ಬರು ಎಂದು ಹೇಳಿದ್ದಾರೆ. ನನಗೂ ಅವರ ದೀರ್ಘ ಪರಿಚಯವಿತ್ತು. ಅವರ ನಿಧನದಿಂದ ನನಗೆ ತೀವ್ರ ದುಃಖವಾಗಿದೆ ಎಂದಿದ್ದಾರೆ.
ರಾಜನಾಥ್ ಸಿಂಗ್ ಪೋಸ್ಟ್
झारखंड के पूर्व मुख्यमंत्री और देश के वरिष्ठतम नेताओं में से एक, श्री शिबू सोरेन जी झारखंड के उन क़द्दावर नेताओं में गिने जाते थे जिन्होंने समाज के कमजोर वर्गों विशेषरूप से जनजातीय समाज के अधिकारों और उनके सशक्तिकरण के लिए आजीवन संघर्ष किया। वे हमेशा ज़मीन और जनता से जुड़े रहे।…
— Rajnath Singh (@rajnathsingh) August 4, 2025
ಶಿಬು ಸೊರೆನ್ ಬಾಲ್ಯ
ಮಾಜಿ ಮುಖ್ಯಮಂತ್ರಿ ಸೊರೆನ್ ಜನವರಿ 11, 1944 ರಂದು ಬಿಹಾರದ (ಈಗ ಜಾರ್ಖಂಡ್) ಹಜಾರಿಬಾಗ್‌ನಲ್ಲಿ ಜನಿಸಿದರು. ಅವರನ್ನು ಜನ ದಿಶೋಮ್ ಗುರು ಮತ್ತು ಗುರೂಜಿ ಎಂದೂ ಕರೆಯುತ್ತಿದ್ದರು. ಆರಂಭದಲ್ಲಿ ಅವರು ಬುಡಕಟ್ಟು ಜನಾಂಗದವರ ಶೋಷಣೆಯ ವಿರುದ್ಧ ಹೋರಾಡಿದರು. 70 ರ ದಶಕದಲ್ಲಿ ‘ಧಂಕಟ್ನಿ ಆಂದೋಲನ’ ಮತ್ತು ಇತರ ಚಳವಳಿಗಳ ಮೂಲಕ ಬುಡಕಟ್ಟು ಸಮಾಜದ ಧ್ವನಿಯಾದರು.
ಬಿಹಾರದಿಂದ ಪ್ರತ್ಯೇಕ ಜಾರ್ಖಂಡ್ ರಾಜ್ಯವನ್ನು ರಚಿಸುವ ಚಳವಳಿಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದರು. ಅವರು ಮೂರು ಬಾರಿ (2005, 2008, 2009) ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು, ಆದರೆ ಒಮ್ಮೆಯೂ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಶಿಬು ಸೊರೆನ್ ರಾಜಕೀಯ ಜೀವನ
ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ಅವರು ಕಲ್ಲಿದ್ದಲು ಸಚಿವರಾದರು ಆದರೆ ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು. ಶಿಬು ಸೊರೆನ್ ಅವರ ತಂದೆ ಶೋಭ್ರಾಮ್ ಸೊರೆನ್ ಅವರ ಹತ್ಯೆಯ ನಂತರ ರಾಜಕೀಯ ಪ್ರವೇಶಿಸಿದರು.
ಶಿಬು 1977 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು, ಆದರೆ ಸೋಲನ್ನು ಎದುರಿಸಬೇಕಾಯಿತು. ಆದರೆ ಅವರು 1980 ರಲ್ಲಿ ಯಶಸ್ವಿಯಾದರು. ಇದಾದ ನಂತರ, ಅವರು 1986, 1989, 1991, 1996 ರಲ್ಲಿ ಚುನಾವಣೆಗಳಲ್ಲಿ ಗೆದ್ದರು. 2004 ರಲ್ಲಿ, ಅವರು ದುಮ್ಕಾದಿಂದ ಲೋಕಸಭೆಗೆ ಆಯ್ಕೆಯಾದರು. ಶಿಬು ಸೊರೆನ್ ಕೂಡ ಜಾರ್ಖಂಡ್ ಮುಖ್ಯಮಂತ್ರಿಯಾಗಿದ್ದರು. ಈಗ ಅವರ ಮಗ ಹೇಮಂತ್ ಸೊರೆನ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




