ಬೆಂಗಳೂರು: ಗರ್ಭಿಣಿ ನಾಯಿ ಮೇಲೆ ವಾಹನ ಹರಿಸಿ ಕ್ರೌರ್ಯ ಮೆರೆದ ಚಾಲಕ; ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಬೆಂಗಳೂರಿನಲ್ಲಿ ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿ ಕಳೆದ ತಿಂಗಳು 20 ನೇ ತಾರೀಕು ನಾಲ್ಕು ವರ್ಷದ ಗರ್ಭಿಣಿ ನಾಯಿಯ ಮೇಲೆ ಉದ್ದೇಶಪುರ್ವಕವಾಗಿ ವಾಹನ ಹರಿಸಿದ್ದು, ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿಯ ಹೊಟ್ಟೆಯಲ್ಲಿ 8 ಮರಿಗಳಿರುವುದು ಪತ್ತೆಯಾಗಿದೆ. ಪ್ರಾಣಿ ಪ್ರಿಯೆ ಶ್ವೇತಾ ಸಿಂಗ್ ರಿಂದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಚಾಲಕನ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದಾರ.
ಬೆಂಗಳೂರು, ಅಕ್ಟೊಬರ್ 8: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಇಂಡ್ಲಬೆಲೆ ಎನ್.ವಿ.ಟಿ ಮೆಜೆಸ್ಟಿಕ್ ಗಾರ್ಡನ್ ಮುಂಭಾಗದಲ್ಲಿ ರಸ್ತೆ ಬದಿ ಮಲಗಿದ್ದ ಬೀದಿನಾಯಿ ಮೇಲೆ ಟಾಟಾ ಏಸ್ ಹರಿಸಿ ಕ್ರೌರ್ಯ ಮೆರೆದಿದ್ದಾರೆ. ಕಳೆದ ತಿಂಗಳು 20 ನೇ ತಾರೀಖು ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಗರ್ಭಿಣಿ ನಾಯಿ ವಿಲ ವಿಲ ಅಂತ ಒದ್ದಾಡಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆಯಲ್ಲಿ ನಾಯಿಯ ಹೊಟ್ಟೆಯಲ್ಲಿ 8 ಮರಿಗಳಿರುವುದು ಪತ್ತೆಯಾಗಿದ್ದು, ಪ್ರಾಣಿ ಪ್ರಿಯೆ ಶ್ವೇತಾ ಸಿಂಗ್ ರಿಂದ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ದೂರು ನೀಡಿದ್ದರೂ ಚಾಲಕನ ಮೇಲೆ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published on: Oct 08, 2025 12:58 PM
