ದೆಹಲಿ: ಬುಧವಾರ ರಾತ್ರಿ ಈಶಾನ್ಯ ದೆಹಲಿಯ (Delhi Police) ಉದ್ಯಾನವನದಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದ ನಂತರ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಮೂವರನ್ನು ಬಂಧಿಸಿ ಕೋಮು ಘರ್ಷಣೆಯಲ್ಲಿ (communal clashes) ತೊಡಗಿದ್ದ 30 ಕ್ಕೂ ಹೆಚ್ಚು ಸ್ಥಳೀಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೊಂದು ಸಣ್ಣ ಗಲಾಟೆಯಾಗಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಘಟನೆಯ ಕುರಿತು ರಾತ್ರಿ 9.50ಕ್ಕೆ ವೆಲ್ಕಮ್ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿತ್ತು. ಪೋಲೀಸರು ಫೋಟೋ ಚೌಕ್ (Photo Chowk) ಬಳಿಯ ಉದ್ಯಾನವನವನ್ನು ತಲುಪಿದಾಗ, ಎರಡು ಗುಂಪುಗಳು ಹೊಡೆದಾಟ ಕಂಡುಬಂದಿತ್ತು. “ಜಗಳದ ಬಗ್ಗೆ ನಮಗೆ ಸ್ಥಳೀಯರಿಂದ ಅನೇಕ ಕರೆಗಳು ಬಂದವು. ಆರಂಭದಲ್ಲಿ, ಇದು ಉದ್ಯಾನದಲ್ಲಿ ಸಣ್ಣ ವಿಷಯಕ್ಕೆ ಮಕ್ಕಳ ಗುಂಪು ಜಗಳವಾಗಿತ್ತು. ದೊಡ್ಡವರು ಬಂದು ಮಕ್ಕಳೊಂದಿಗೆ ಮಾತನಾಡಲು ಆರಂಭಿಸಿದಾಗ ಎರಡು ಸಮುದಾಯಗಳ ಸಣ್ಣ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಉದ್ಯಾನದಲ್ಲಿ ಜನರು ಜಮಾಯಿಸಿದ್ದರಿಂದ ಕೋಮು ಉದ್ವಿಗ್ನತೆಯ ಆತಂಕ ಉಂಟಾಯಿತು. ಹಿರಿಯ ವ್ಯಕ್ತಿಗಳ ಗುಂಪು ಸಮಸ್ಯೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ ಎಂದು ನಾವು ಕಂಡುಕೊಂಡಿದ್ದೇವೆ. ಮುನ್ನೆಚ್ಚರಿಕೆ ಕ್ರಮವಾಗಿ ನಾವು ಹೆಚ್ಚುವರಿ ಬಲವನ್ನು ನಿಯೋಜಿಸಿದ್ದೇವೆ ಮತ್ತು ಎಲ್ಲರನ್ನೂ ಮನೆಗೆ ಕಳುಹಿಸಿದ್ದೇವೆ ಎಂದು ಡಿಸಿಪಿ (ಈಶಾನ್ಯ) ಸಂಜಯ್ ಸೈನ್ ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಶಾಂತಿಯುತವಾಗಿದೆ ಮತ್ತು ಗಲಭೆ ಮತ್ತು ಸಿಆರ್‌ಪಿಸಿ 108 (ದೇಶದ್ರೋಹಿ ವಿಷಯಗಳನ್ನು ಹರಡುವ ವ್ಯಕ್ತಿಗಳಿಂದ ಉತ್ತಮ ನಡವಳಿಕೆಗಾಗಿ ಭದ್ರತೆ) ಸೆಕ್ಷನ್‌ಗಳ ಅಡಿಯಲ್ಲಿ ಗುಂಪುಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ವಿಚಾರಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ 30 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಗಲಾಟೆಯಲ್ಲಿ ಅವರ ಪಾತ್ರವನ್ನು ಕಂಡುಹಿಡಿಯಲಾಗುತ್ತಿದೆ. ಆರೋಪಿಗಳನ್ನು ಗುರುತಿಸಲು ಸಹಾಯ ಮಾಡುವಂತೆ ಪೊಲೀಸರು ನಗ್ರಿಕ್ ಭೈಚಾರ ಸಮಿತಿ ಸದಸ್ಯರನ್ನು (ಶಾಂತಿ ಸಮಿತಿ) ಕೇಳಿದ್ದಾರೆ.
ಈಶಾನ್ಯ ದೆಹಲಿಯ ಮೂವರನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:55 pm, Thu, 5 May 22