ದೆಹಲಿ ಅಂಗಾಂಗ ಕಸಿ ದಂಧೆಯಲ್ಲಿ 6 ಮಂದಿ ಬಂಧನ; ಬಾಂಗ್ಲಾದೇಶಿಯೇ ಮಾಸ್ಟರ್ ಮೈಂಡ್

ದೆಹಲಿಯಲ್ಲಿ ನಡೆದಿರುವ ಅಂಗಾಂಗ ಕಸಿ ದಂಧೆಯನ್ನು ಬಯಲಿಗೆಳೆದ ಪೊಲೀಸರು ವೈದ್ಯರು ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಅವರು 2019ರಿಂದ ಅಂಗಾಂಗ ದಂಧೆ ನಡೆಸುತ್ತಿದ್ದಾರೆ. ತಮಗೆ ಸಿಕ್ಕ ಸುಳಿವಿನ ಮೇರೆಗೆ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ 2 ತಿಂಗಳ ಕಾಲ ಈ ಪ್ರಕರಣದ ಕೆಲಸ ಮಾಡುತ್ತಿದೆ.

ದೆಹಲಿ ಅಂಗಾಂಗ ಕಸಿ ದಂಧೆಯಲ್ಲಿ 6 ಮಂದಿ ಬಂಧನ; ಬಾಂಗ್ಲಾದೇಶಿಯೇ ಮಾಸ್ಟರ್ ಮೈಂಡ್
ದೆಹಲಿ ಅಂಗಾಂಗ ಕಸಿ ದಂಧೆ; ವೈದ್ಯರು ಸೇರಿ 6 ಮಂದಿಯ ಬಂಧನ
Follow us
ಸುಷ್ಮಾ ಚಕ್ರೆ
|

Updated on: Jul 09, 2024 | 3:16 PM

ನವದೆಹಲಿ: ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಬಹಿರಂಗಪಡಿಸಿದ ಅಂಗಾಂಗ ಕಸಿ ದಂಧೆಗೆ ಸಂಬಂಧಿಸಿದಂತೆ ವೈದ್ಯರು ಸೇರಿದಂತೆ ಸುಮಾರು 7 ಜನರನ್ನು ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಇಂದು (ಮಂಗಳವಾರ) ಬಂಧಿಸಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದರು. ಪ್ರತಿ ಕಸಿ ಮಾಡಲು 25ರಿಂದ 30 ಲಕ್ಷ ರೂ. ಪಡೆಯುತ್ತಿದ್ದರು. ದಾನಿಗಳು ಮತ್ತು ಸ್ವೀಕರಿಸುವವರು ಇಬ್ಬರೂ ಬಾಂಗ್ಲಾದೇಶದವರು. ದೆಹಲಿ ಪೊಲೀಸರ ಪ್ರಕಾರ, ಅವರು 2019ರಿಂದ ಅಂಗಾಂಗ ಕಸಿ ದಂಧೆ ನಡೆಸುತ್ತಿದ್ದಾರೆ.

ತಮಗೆ ಸಿಕ್ಕ ಸುಳಿವಿನ ಮೇರೆಗೆ ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ 2 ತಿಂಗಳ ಕಾಲ ಪ್ರಕರಣದ ತನಿಖೆ ನಡೆಸುತ್ತಿದೆ. ದಾನಿಗಳು ಮತ್ತು ಸ್ವೀಕರಿಸುವವರಲ್ಲಿ ಹೆಚ್ಚಿನವರು ಬಾಂಗ್ಲಾದೇಶದಿಂದ ಶಸ್ತ್ರಚಿಕಿತ್ಸೆಗಾಗಿ ನಕಲಿ ದಾಖಲೆಗಳ ಆಧಾರದ ಮೇಲೆ ಭಾರತಕ್ಕೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳಾ ವೈದ್ಯೆ ಈಗ ಆಗ್ನೇಯ ದೆಹಲಿಯ ಪ್ರಸಿದ್ಧ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸಕರಾಗಿ ಕೆಲಸ ಮಾಡುತ್ತಿದ್ದಾರೆ. 2021 ಮತ್ತು 2023ರ ನಡುವೆ ಬಾಂಗ್ಲಾದೇಶದ ಕೆಲವು ಜನರ ಶಸ್ತ್ರಚಿಕಿತ್ಸೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಧರ್ಮದೇಟು; ವಿಡಿಯೋ ವೈರಲ್

ಸಂದರ್ಶಕ ಸಲಹೆಗಾರರಾಗಿದ್ದ ಅವರು ನೋಯ್ಡಾ ಮೂಲದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದರು. ವೈದ್ಯರ ಸಹಾಯಕ ಮತ್ತು ಮೂವರು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ನಾಲ್ವರು ಸಹ ಬಂಧಿತರಾಗಿದ್ದಾರೆ. ಕಳೆದ 2 ವಾರಗಳಲ್ಲಿ ಬಂಧನಗಳು ನಡೆದಿವೆ.

‘ಅಂತಾರಾಷ್ಟ್ರೀಯ ಅಂಗಾಂಗ ಕಸಿ ದಂಧೆಗೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ. ಈ ದಂಧೆಯ ಮಾಸ್ಟರ್ ಮೈಂಡ್ ಬಾಂಗ್ಲಾದೇಶಿ, ದಾನಿ ಮತ್ತು ಸ್ವೀಕರಿಸುವವರು ಬಾಂಗ್ಲಾದೇಶದವರು, ರಸೆಲ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದೇವೆ’ ಎಂದು ಡಿಸಿಪಿ ಕ್ರೈಂ ಬ್ರಾಂಚ್ ಅಮಿತ್ ಗೋಯೆಲ್ ಹೇಳಿದ್ದಾರೆ.

ಇದನ್ನೂ ಓದಿ: ಹೆರಿಗೆ ವೇಳೆ ಮಗುವಿನ ಮರ್ಮಾಂಗವನ್ನೇ ಕಟ್ ಮಾಡಿದ ವೈದ್ಯ: ಕುಟುಂಬಸ್ಥರಿಂದ ಪ್ರತಿಭಟನೆ

ದೆಹಲಿ ಪೊಲೀಸ್ ಕಮಿಷನರ್ ಅಮಿತ್ ಗೋಯೆಲ್ ಪ್ರಕಾರ, ಪ್ರಕರಣದ ಹಿಂದಿನ ‘ಮಾಸ್ಟರ್ ಮೈಂಡ್’ ಬಾಂಗ್ಲಾದೇಶಿ ಮತ್ತು ಪ್ರಕರಣದಲ್ಲಿ ದಾನಿಗಳು ಮತ್ತು ಸ್ವೀಕರಿಸುವವರು ಬಾಂಗ್ಲಾದೇಶದವರಾಗಿದ್ದಾರೆ. ದರೋಡೆಕೋರರೆಲ್ಲರೂ ಬಾಂಗ್ಲಾದೇಶದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಶಂಕಿಸಲಾಗಿದೆ.

ಈ ಪ್ರಕರಣದಲ್ಲಿ ಬಂಧಿತ 7 ಮಂದಿಯ ವಿಚಾರಣೆ ಇನ್ನೂ ಮುಂದುವರಿದಿದೆ. ಭಾರತದ ಮಾನವನ ಅಂಗಗಳ ಕಸಿ ಕಾಯಿದೆ (2014) ಪ್ರಕಾರ, ಅಂಗಾಂಗ ದಾನವನ್ನು ಪೋಷಕರು ಮತ್ತು ಒಡಹುಟ್ಟಿದವರಂತಹ ತಕ್ಷಣದ ರಕ್ತ ಸಂಬಂಧಗಳಿಂದ ಮಾತ್ರ ಅನುಮತಿಸಲಾಗುತ್ತದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ