ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿತ ಗರ್ಭಿಣಿ

ಮಲಗಿದ್ದ ಗಂಡನ ಮೇಲೆ ಗರ್ಭಿಣಿಯೊಬ್ಬಳು ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮದಂಗೀರ್ ಪ್ರದೇಶದಲ್ಲಿ ಮಗಳು ಪಕ್ಕದಲ್ಲಿ ಮಲಗಿದ್ದಾಗ, ಮಹಿಳೆಯೊಬ್ಬರು ರಾತ್ರಿ ಮಲಗಿದ್ದ ತನ್ನ ಗಂಡನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದು, ನಂತರ ಮೆಣಸಿನ ಪುಡಿಯನ್ನು ಎರಚಿದ್ದಾರೆ. ಪತಿ ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಸಫ್ದರ್ಜಂಗ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ.

ಮಲಗಿದ್ದ ಗಂಡನ ಮೇಲೆ ಬಿಸಿ ಎಣ್ಣೆ ಸುರಿದು ಮೆಣಸಿನ ಪುಡಿ ಎರಚಿತ ಗರ್ಭಿಣಿ
ಕ್ರೈಂ

Updated on: Oct 11, 2025 | 10:50 AM

ನವದೆಹಲಿ, ಅಕ್ಟೋಬರ್ 11: ಮಲಗಿದ್ದ ಗಂಡನ ಮೇಲೆ ಗರ್ಭಿಣಿ(Pregnant)ಯೊಬ್ಬಳು ಬಿಸಿ ಎಣ್ಣೆ(Oil) ಸುರಿದು ಮೆಣಸಿನ ಪುಡಿ ಎರಚಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಮದಂಗೀರ್ ಪ್ರದೇಶದಲ್ಲಿ ಮಗಳು ಪಕ್ಕದಲ್ಲಿ ಮಲಗಿದ್ದಾಗ, ಮಹಿಳೆಯೊಬ್ಬರು ರಾತ್ರಿ ಮಲಗಿದ್ದ ತನ್ನ ಗಂಡನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದು, ನಂತರ ಮೆಣಸಿನ ಪುಡಿಯನ್ನು ಎರಚಿದ್ದಾರೆ. ಪತಿ ಪ್ರಸ್ತುತ ಗಂಭೀರ ಸ್ಥಿತಿಯಲ್ಲಿದ್ದು, ಸಫ್ದರ್ಜಂಗ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ.

ದಿನೇಶ್ ಕಿರುಚಾಟದಿಂದ ನೆರೆಹೊರೆಯವರು ತಕ್ಷಣವೇ ಎಚ್ಚರಗೊಂಡರು. ಕೂಡಲೇ ಅವರಮನೆಯ ಬಾಗಿಲ ಬಳಿ ಬಂದು ಎಷ್ಟೇ ಕರೆದರೂ ಯಾರೂ ಬಾಗಿಲು ತೆರೆಯಲಿಲ್ಲ. ಎಫ್‌ಐಆರ್ ಪ್ರಕಾರ, ಈ ಘಟನೆ ಅಕ್ಟೋಬರ್ 2 ರಂದು ಬೆಳಗಿನ ಜಾವ 3.15 ರ ಸುಮಾರಿಗೆ ಸಂಭವಿಸಿದೆ.

ಘಟನೆಯ ದಿನ, ದಿನೇಶ್ ಕಿರುಚುತ್ತಿರುವುದು ನಮಗೆ ಕೇಳಿಸಿತು.ನಾವು ಮೇಲಕ್ಕೆ ಹೋದಾಗ, ಅವರ ಪತ್ನಿ ಬಾಗಿಲು ತೆರೆಯುತ್ತಿರಲಿಲ್ಲ, ಮತ್ತು ಅವರು ತೀವ್ರವಾಗಿ ಸುಟ್ಟು ಹೋಗಿದ್ದರು. ಅವರ ಪತ್ನಿ ತಮ್ಮ ಮೇಲೆ ಬಿಸಿ ಎಣ್ಣೆ ಮತ್ತು ಮೆಣಸಿನ ಪುಡಿ ಸುರಿದಿದ್ದಾರೆ ಎಂದು ಅವರು ಹೇಳುತ್ತಲೇ ಇದ್ದರು ಎಂದು ಮನೆ ಮಾಲೀಕರ ಮಗಳು ಅಂಜಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಗರ್ಭಿಣಿ ನಾಯಿ ಮೇಲೆ ವಾಹನ ಹರಿಸಿ ಕ್ರೌರ್ಯ ಮೆರೆದ ಚಾಲಕ; ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ತನ್ನ ತಂದೆ ದಿನೇಶ್ ಅವರ ಸೋದರ ಮಾವನಿಗೆ ಕರೆ ಮಾಡಿದ ನಂತರವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅಂಜಲಿ ಹೇಳಿಕೊಂಡಿದ್ದಾರೆ. ಅವರು ಸುಮಾರು ಏಳು ತಿಂಗಳ ಹಿಂದೆ ನಮ್ಮ ಮನೆಗೆ ಬಂದಿದ್ದರು ಎಂದು ಅಂಜಲಿ ಹೇಳಿದರು.

ನೆಲಮಹಡಿಯಲ್ಲಿ ವಾಸಿಸುವ ಮತ್ತೊಬ್ಬ ನಿವಾಸಿ ಮಂಜು ಮಾತನಾಡಿ, ನಾವು ಸುಮಾರು ಎರಡು ತಿಂಗಳ ಹಿಂದೆ ಈ ಮನೆಗೆ ಸ್ಥಳಾಂತರಗೊಂಡೆವು. ನಂತರ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದವರ ಕುಟುಂಬದಲ್ಲಿ ಏನೋ ಜಗಳ ನಡೆದಿದೆ, ಆಕೆ ಗಂಡನ ಮೇಲೆ ಬಿಸಿ ಎಣ್ಣೆ ಸುರಿದಿದ್ದಾರೆ ಎಂದು ಹೇಳಿರುವುದಷ್ಟೇ ತಮಗೆ ಗೊತ್ತಿದೆ ಎಂದಿದ್ದಾರೆ.

ಅಕ್ಟೋಬರ್ 1 ಮತ್ತು 2 ರ ಮಧ್ಯರಾತ್ರಿ, ದಿನೇಶ್ ಮಲಗುವುದಕ್ಕೆ ಮುಂಚೆ ದಂಪತಿ ನಡುವೆ ದೊಡ್ಡ ಜಗಳವಾಗಿತ್ತು. ನಂತರ ಸಾಧನಾ ಒಂದು ಪ್ಯಾನ್‌ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅವರ ಮೇಲೆ ಸುರಿದಿದ್ದಾಳೆ. ದಿನೇಶ್ ಸಹಾಯಕ್ಕಾಗಿ ಕಿರುಚಾಡಿದ್ದಾನೆ. ಅಕ್ಟೋಬರ್ 2 ರ ಮುಂಜಾನೆ ಮದನ್ ಮೋಹನ್ ಮಾಲ್ವಿಯಾ ಆಸ್ಪತ್ರೆಯಿಂದ ವೈದ್ಯಕೀಯ-ಕಾನೂನು ಪ್ರಕರಣದ ವರದಿಯನ್ನು ಸ್ವೀಕರಿಸಿದ ನಂತರ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ನಂತರ ಅವರ ಸ್ಥಿತಿಯ ತೀವ್ರತೆಯಿಂದಾಗಿ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ದಿನೇಶ್ ಅವರು ನೀಡಿರುವ ಮಾಹಿತಿ ಪ್ರಕಾರ, ತನ್ನ ಮೇಲೆ ಪತ್ನಿ ಬಿಸಿ ಎಣ್ಣೆಯನ್ನು ಸುರಿದಿದ್ದಳು, ನಿದ್ದೆಯಲ್ಲಿದ್ದ ನನಗೆ ಏನಾಗುತ್ತಿದೆ ಎಂದು ತಿಳಿಯಲಿಲ್ಲ. ಕಣ್ಣುಬಿಟ್ಟಾಗ ಆಕೆ ಕಾರದ ಪುಡಿ ಹಿಡಿದು ನಿಂತಿದ್ದಳು. ಕಾರದ ಪುಡಿ ಎರಚಿದ್ದಾಳೆ, ಕೂಗಿಕೊಂಡರೆ ಮತ್ತಷ್ಟು ಸುರಿಯುವುದಾಗಿ ಬೆದರಿಕೆ ಹಾಕಿದ್ದಳು ಎಂದು ಹೇಳಿಕೊಂಡಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ