AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಾಂತರ, ಮದುವೆಗೆ ನಿರಾಕರಣೆ, ಕತ್ತು ಸೀಳಿ ಮಹಿಳೆಯ ಹತ್ಯೆ ಮಾಡಿದ ಶೇಖ್ ರಯೀಸ್

ಮತಾಂತರ(Conversion) ಹಾಗೂ ಮದುವೆ ನಿರಾಕರಿಸಿದ್ದಕ್ಕೆ ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಭಾಗ್ಯಶ್ರೀ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕತ್ತು ಸೀಳಿದ್ದಷ್ಟೇ ಅಲ್ಲದೆ, ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ.

ಮತಾಂತರ, ಮದುವೆಗೆ ನಿರಾಕರಣೆ, ಕತ್ತು ಸೀಳಿ ಮಹಿಳೆಯ ಹತ್ಯೆ ಮಾಡಿದ ಶೇಖ್ ರಯೀಸ್
ಭಾಗ್ಯ
TV9 Web
| Updated By: ನಯನಾ ರಾಜೀವ್|

Updated on:Aug 04, 2025 | 11:24 AM

Share

ಮಧ್ಯಪ್ರದೇಶ, ಆಗಸ್ಟ್​ 04: ಮತಾಂತರ(Conversion) ಹಾಗೂ ಮದುವೆ ನಿರಾಕರಿಸಿದ್ದಕ್ಕೆ ಶೇಖ್ ರಯೀಸ್ ಎಂಬಾತ ಭಾಗ್ಯಶ್ರೀ ಎಂಬುವವರನ್ನು ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನೇಪಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ನವರಾದಲ್ಲಿ ಹಿಂದೂ ಮಹಿಳೆಗೆ ಇಸ್ಲಾಂಗೆ ಮತಾಂತರವಾಗುವಂತೆ ರಯೀಸ್ ಒತ್ತಡ ಹಾಕುತ್ತಿದ್ದ, ಆಕೆ ನಿರಾಕರಿಸಿದ್ದಕ್ಕೆ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಭಾಗ್ಯಶ್ರೀ ಅವರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಕತ್ತು ಸೀಳಿದ್ದಷ್ಟೇ ಅಲ್ಲದೆ, ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಭಾಗ್ಯಶ್ರೀ ಸಹೋದರಿ ಸುಭದ್ರಾ ಬಾಯಿ ರಯೀಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆತ ತುಂಬಾ ದಿನಗಳಿಂದ ತನ್ನ ಅಕ್ಕನ ಬಳಿ ಮದುವೆಯಾಗುವಂತೆ ಹಾಗೂ ಮತಾಂತರಗೊಳ್ಳುವಂತೆ ಆತ ಒತ್ತಡ ಹಾಕುತ್ತಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ, ಹೀಗಾಗಿ ರಾತ್ರೋ ರಾತ್ರಿ ಆಕೆಯ ಮನೆಗೆ ನುಗ್ಗಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಆರೋಪಿಯ ವಿರುದ್ಧ ಕೊಲೆ ಮತ್ತು ದೌರ್ಜನ್ಯದ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದ್ದು, ಆತನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಬುರ್ಹಾನ್‌ಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್‌ಪಿ ಅಂತರ ಸಿಂಗ್ ಕನೇಶ್ ದೃಢಪಡಿಸಿದ್ದಾರೆ. ಈ ಘಟನೆ ಹಿಂದೂ ಸಮುದಾಯದಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಇದನ್ನು ಲವ್ ಜಿಹಾದ್ ಎಂದು ಕರೆದಿದ್ದಾರೆ.

ಮತ್ತಷ್ಟು ಓದಿ: ಉತ್ತರ ಪ್ರದೇಶದಲ್ಲಿ ಐಸಿಸ್ ಶೈಲಿಯ ಧಾರ್ಮಿಕ ಮತಾಂತರ ದಂಧೆ ಪತ್ತೆ; 6 ರಾಜ್ಯಗಳಲ್ಲಿ 10 ಜನರ ಬಂಧನ

ಮತ್ತೊಂದು ಘಟನೆ

ಗಂಡ ಬೇಡ ಆತನ ಸ್ನೇಹಿತನೇ ಬೇಕೆಂದು ಪಟ್ಟು ಹಿಡಿದ ಮಹಿಳೆ, ಮನೆಯವರೆಲ್ಲರೂ ಆತ್ಮಹತ್ಯೆಗೆ ಶರಣು ನಿನಗಿನ್ನೂ ಬದುಕಿದೆ ಆತನನ್ನು ಬಿಟ್ಟಿಬಿಡು, ಅದನ್ನು ಕೆಟ್ಟ ಕನಸೆಂದು ಮರೆತು ಮತ್ತೆ ನಿನ್ನನ್ನು ಸ್ವೀಕರಿಸುತ್ತೇನೆ ಎಂದು ಗಂಡ(Husband) ಎಷ್ಟೇ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಕೊಳ್ಳದೆ ಮಹಿಳೆ ತನ್ನ ಛಾಳಿ ಮುಂದುವರೆಸಿದ್ದಳು. ಗಂಡ ಬೇಡ ಆತನ ಸ್ನೇಹಿತನೇ ಬೇಕು ಎಂದು ಪಟ್ಟು ಹಿಡಿದಿದ್ದಳು. ಕೊನೆಗೆ ಈ ನೋವು ಸಹಿಸಲಾಗದೆ ಕುಟುಂಬದ ಎಲ್ಲಾ ಸದಸ್ಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಜುಲೈ 25ರ ರಾತ್ರಿ ಮನೋಹರ್ ಲೋಧಿ (45), ಅವರ ತಾಯಿ ಫೂಲ್ರಾಣಿ (70), ಮಗಳು ಶಿವಾನಿ (18) ಮತ್ತು ಅವರ 16 ವರ್ಷದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:19 am, Mon, 4 August 25

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ